/newsfirstlive-kannada/media/post_attachments/wp-content/uploads/2024/07/AKSHATHA-MURTHY.jpg)
- ಬ್ರಿಟನ್ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷಕ್ಕೆ ಸೋಲು
- ಸೋಲಿನ ಬೆನ್ನಲ್ಲೇ ರಾಜೀನಾಮೆ ನೀಡಿರುವ ರಿಷಿ ಸುನಕ್
- ಅಕ್ಷತಾ ಮೂರ್ತಿ ಧರಿಸಿದ್ದ ಡ್ರೆಸ್ನ ಬೆಲೆ ಎಷ್ಟು ಗೊತ್ತಾ..?
ಬ್ರಿಟನ್ ಪಾರ್ಲಿಮೆಂಟ್​ ಚುನಾವಣೆಯಲ್ಲಿ ರಿಷಿ ಸುನಕ್​​​ ನೇತೃತ್ವದ ಕನ್ಸರ್ವೇಟಿವ್ (Conservative Party) ಪಕ್ಷಕ್ಕೆ ಹೀನಾಯ ಸೋಲು ಆಗಿದೆ. ಬೆನ್ನಲ್ಲೇ ಪ್ರಧಾನಿ ಹುದ್ದೆಯನ್ನು ತೊರೆದಿರುವ ರಿಷಿ ಸುನಕ್​​, ಲಂಡನ್​ನ ಡೌನಿಂಗ್ ಸ್ಟ್ರೀಟ್​​ನಲ್ಲಿ (Downing Street) ವಿದಾಯದ ಭಾಷಣ ಮಾಡಿದರು. ಈ ವೇಳೆ ಸುನಕ್ ಪತ್ನಿ ಅಕ್ಷತಾ ಮೂರ್ತಿ ಭಾಗಿಯಾಗಿದ್ದರು, ಇದೀಗ ಅವರು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದಾರೆ.
ಇದನ್ನೂ ಓದಿ:ಸೋಲಿನ ಬೆನ್ನಲ್ಲೇ I am sorry ಎಂದ ಸುನಕ್.. ನೂತನ ಪ್ರಧಾನಿಯಿಂದ ಬಸವಣ್ಣನಿಗೆ ಗೌರವ ಸಲ್ಲಿಕೆ
ರಿಷಿ ಸುನಕ್ ಭಾಷಣದ ವೇಳೆ ಅಕ್ಷತಾ ಮೂರ್ತಿ ತಮ್ಮ ಪತಿಯ ಹಿಂದೆ ನಿಂತಿದ್ದರು. ಈ ವೇಳೆ ಅವರು ಧರಿಸಿದ್ದ ಡ್ರೆಸ್​​ ಭಾರೀ ಚರ್ಚೆಗೆ ಗ್ರಾಸವಾಗಿದೆ. ಬ್ಲ್ಯೂ, ವೈಟ್ ಮತ್ತು ರೆಡ್​ ಪ್ಯಾಟರ್ನ್​​​ ಡ್ರೆಸ್​​ ಅನ್ನು ಅಕ್ಷತಾ ಧರಿಸಿದ್ದರು. ಜೊತೆಗೆ ಒಂದು ಛತ್ರಿಯನ್ನು ಹಿಡಿದುಕೊಂಡು ತುಂಬಾ ಗಂಭೀರವಾಗಿ ನಿಂತಿದ್ದರು. ಅವರು ಧರಿಸಿದ್ದ ಡ್ರೆಸ್​​ ನೋಡಿದ ನೆಟ್ಟಿಗರು, ತಮ್ಮದೇ ಶೈಲಿಯಲ್ಲಿ ಕಾಮೆಂಟ್ ಮಾಡ್ತಿದ್ದಾರೆ.
ಕೆಲವರು ಅವರು ಧರಿಸಿದ್ದ ಬಟ್ಟೆಯ ಬಣ್ಣಗಳ ಬಗ್ಗೆ ಮಾತನಾಡಿದ್ರೆ, ಇನ್ನು ಕೆಲವರು ಡ್ರೆಸ್​​ನ ಮಾದರಿಯ ಬಗ್ಗೆ ಗೇಲಿ ಮಾಡಿದ್ದಾರೆ. ಇನ್ನೂ ಕೆಲವರು ಅವರ ಡ್ರೆಸ್​​ ಸೆನ್ಸ್​ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಅಂದ್ಹಾಗೆ ಅಕ್ಷತಾ ಮೂರ್ತಿ ಧರಿಸಿದ್ದ ಡ್ರೆಸ್​​ನ ಬೆಲೆ 42 ಸಾವಿರ ರೂಪಾಯಿ ಆಗಿದೆ ಎಂದು ವರದಿಯಾಗಿದೆ.
Akshata Murty (serious face) standing behind her husband @RishiSunak in a red, white & blue dress holding an umbrella as he weasels his way out of Downing Street is the stuff of a million memes. pic.twitter.com/7EaIUyucWT
— JJ Hunsecker (@tvproduceruk) July 5, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ