newsfirstkannada.com

T20 ವಿಶ್ವಕಪ್​​ನಿಂದ ಕೆ.ಎಲ್​​ ರಾಹುಲ್​​ ಕೈ ಬಿಡಲು ಕಾರಣವೇನು? ರೋಹಿತ್​​ ಹೇಳಿದ್ದು ಕೇಳಿದ್ರೆ ಶಾಕ್​ ಆಗ್ತೀರಾ!

Share :

Published May 3, 2024 at 5:52pm

Update May 3, 2024 at 6:07pm

  ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ ಜೂನ್‌ ತಿಂಗಳಲ್ಲಿ ಟಿ20 ವಿಶ್ವಕಪ್​

  ಚುಟುಕು ಸಮರಕ್ಕೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ ಮಾಡಿದ ಬಿಸಿಸಿಐ!

  ಟೀಮ್​ ಇಂಡಿಯಾದಿಂದ ರಾಹುಲ್​ ಕೈ ಬಿಡಲು ಕಾರಣ ಬಿಚ್ಚಿಟ್ಟ ಅಗರ್ಕರ್​​

ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​ ಬೆನ್ನಲ್ಲೇ ಟಿ20 ವಿಶ್ವಕಪ್​​ ನಡೆಯಲಿದೆ. ಜೂನ್​​​ ತಿಂಗಳಲ್ಲಿ ವೆಸ್ಟ್​​ ಇಂಡೀಸ್​ ಮತ್ತು ಯುಎಸ್​​ನಲ್ಲಿ ನಡೆಯಲಿರೋ ಮೆಗಾ ಟೂರ್ನಿ ಐಸಿಸಿ ಟಿ20 ವಿಶ್ವಕಪ್​ಗೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟವಾಗಿದ್ದು, ಕನ್ನಡಿಗ ಕೆ.ಎಲ್ ರಾಹುಲ್ ಅವರಿಗೆ ಕೊಕ್​ ನೀಡಲಾಗಿದೆ. ಇನ್ನು, ಕೆ.ಎಲ್​​ ರಾಹುಲ್ ಅವರನ್ನು ತಂಡದಿಂದ ಕೈಬಿಟ್ಟಿದ್ದೇಕೆ ಎನ್ನುವ ಪ್ರಶ್ನೆಗೆ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್​​​ ಸ್ಪಷ್ಟನೆ ನೀಡಿದ್ದಾರೆ.

ಈ ಸಂಬಂಧ ಮಾತಾಡಿದ ಕ್ಯಾಪ್ಟನ್​ ರೋಹಿತ್​ ಶರ್ಮಾ ಮತ್ತು ಅಜಿತ್​ ಅಗರ್ಕರ್​​, ಸದ್ಯ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​​ ಲೀಗ್​​ನಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಪರ ಕೆ.ಎಲ್​ ರಾಹುಲ್​​ ಆರಂಭಿಕ ಬ್ಯಾಟರ್​ ಆಗಿ ಆಡುತ್ತಿದ್ದಾರೆ. ನಮಗೆ ಬೇಕಿರೋದು ಮಧ್ಯಮ ಕ್ರಮಾಂಕದ ವಿಕೆಟ್ ಕೀಪರ್ ಬ್ಯಾಟರ್‌. ಹೀಗಾಗಿ ರಾಹುಲ್‌ ಅವರನ್ನು ಕೈ ಬಿಟ್ಟು ರಿಷಭ್‌ ಪಂತ್‌ ಹಾಗೂ ಸಂಜು ಸ್ಯಾಮ್ಸನ್‌ ಅವರಿಗೆ ಸ್ಥಾನ ನೀಡಿದ್ದೇವೆ ಎಂದರು. ಈ ಮೂಲಕ ಎಲ್ಲಾ ವಿವಾದಗಳಿಗೂ ತೆರೆ ಎಳೆದರು.

ಈ ಹಿಂದೆ ತನ್ನನ್ನು ಟೀಮ್​ ಇಂಡಿಯಾದಿಂದ ಕೈ ಬಿಟ್ಟಿದ್ದಕ್ಕೆ ಸ್ಟಾರ್​ ಕ್ರಿಕೆಟರ್​​ ಕೆ.ಎಲ್​ ರಾಹುಲ್​ ಆಕ್ರೋಶ ಹೊರಹಾಕಿದ್ದರು. ಎಲ್ಲಾ ಪ್ರಶ್ನೆಗಳಿಗೂ ಮೌನವೇ ಉತ್ತರ, ಎಲ್ಲಾ ಸಂದರ್ಭಕ್ಕೂ ನಗುವೇ ಸರಿಯಾದ ಪ್ರತಿಕ್ರಿಯೆ ಎಂದು ಖಾರವಾಗಿ ಸ್ಟೇಟಸ್​ ಹಾಕಿದ್ದರು.

2024ರ ಟಿ20 ವಿಶ್ವಕಪ್‌ಗೆ ಭಾರತ ತಂಡ ಹೀಗಿದೆ..!

ರೋಹಿತ್‌ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ರಿಷಭ್‌ ಪಂತ್‌, ಸಂಜು ಸ್ಯಾಮ್ಸನ್‌, ಹಾರ್ದಿಕ್‌ ಪಾಂಡ್ಯ, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್‌, ಕುಲ್ದೀಪ್‌ ಯಾದವ್‌, ಯಜುವೇಂದ್ರ ಚಹಲ್‌, ಅರ್ಶ್‌ದೀಪ್‌ ಸಿಂಗ್‌, ಜಸ್‌ಪ್ರೀತ್‌ ಬೂಮ್ರಾ, ಮೊಹಮದ್‌ ಸಿರಾಜ್‌.

ಇದನ್ನೂ ಓದಿ: ಟೀಮ್​ ಇಂಡಿಯಾ ವಿರುದ್ಧ ಆಕ್ರೋಶ ಹೊರಹಾಕಿದ ಕನ್ನಡಿಗ ರಾಹುಲ್​​.. ಏನಂದ್ರು ಗೊತ್ತಾ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

T20 ವಿಶ್ವಕಪ್​​ನಿಂದ ಕೆ.ಎಲ್​​ ರಾಹುಲ್​​ ಕೈ ಬಿಡಲು ಕಾರಣವೇನು? ರೋಹಿತ್​​ ಹೇಳಿದ್ದು ಕೇಳಿದ್ರೆ ಶಾಕ್​ ಆಗ್ತೀರಾ!

https://newsfirstlive.com/wp-content/uploads/2024/01/KL-Rahul_IND.jpg

Load More