newsfirstkannada.com

ಟಿ20 ವಿಶ್ವಕಪ್​​.. ವಿರಾಟ್​ ಕೊಹ್ಲಿಗೆ ಮತ್ತೆ ಶಾಕ್​ ಕೊಟ್ಟ ಬಿಸಿಸಿಐ ಚೀಫ್​​ ಅಜಿತ್​​ ಅಗರ್ಕರ್​​

Share :

Published May 3, 2024 at 6:27pm

Update May 3, 2024 at 6:34pm

    ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್​​!

    ಆರ್​​ಸಿಬಿ ಪರ ಸ್ಟಾರ್​ ಬ್ಯಾಟರ್​​​ ವಿರಾಟ್​ ಕೊಹ್ಲಿ ಅದ್ಭುತ ಬ್ಯಾಟಿಂಗ್​ ಪ್ರದರ್ಶನ

    ಟಿ20 ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆದ್ರೂ ಕೊಹ್ಲಿಗೆ ಸ್ಟ್ರೈಕ್​ ರೇಟ್​ದೇ ಸಮಸ್ಯೆ

ಇತ್ತೀಚೆಗೆ ನಡೆದ ಇಂಡಿಯನ್​ ಪ್ರೀಮಿಯರ್​​ ಲೀಗ್​​ ರೋಚಕ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಗೆದ್ದು ಬೀಗಿತ್ತು. ಹೈದರಾಬಾದ್​​ ತಂಡವನ್ನು ತನ್ನ ತವರಿನಲ್ಲೇ ಕಟ್ಟಿ ಹಾಕಿ ಆರ್​​ಸಿಬಿ ಗೆಲುವು ಸಾಧಿಸಿತ್ತು.

ಇನ್ನು, ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸೋ ಮೂಲಕ ಆರ್​​ಸಿಬಿ ಮಾಜಿ ಕ್ಯಾಪ್ಟನ್​ ವಿರಾಟ್​​ ಆರ್​​ಸಿಬಿ ಗೆಲುವಿಗೆ ಕಾರಣರಾಗಿದ್ದರು. ಈ ಸೀಸನ್​ನಲ್ಲಿ ತಾನು ಆಡಿರೋ 10 ಪಂದ್ಯಗಳಲ್ಲಿ 4 ಅರ್ಧಶತಕ ಮತ್ತು 1 ಶತಕ ಸಿಡಿಸಿದ್ದಾರೆ. ಈ ಐಪಿಎಲ್‌ ಸೀಸನ್​ನಲ್ಲಿ ಅಜೇಯ 113* ರನ್‌ ವಿರಾಟ್‌ ಕೊಹ್ಲಿ ಬೆಸ್ಟ್‌ ನಾಕೌಟ್ ಆಗಿದೆ.

ಸದ್ಯ ಇಷ್ಟು ಅದ್ಭುತ ಪ್ರದರ್ಶನ ನೀಡುತ್ತಿರೋ ಕೊಹ್ಲಿ ಸ್ಟ್ರೈಕ್​ ರೇಟ್​ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಹೈದರಾಬಾದ್​ ವಿರುದ್ಧ ನಡೆದ ಪಂದ್ಯದಲ್ಲಿ ಕೊಹ್ಲಿ ಪವರ್​ ಪ್ಲೇನಲ್ಲಿ 18 ಎಸೆತಗಳಲ್ಲಿ 32 ರನ್‌ ಗಳಿಸಿ ಒಳ್ಳೇ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ ಹೊಂದಿದ್ದರು. ಈ ಪೈಕಿ 1 ಸಿಕ್ಸರ್​​, 4 ಫೋರ್​ ಸಿಡಿಸಿದ್ರು. ಆದರೆ 7-15 ಓವರ್‌ಗಳಲ್ಲಿ ಕೊಹ್ಲಿ ಒಂದು ಬೌಂಡರಿಗೆ ಕೈ ಹಾಕಲಿಲ್ಲ. ಕೊಹ್ಲಿ ತನ್ನ ಕೊನೆ 25 ಎಸೆತಗಳಲ್ಲಿ ಕೇವಲ 19 ರನ್‌ ಗಳಿಸಿದ್ರು. 43 ಬಾಲ್​ಗಳಲ್ಲಿ 51 ರನ್​ ಗಳಿಸಿದ್ದ ಕೊಹ್ಲಿ ಸ್ಟ್ರೈಕ್​ ರೇಟ್​ 119 ಇತ್ತು. ಹೀಗಾಗಿ ಇದು ಟಿ20 ವಿಶ್ವಕಪ್​​ಗೆ ಟೀಮ್​ ಇಂಡಿಯಾ ಮೇಲೆ ಪರಿಣಾಮ ಬೀರಲಿದ್ದು, ಕೊಹ್ಲಿಯನ್ನು ಭಾರತ ತಂಡಕ್ಕೆ ಆಯ್ಕೆ ಮಾಡಬೇಕಾ? ಬೇಡವೋ? ಅನ್ನೋದರ ಮಧ್ಯೆ ಬಿಸಿಸಿಐ ಟೀಮ್​ ಇಂಡಿಯಾ ಪ್ರಕಟಿಸಿದೆ. ಟಿ20 ವಿಶ್ವಕಪ್​​ಗೆ ಕೊಹ್ಲಿಯನ್ನು ಆಯ್ಕೆ ಮಾಡಿದ್ದಾರೆ.

ಇನ್ನು, ಕೊಹ್ಲಿ ಸ್ಟ್ರೈಕ್​ ರೇಟ್​ ಬಗ್ಗೆ ಟೀಮ್​ ಇಂಡಿಯಾ ಸೆಲೆಕ್ಷನ್​ ಕಮಿಟಿ ಮುಖ್ಯಸ್ಥ ಅಜಿತ್​ ಅಗರ್ಕರ್​​ ಶಾಕಿಂಗ್​ ಹೇಳಿಕೆ ನೀಡಿದ್ದಾರೆ. ಐಪಿಎಲ್​​ನಲ್ಲಿ ಕೊಹ್ಲಿ ಅದ್ಭುತ ಫಾರ್ಮ್​ನಲ್ಲಿದ್ದಾರೆ. ನಾವು ಕೊಹ್ಲಿ ಸ್ಟ್ರೈಕ್​ ರೇಟ್​ ಬಗ್ಗೆ ಮಾತಾಡೇ ಇಲ್ಲ. ಐಪಿಎಲ್​ಗೂ, ಟಿ20 ವಿಶ್ವಕಪ್​ಗೂ ಬಹಳ ವ್ಯತ್ಯಾಸ ಇದೆ. ಕೊಹ್ಲಿಗೆ ಎಲ್ಲಿ ಹೇಗೆ ಆಡಬೇಕು? ಎಂಬುದು ಗೊತ್ತಿದೆ. ಅವರ ಅನುಭವ ಮಾತ್ರ ಮ್ಯಾಟರ್​ ಆಗುತ್ತೆ ಎಂದರು.

ಅಷ್ಟೇ ಅಲ್ಲ, ಒಂದು ವೇಳೆ ಟಿ20 ವಿಶ್ವಕಪ್​ ಕೂಡ ಐಪಿಎಲ್​ ರೀತಿ ಆದ್ರೆ, ನಮ್ಮಲ್ಲಿ ಸಾಕಷ್ಟು ಒಳ್ಳೆ ಪ್ಲೇಯರ್ಸ್​ ಇದ್ದಾರೆ. ಎಲ್ಲರಿಂದ ಟೀಮ್​ ಬ್ಯಾಲೆನ್ಸ್​ ಆಗಲಿದೆ. ಕೊಹ್ಲಿ ಸ್ಟ್ರೈಕ್​ ರೇಟ್​ ಮ್ಯಾಟರ್​ ಆಗಲ್ಲ. ನಮ್ಮ ಬಳಿ ಹಲವು ಆಯ್ಕೆಗಳು ಇವೆ ಎಂದಿದ್ದಾರೆ. ಈ ಮೂಲಕ ಕೊಹ್ಲಿ ಆಡಿದ್ರೂ ಆಡದೆ ಹೋದ್ರೂ ನಮ್ಮ ಟೀಮ್​ ಇಂಡಿಯಾ ಬ್ಯಾಟರ್​ಗಳು ಗೆಲ್ಲಿಸುತ್ತಾರೆ ಅನ್ನೋ ರೀತಿಯಲ್ಲಿ ಶಾಕಿಂಗ್​ ಹೇಳಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ: T20 ವಿಶ್ವಕಪ್​​ನಿಂದ ಕೆ.ಎಲ್​​ ರಾಹುಲ್​​ ಕೈ ಬಿಡಲು ಕಾರಣವೇನು? ರೋಹಿತ್​​ ಹೇಳಿದ್ದು ಕೇಳಿದ್ರೆ ಶಾಕ್​ ಆಗ್ತೀರಾ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟಿ20 ವಿಶ್ವಕಪ್​​.. ವಿರಾಟ್​ ಕೊಹ್ಲಿಗೆ ಮತ್ತೆ ಶಾಕ್​ ಕೊಟ್ಟ ಬಿಸಿಸಿಐ ಚೀಫ್​​ ಅಜಿತ್​​ ಅಗರ್ಕರ್​​

https://newsfirstlive.com/wp-content/uploads/2024/05/Kohli_Team-India_1.jpg

Load More