/newsfirstlive-kannada/media/post_attachments/wp-content/uploads/2024/09/Anchore-Prathibha-gowda.jpg)
ವರ್ಜಿನಿಯಾ: ಅಮೆರಿಕಾದ ವರ್ಜಿನಿಯಾದಲ್ಲಿ ನಡೆಯುತ್ತಿರುವ 12ನೇ ಅಕ್ಕ ವಿಶ್ವ ಸಮ್ಮೇಳನದಲ್ಲಿ ಪ್ರಮುಖ ಆಕರ್ಷಣೆಯಾಗಿ ಕಂಡಿದ್ದು ಈ ಮೂರು ದಿನಗಳ ಕಾಲ ಸಮ್ಮೇಳನದ ನಿರೂಪಣೆ ಮಾಡಿದ ಪ್ರತಿಭಾ ಗೌಡ. ಕಾರ್ಯಕ್ರಮಗಳ ನಿರೂಪಣೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಪ್ರತಿಭಾ ಗೌಡ, ಈ ವೃತ್ತಿಯಲ್ಲಿ ನಡೆದು ಬಂದ ದಾರಿಯೇ ಅನನ್ಯ.
ಅಮೆರಿಕಾದ ಕನ್ನಡ ಕೂಟಗಳ ಒಕ್ಕೂಟ ಅಂದ್ರೆ ಅಕ್ಕ ಪ್ರತಿ ವರ್ಷ ನಡೆಸುವ ವಿಶ್ವ ಸಮ್ಮಳನವೇ ಒಂದು ಅದ್ಧೂರಿ ಕಾರ್ಯಕ್ರಮ. ಅಲ್ಲಿ ಅತಿಥಿಯಾಗಿ ಹೋಗುವುದು ಆಹ್ವಾನಿತರಾಗಿ ಹೋಗುವುದೇ ಒಂದು ಹೆಮ್ಮೆಯ ವಿಷಯ. ಅಂತಹ ಅದ್ಧೂರಿ ಕಾರ್ಯಕ್ರಮದ ನಿರೂಪಣೆಗಾಗಿ ಈಗ ಅಮೆರಿಕಾಗೆ ತೆರಳಿದ್ದಾರೆ ಎರಡು ವರ್ಷಕ್ಕೊಮ್ಮೆ ನಡೆಯುವ ಈ ಕಾರ್ಯಕ್ರಮಕ್ಕೆ ಪ್ರತಿಭಾ ಗೌಡ ಅವರು ನಿರೂಪಕಿಯಾಗಿದ್ದಾರೆ.
ಇದನ್ನೂ ಓದಿ:ಹೊಸ ಲುಕ್ನಲ್ಲಿ ಬಿಗ್ಬಾಸ್ ಖ್ಯಾತಿಯ ಕಿಶನ್; ಫ್ಯಾನ್ಸ್ಗೆ ಶುಭಸುದ್ದಿ ಕೊಡ್ತಾರಾ?
ಮೂಲತಃ ಬೆಂಗಳೂರಿನವರೇ ಆದ ಪ್ರತಿಭಾ ಗೌಡ, ಶಾಲಾ ಕಾಲೇಜು ದಿನಗಳಲ್ಲಿಯೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಹಾಗೂ ನಿರೂಪಣೆ ಮಾಡುವುದನ್ನು ರೂಢಿಸಿಕೊಂಡು ಬಂದವರು. ಅದೇ ಹಾದಿಯಲ್ಲಿ ಸಾಗಲು ಅವರ ತಾಯಿ ನೀಡಿದ ಪ್ರೋತ್ಸಾಹದಿಂದ ಈಗ ಈ ಮಟ್ಟಕ್ಕೆ ಬೆಳೆದಿದ್ದಾರೆ. ಆಡಿಯೋ ಲಾಂಚ್ನಿಂದ ಹಿಡಿದು ಮುಖ್ಯಮಂತ್ರಿಗಳ ಕಾರ್ಯಕ್ರಮಗಳವರೆಗೆ ನಿರೂಪಣೆ ಮಾಡಿದ ಖ್ಯಾತಿ ಪ್ರತಿಭಾ ಗೌಡರಿಗಿದೆ. ಇಲ್ಲಿಯವರೆಗೂ ಒಟ್ಟು 2 ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳ ನಿರೂಪಣೆ ಮಾಡಿದ್ದಾರೆ. ನಿರರ್ಗಳವಾಗಿ ಕನ್ನಡ ಮಾತನಾಡಬಲ್ಲ ಪ್ರತಿಭಾಗೌಡ ಅಷ್ಟೇ ಸರಳವಾಗಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿಯೂ ಸಹ ಹಿಡಿತ ಸಾಧಿಸಿದ್ದಾರೆ. ಇತ್ತೀಚೆಗೆ ಬ್ಯಾಂಕಾಕ್ನಲ್ಲಿ ನಡೆದ ಜಿಟಿವಿ ವರ್ಲ್ಡ್ ಸಮಿತ್ನಲ್ಲಿ ಬೆಸ್ಟ್ ಆ್ಯಂಕರ್ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.
ಇದನ್ನೂ ಓದಿ:ಅಮೆರಿಕಾದಲ್ಲಿ ಸಂಭ್ರಮದ ಅಕ್ಕ ವಿಶ್ವ ಸಮ್ಮೇಳನ; ವರ್ಜಿನಿಯಾದಲ್ಲಿ ಹೇಗಿದೆ ಕನ್ನಡ ಕಲರವ?
ಕೇವಲ ರಾಜ್ಯ ದೇಶಗಳಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿ ನಡೆಯುವ ಕಾರ್ಯಕ್ರಮಗಳ ನಿರೂಪಣೆಗೆ ಪ್ರತಿಭಾ ಗೌಡ ಹೋಗುತ್ತಾರೆ. ಅದಕ್ಕೆ ದೊಡ್ಡ ನಿದರ್ಶನವಾಗಿ ಈಗ ಅಕ್ಕ ಸಮ್ಮೇಳನದ ನಿರೂಪಣೆ ನಿಂತಿದೆ. ಅವರು ಒಟ್ಟು 10 ದೇಶಗಳಿಗೆ ಕಾರ್ಯಕ್ರಮಗಳ ನಿರೂಪಣೆಗೆ ತೆರಳಿದ್ದಾಗಿ ಹೇಳಿಕೊಂಡಿದ್ದಾರೆ. ಅಮೆರಿಕಾ, ಆಸ್ಟ್ರೇಲಿಯಾ, ಸಿಂಗಾಪೂರ್, ಮಲೇಷಿಯಾ, ಬ್ಯಾಂಕಾಕ್, ಥೈಲ್ಯಾಂಡ್, ಶ್ರೀಲಂಕಾ ಓಮನ್ ದುಬೈ ಸೇರಿ ಹಲವು ದೇಶಗಳಲ್ಲಿ ಕನ್ನಡಿಗರಿಂದ ಇವರಿಗೆ ನಿರೂಪಣೆ ಮಾಡುವಂತೆ ಆಹ್ವಾನ ಬರುತ್ತವೆ. ಬೆಂಗಳೂರಿನಲ್ಲಿ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದ ಹುಡುಗಿ ಈಗ ಕಾರ್ಯಕ್ರಮ ನಿರೂಪಣೆ ಕ್ಷೇತ್ರದಲ್ಲಿ ಇಷ್ಟು ದೊಡ್ಡ ಹೆಸರು ಮಾಡಿದ್ದು ನಿಜಕ್ಕೂ ದೊಡ್ಡ ಸಾಧನೆಯೇ ಸರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ