newsfirstkannada.com

ಯೋಗ್ಯತೆ ಇದ್ರೆ ಬನ್ರೋ.. ರೊಚ್ಚಿಗೆದ್ದ ಕೆಚ್ಚೆದೆಯ ಕನ್ನಡತಿ ಅಕ್ಕ ಅನು; ಏಕಾಏಕಿ ಹೀಗೆ ಸಿಟ್ಟಾಗಿದ್ದೇಕೆ?- ವಿಡಿಯೋ

Share :

Published May 25, 2024 at 8:20pm

Update May 25, 2024 at 8:22pm

    ಕರ್ನಾಟಕದಲ್ಲಿ ಏನಾದರೂ ಮಾಡಬೇಕಾದರೇ ಆ ಒಂದು ಅಂಶ ಬೇಕು!

    ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ ಕನ್ನಡತಿ ಅಕ್ಕ ಅನು ವಿಡಿಯೋ

    ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಕೆಚ್ಚೆದೆಯ ಕನ್ನಡತಿ

ಕೆಚ್ಚೆದೆಯ ಕನ್ನಡತಿ ‘ಅಕ್ಕ ಅನು’ ಯಾರಿಗೆ ಗೊತ್ತಿಲ್ಲ ಹೇಳಿ. ಸೋಷಿಯಲ್​ ಮೀಡಿಯಾ ಬಳಕೆದಾರರು ಇವರನ್ನು ನೋಡಿರುತ್ತಾರೆ. ಒಂದಲ್ಲಾ ಒಂದು ವಿಚಾರಕ್ಕೆ ಅಕ್ಕ ಅನು ಸುದ್ದಿಯಲ್ಲಿ ಇರುತ್ತಾರೆ. ಸರ್ಕಾರಿ ಶಾಲೆ, ದೇವಾಲಯ ಸೇರಿದಂತೆ ಇತರೆ ಪಾರಂಪರಿಕ ತಾಣಗಳಿಗೆ ಹೋಗಿ ಸ್ವಚ್ಛತೆ ಮತ್ತು ಪುನರುಜ್ಜೀವನ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾ ಇರುತ್ತಾರೆ. ಈ ಬಗ್ಗೆ ಹಲವು ವಿಡಿಯೋಗಳನ್ನು ಸಹ ಅಕ್ಕ ಅನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಆದರೆ ಇದೀಗ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಅಕ್ಕ ಅನು ಅವರು ಕೆಲವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಹೀಗೆ ಯಾವಾಗಲೂ ಸರ್ಕಾರಿ ಶಾಲೆಯನ್ನು ಉಳಿಸಬೇಕು, ಜೊತೆಗೆ ಬೆಳಸಬೇಕು ಅಂತ ರಾಜ್ಯದ ಮೂಲೆ ಮೂಲೆಗೂ ಸಂಚಾರ ಮಾಡುತ್ತಾ ಇರುತ್ತಾರೆ. ಶಾಲೆಯನ್ನು ಸ್ವಚ್ಛವಾಗಿ ಇಟ್ಟು ಮತ್ತೆ ಅದಕ್ಕೆ ಪುನರುಜ್ಜೀವನ ನೀಡುತ್ತಾರೆ. ಹೀಗೆ ಮಾಡಿದರೆ ಸರ್ಕಾರಿ ಶಾಲೆಗಳಿಗೆ ಇನ್ನೂ ಹೆಚ್ಚೆಚ್ಚು ಪ್ರಮಾಣದಲ್ಲಿ ಮಕ್ಕಳು ಬಂದು ಚೆನ್ನಾಗಿ ಓದುತ್ತಾರೆ ಎಂಬ ಭಾವನೆ ಅಕ್ಕ ಅನು ಅವರದ್ದು. ಹೀಗೆ 50 ವರ್ಷದ ಹಳೆಯ ಶಾಲೆಗೆ ಹೋಗಿದ್ದ ಅಕ್ಕ ಅನು ಅಲ್ಲಿನ ಪರಿಸ್ಥಿತಿ ಬಗ್ಗೆ ಬೇಸರ ಹೊರ ಹಾಕಿದ್ದಾರೆ.

ಇದನ್ನೂ ಓದಿ: BREAKING: ಅಯೋಧ್ಯೆಯಲ್ಲಿ ಭೀಕರ ರಸ್ತೆ ಅಪಘಾತ; ಕರ್ನಾಟಕ ಮೂಲದ ಮೂವರು ದಾರುಣ ಸಾವು

50 ವರ್ಷಯ ಹಳೆಯ ಶಾಲೆ ಇದು. ನಮ್ಮಂತ ಬಡ ಮಕ್ಕಳು ಕಲಿಯುವಂತಹ ಶಾಲೆ ಹಾಳಾಗಿ ಬಿಟ್ರೆ ಹೇಗೆ. ತುಂಬಾ ಜನರು ಹಳ್ಳಿಗಳಲ್ಲಿ ವಾಸ ಮಾಡುತ್ತಿದ್ದಾರೆ. ಇಂತಹ ಹಳ್ಳಿಗಳಲ್ಲೇ ಶಿಕ್ಷಣ ಇಲ್ಲ ಅಂದ್ರೆ ಹೇಗೆ. ಮೊನ್ನೆ ಮೊನ್ನೆ ನಾನು ಶಾಲೆ ಬಗ್ಗೆ ಮಾತಾಡಿದ್ದೇ ಅಂತ ಅದೆಷ್ಟೋ ಜನ ಪ್ರಶ್ನೆ ಕೇಳಿದ್ರಿ. ಆದರೆ ಈ ಶಾಲೆ ಬಗ್ಗೆ ನೀವು ಏಕೆ ಧ್ವನಿ ಎತ್ತುತ್ತಿಲ್ಲ. ಹೋಗಿ ಸರ್ಕಾರಕ್ಕೆ ಹೋಗಿ ಶಾಲೆ ಬಗ್ಗೆ ಪ್ರತಿಭಟನೆ ಮಾಡಿ. ನಿಮಗೆ ಯೋಗ್ಯತೆ ಇದೆ ಅಲ್ವಾ? ಕಾಮೆಂಟ್​ ಮಾಡಿ ನನಗೆ ಪ್ರಶ್ನೆ ಮಾಡುತ್ತೀರಾ ಅಲ್ವಾ? ಈಗ ಮಾಡಿ. ಬನ್ನಿ ನೀವು ನನ್ನ ಜೊತೆ ಕ್ರಾಂತಿಕಾರಿಗಳಾಗಿ ಅಂತ ಹೇಳಿದ್ರು. ಇನ್ನು ಹೀಗೆ ಮಾತನ್ನು ಮುಂದುವರೆಸಿದ ಅವರು, ಏನೋ ನಾವು ಚಿಕ್ಕ ಪುಟ್ಟ ಕೆಲಸ ಮಾಡುತ್ತಾ ಇದ್ರೆ ಅದಕ್ಕೂ ಬಂದು ಹಾಳು ಮಾಡುತ್ತೀರಾ. ಬನ್ನಿ ನನ್ನ ಜೊತೆ ಕರ್ನಾಟಕ ಮೂಲೆ ಮೂಲೆಯಲ್ಲಿರೋ ಶಾಲೆಗಳ ಪರಿಸ್ಥಿತಿ ಬಗ್ಗೆ ತಿಳಿದುಕೊಳ್ಳಿ. ಶಾಲೆಗಳಲ್ಲಿ ಏನೆಲ್ಲಾ ಸಮಸ್ಯೆಗಳು, ವ್ಯವಸ್ಥೆಗಳು ಅಂತ ನೋಡಿ ಅಂತ ಹರಿಹಾಯ್ದಿದ್ದಾರೆ.

ಇನ್ನು ಇದೇ ವಿಡಿಯೋ ನೋಡಿದ ನೆಟ್ಟಿಗರು, ಎಲ್ಲದಕ್ಕೂ ಕಾರಣ ರಾಜಕೀಯ ಸಂಪೂರ್ಣ ಬದಲಾವಣೆ ಸಂಪೂರ್ಣ ಪರಿಹಾರ ಒಂದೇ ಮಾರ್ಗ ಅದೇ ಪ್ರಜಾಕೀಯ, ಕೆಲವು ಒಬ್ಬರು ವಿಚಿತ್ರವಾಗಿ ಕಮೆಂಟ್ ಹಾಕ್ತಿರಾ ಅಲ್ವಾ? ಈಗ ಅನು ಅಕ್ಕ ಕೇಳ್ತಾ ಇರೋ ಪ್ರಶ್ನೆಗೆ ಉತ್ತರ ಕೊಡಿ. ಅಕ್ಕ ನಿಮ್ ಕೆಲಸ ಮುಂದುವರೆಸಿ ನಿಮ್ ಕೆಲಸಕ್ಕೆ ನಮ್ ಸಪೋರ್ಟ್ ಯಾವಾಗ್ಲೂ ಇರುತ್ತೆ ಅಂತ ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯೋಗ್ಯತೆ ಇದ್ರೆ ಬನ್ರೋ.. ರೊಚ್ಚಿಗೆದ್ದ ಕೆಚ್ಚೆದೆಯ ಕನ್ನಡತಿ ಅಕ್ಕ ಅನು; ಏಕಾಏಕಿ ಹೀಗೆ ಸಿಟ್ಟಾಗಿದ್ದೇಕೆ?- ವಿಡಿಯೋ

https://newsfirstlive.com/wp-content/uploads/2024/05/akka-anu7.jpg

Load More