/newsfirstlive-kannada/media/post_attachments/wp-content/uploads/2024/05/akarshbyramudi.jpg)
ಧಾರಾವಾಹಿಯ ನಟ ನಟಿಯರಿಗೆ ಈ ವರ್ಷ ಕಲ್ಯಾಣ ಯೋಗ ಅಂತಾ ಕಾಣ್ಸುತ್ತೆ. ಮದುವೆಯ ಪವಿತ್ರ ಬಂಧನದಲ್ಲಿ ಹಲವು ಸೀರಿಯಲ್ ಸ್ಟಾರ್ಸ್ ಬಂಧಿಯಾಗುತ್ತಿದ್ದಾರೆ. ಈಗ ಆ ಸಾಲಿಗೆ ಸೀತಾವಲ್ಲಭ ನಟ ಕೂಡ ಸೇರ್ಪಡೆಯಾಗಿದ್ದು, ಪ್ರೇಮ ಖೈದಿ ಆಗಿದ್ದ ನಟ ಆಕರ್ಷ್ ಬೈರಮುಡಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.
ಹೌದು, ಸೀತಾವಲ್ಲಭ, ಲಕ್ಷ್ಮೀ ಬಾರಮ್ಮ ಸೇರಿದಂತೆ ಕನ್ನಡದಲ್ಲಿ ಹಲವು ಸೂಪರ್ ಹಿಟ್ ಧಾರಾವಾಹಿಗಳಲ್ಲಿ ನಾಯಕ ನಟನಾಗಿ ಗಮನ ಸೇಳಿದಿದ್ದ ನಟ ಆಕರ್ಷ್ ಬೈರಮುಡಿ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹು ದಿನದ ಜೀವದ ಗೆಳತಿಯಾಗಿದ್ದ ಐಶ್ವರ್ಯ ಅವರ ಜೊತೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇದನ್ನೂ ಓದಿ: ಪಶು ವೈದ್ಯರು ಕೊಟ್ಟ ಗುದ್ದಿಗೆ ಜ್ವರದಿಂದ ಬಳಲ್ತಿದ್ದ ವ್ಯಕ್ತಿ ಸಾವು ಆರೋಪ.. ಸಾವು ತಂದ ಆತ್ಮೀಯತೆ..!
ಕನ್ನಡದಿಂದ ತೆಲುಗು, ತಮಿಳು ಭಾಷೆಗಳಿಗೆ ಪರಿಚಿತರಾದ ಆಕರ್ಷ್ಗೆ ಉತ್ತಮ ಅವಕಾಶಗಳು ಒದಗಿಬಂದವು. ತೆಲುಗಿನಲ್ಲಿ ಯಶಸ್ವಿ, ಜನಪ್ರಿಯ ನಟನಾಗಿ ಗುರುತಿಸಿಕೊಂಡಿದ್ದಾರೆ. ತೆಲುಗು ವೀಕ್ಷಕರ ನೆಚ್ಚಿನ ನಟ ಆಕರ್ಷ್. ಸಾಂಪ್ರದಾಯಕ ಶೈಲಿಯಲ್ಲಿ ಮದುವೆ ಶಾಸ್ತ್ರಗಳು ಜರುಗಿದ್ದು, ನಟಿ ದೀಪಾ ಮಾನೆ, ನಟ, ನಿರೂಪಕ ಪ್ರದೀಪ್ ಮಾಚಿರಾಜು ಸೇರಿದಂತೆ ಮೂರು ಭಾಷೆಯ ಕಲಾವಿದರು ಭಾಗಿ ಆಗಿ ನವಜೋಡಿಗೆ ಶುಭಕೊರಿದ್ದಾರೆ.
View this post on Instagram
ಆಕರ್ಷ್ ಕೈಹಿಡಿದಿರೋ ಚಲುವೆ ಐಶ್ವರ್ಯ ಮೂಲತಃ ಮೈಸೂರಿನವರು. ಇಬ್ಬರದ್ದು ಲಾಂಗೇಷ್ಟು ಲವ್ ಸ್ಟೋರಿ. ಸದ್ಯ ಗುರುಹಿರಿಯರ ಸಮ್ಮುಖದಲ್ಲಿ ಬಾಳ ಸಂಗಾತಿ ಆಗಿದ್ದಾರೆ. ಸದ್ಯ ಈ ಮದುವೆಯ ಫೋಟೋಗನ್ನು ನಟ ಆಕರ್ಷ್ ಬೈರಮುಡಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಈ ಫೋಟೋ ನೋಡಿದ ಅಭಿಮಾನಿಗಳು ಹೊಸ ದಂಪತಿಗೆ ಶುಭ ಹಾರೈಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ