Advertisment

ಮಹಿಳಾ ಸಾಧಕಿ ಪ್ರಶಸ್ತಿ ಪಡೆದ ಬಳಿಕ ಗಳಗಳನೇ ಕಣ್ಣೀರಿಟ್ಟ 'ಕನ್ನಡತಿ ಅಕ್ಕ ಅನು'.. ಆಗಿದ್ದೇನು?

author-image
Veena Gangani
Updated On
ಮಹಿಳಾ ಸಾಧಕಿ ಪ್ರಶಸ್ತಿ ಪಡೆದ ಬಳಿಕ ಗಳಗಳನೇ ಕಣ್ಣೀರಿಟ್ಟ 'ಕನ್ನಡತಿ ಅಕ್ಕ ಅನು'.. ಆಗಿದ್ದೇನು?
Advertisment
  • ಕೆಟ್ಟ ಕೆಟ್ಟದಾಗಿ ಕಾಮೆಂಟ್​ ಮಾಡಿ ನನಗೆ ಹಿಂಸೆ ಕೊಡುತ್ತಿದ್ದಾರೆ- ಅಕ್ಕ ಅನು
  • ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಅನು ಅತ್ತಿದ್ದೇಕೆ?
  • ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು ಅನು ಅಕ್ಕನ ವಿಡಿಯೋ

ಕೆಚ್ಚೆದೆಯ ಕನ್ನಡತಿ 'ಅಕ್ಕ ಅನು' ಯಾರಿಗೆ ಗೊತ್ತಿಲ್ಲ ಹೇಳಿ. ಸೋಷಿಯಲ್​ ಮೀಡಿಯಾ ಬಳಕೆದಾರರು ಇವರನ್ನು ನೋಡಿರುತ್ತಾರೆ. ಒಂದಲ್ಲಾ ಒಂದು ವಿಚಾರಕ್ಕೆ ಅಕ್ಕ ಅನು ಸುದ್ದಿಯಲ್ಲಿ ಇರುತ್ತಿದ್ದರು. ಸರ್ಕಾರಿ ಶಾಲೆ, ದೇವಾಲಯ ಸೇರಿದಂತೆ ಇತರೆ ಪಾರಂಪರಿಕ ತಾಣಗಳಿಗೆ ಹೋಗಿ ಸ್ವಚ್ಛತೆ ಮತ್ತು ಪುನರುಜ್ಜೀವನ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಬಗ್ಗೆ ಹಲವು ವಿಡಿಯೋಗಳನ್ನು ಸಹ ಅಕ್ಕ ಅನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಅನು ಅವರು ಮಾಡುವ ಕೆಲಸಕ್ಕೆ ಸಾಕಷ್ಟು ಜನರು ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದರು.

Advertisment

publive-image

ಆದರೆ ಇಷ್ಟೇಲ್ಲಾ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಅಕ್ಕ ಅನು ಅವರು ತಮ್ಮ ಫೇಸ್​ ಬುಕ್​ ಲೈವ್​​ಗೆ ಬಂದು ಅತ್ತಿದ್ದಾರೆ. ಇನ್ನು ಆ ವಿಡಿಯೋದಲ್ಲಿ ಅಕ್ಕ ಅನು ಅವರು ಗಳಗಳನೇ ಕಣ್ಣೀರು ಹಾಕಿದ್ದಾರೆ, ಹೌದು ಯಾರಿಂದಲೂ ಸಹಾಯ, ಮೆಚ್ಚುಗೆ ಅಪೇಕ್ಷಿಸದೇ ಕೆಚ್ಚೆದೆಯ ಕನ್ನಡತಿಯಾಗಿ ಸೇವೆ ಸಲ್ಲಿಸಿದ್ದ ಅಕ್ಕ ಅನು ಅವರು ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿ ಇನ್ನೊಬ್ಬರ ಮನಸ್ಥಿತಿಯನ್ನು ಹಾಳು ಮಾಡಬೇಡಿ ಎಂದು ಗಳಗಳನೇ ಅತ್ತು ಮನವಿ ಮಾಡಿಕೊಂಡಿದ್ದಾರೆ.

ಇದನ್ನು ಓದಿ: BREAKING: ಬಿಗ್​ಬಾಸ್​ ಸ್ಪರ್ಧಿ ತುಕಾಲಿ ಸಂತೋಷ್​ ಪ್ರಯಾಣಿಸುತ್ತಿದ್ದ ಕಾರಿಗೆ ಅಪಘಾತ

ವಿಡಿಯೋದಲ್ಲಿ ಏನಿದೆ? 

ನಾನು ರಾಜ್ಯದ ಮೂಲೆ ಮೂಲೆಯಲ್ಲಿ ಶಾಲೆಗೆ ಹೋಗಿ ಸ್ವಚ್ಛತೆ ಮಾಡುವುದು ಬಣ್ಣ ಬಳಿಯುವುದು ಮಾಡುತ್ತಿದ್ದೆ. ಕೀರ್ತಿ ಶನಿ ಬೆನ್ನು ಬಿದ್ದರೆ ನಾವು ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ, ಒಳ್ಳೆಯದಾಗಿ ಬದುಕಿದರೂ ಕೆಟ್ಟದಾಗಿಯೇ ಮಾತನಾಡುವವರು ಹೆಚ್ಚಾಗುತ್ತಾರಂತೆ. ನಾನು ಪ್ರಶಸ್ತಿ ಸ್ವೀಕಾರ ಕಾರ್ಯಕ್ರಮಕ್ಕೆ ಹೋದಾಗ ಗೆಸ್ಟ್ ಟೀಚರ್‌ಗಳು ಅದೇನು ಪಾಠ ಮಾಡ್ತಾರೋ, ಕಾಯಂ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಮಾತನಾಡಿದ್ದೇನೆ. ಆದರೆ ಇದನ್ನು ಕೆಲವರು ಕೆಟ್ಟದಾಗಿ ತಿಳಿದುಕೊಂಡ ರಾಜ್ಯದ ಅತಿಥಿ ಶಿಕ್ಷಕರು ಅನಾಗರೀಕರಂತೆ ಕೆಲವು ಸಂದೇಶಗಳನ್ನು ಕಳಿಸಿದ್ದಾರೆ.

Advertisment

ಖಾಸಗಿ ಸುದ್ದಿ ವಾಹಿನಿ 'ವರ್ಷದ ಕನ್ನಡಿಗ ಪ್ರಶಸ್ತಿ' ಹಾಗೂ ಜೀ ಕನ್ನಡದಿಂದ 'ಸ್ತ್ರೀ ಅವಾರ್ಡ್‌' ಪ್ರಶಸ್ತಿಯನ್ನು ಪಡೆದಿದ್ದೇನೆ. ಪ್ರಶಸ್ತಿ ಸ್ವೀಕಾರ ಮಾಡಿದ ನಂತರ ನನಗೆ ತುಂಬಾ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಪ್ರಶಸ್ತಿಗಾಗಿಯೇ ಕೆಲಸ ಮಾಡಿದ್ದೇನೆ ಎಂದಿದ್ದಾರೆ. ನಮ್ಮ ಬಗ್ಗೆ ಅಷ್ಟೊಂದು ಕೀಳಾಗಿ ಮಾಡುವಂತಹ ತಪ್ಪು ನಾನೇನು ಮಾಡಿದ್ದೇನೆ. ಇನ್ನು ಟ್ರೋಲಿಗರು ನಮ್ಮ ಬಗ್ಗೆ ಕೆಟ್ಟದಾಗಿ ಟ್ರೋಲ್‌ ಮಾಡಿ ಇನ್ನೊಬ್ಬರಿಗೆ ತಪ್ಪು ಸಂದೇಶ ಸಾರುತ್ತಿದ್ದಾರೆ. ನೀವು ನಿಮ್ಮ ಜೀವನ ನೋಡಿಕೊಳ್ಳಿ. ಇನ್ನೊಬ್ಬರ ಜೀವನ ಹಾಳು ಮಾಡುವ ಕೆಲಸ ಮಾಡಬೇಡಿ. ಕೆಲ ಜನರು ನನ್ನ ಹೆಸರಿನಲ್ಲಿ ಫೇಕ್ ಅಕೌಂಟ್​ಗಳನ್ನು ಕ್ರಿಯೇಟ್ ಮಾಡಿಕೊಂಡು ನನ್ನ ಹೆಸರಿಗೆ ಧಕ್ಕೆ ಉಂಟು ಮಾಡುವಂತಹ ಪೋಸ್ಟ್​ಗಳನ್ನ ಹಾಕುತ್ತಿದ್ದಾರೆ. ಇದರಿಂದ ನನಗೆ ಮಾನಸಿಕ ಹಿಂಸೆ ಆಗುತ್ತಿದೆ. ನಮ್ಮ ಪಾಡಿಗೆ ನಾವು ಇದ್ದು ಸಮಾಜದಿಂದ ಸಂಪೂರ್ಣವಾಗಿ ದೂರ ಉಳಿದುಕೊಂಡು ಜೀವನ ಮಾಡುತ್ತೇವೆ. ನನ್ನಿಂದ ಯಾವುದಾರೂ ಕೆಟ್ಟ ಸಂದೇಶ ಸಮಾಜಕ್ಕೆ ಹೋಗುತ್ತಿದ್ದೀಯಾ ಹೇಳಿ ಎಂದು ಹೇಳುತ್ತಾ ಅತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment