ಆಲಿಯಾ ಭಟ್​​ಗೆ ಇದ್ಯಾ ಈ ಮನೋರೋಗ? ಮದುವೆಯ ವೇಳೆ ಮೇಕಪ್​ ಮ್ಯಾನ್​ಗೆ ಬಿಗ್​ ಶಾಕ್​!

author-image
Gopal Kulkarni
Updated On
ಆಲಿಯಾ ಭಟ್​​ಗೆ ಇದ್ಯಾ ಈ ಮನೋರೋಗ? ಮದುವೆಯ ವೇಳೆ ಮೇಕಪ್​ ಮ್ಯಾನ್​ಗೆ ಬಿಗ್​ ಶಾಕ್​!
Advertisment
  • ಬಾಲಿವುಡ್ ಬ್ಯೂಟಿ ಆಲಿಯಾ ಭಟ್​ಗಿದೆ ಆ ಒಂದು ಸಮಸ್ಯೆ
  • ಮದುವೆ ವೇಳೆ ಮೇಕಪ್ ಮ್ಯಾನ್​ಗೆ ಆಲಿಯಾ ಹೇಳಿದ್ದು ಏನು?
  • ನಿಯತಕಾಲಿಕೆಗೆ ಸಂದರ್ಶನದಲ್ಲಿ ಆಲಿಯಾಳ ಆ ಸಮಸ್ಯೆ ಬಯಲು

ಮುಂಬೈ: ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ತಮ್ಮಲ್ಲಿ ಇರುವ ಒಂದು ಸಮಸ್ಯೆಯನ್ನು ಇತ್ತೀಚೆಗೆ ನಿಯತಕಾಲಿಕೆಯಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ನನಗೆ ಎಡಿಡಿ ಅನ್ನೋ ಒಂದು ಸಮಸ್ಯೆ ಇದೆ. ADD ಅಂದ್ರೆ Attention Deficit Disorder ಅಂತ. ಇದು ಮನಸ್ಸಿಗೆ ಸಂಬಂಧಿಸಿದ ಒಂದು ಸಾಧಾರಣ ಕಾಯಿಲೆ ಒಂದೇ ಸ್ಥಳದಲ್ಲಿ ಗಂಟೆಗಟ್ಟಲೆ ಕೂರಲು ಆಗದ ಸಮಸ್ಯೆ. ಏನೋ ಚಡಪಡಿಕೆ ಏನೋ ದುಗುಡಗಳು ನಮ್ಮನ್ನು ಕಾಡುತ್ತವೆ. ಇಂತಹ ಸಮಸ್ಯೆಯನ್ನು ಆಲಿಯಾ ಭಟ್ ಎದುರಿಸುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಅವರು ಹೇಳಿದ ಪ್ರಕಾರ ಅವರ ಮದುವೆ ಸಮಯದಲ್ಲಿ ಎರಡರೆಡು ಗಂಟೆ ಮೇಕಪ್​ ಸಲುವಾಗಿ ಕೂರಬೇಕಾದ ಪ್ರಸಂಗ ಬಂದಾಗ ತುಂಬಾ ಒದ್ದಾಡಿರುವ ಬಗ್ಗೆ ಸಂದರ್ಶನದಲ್ಲಿ ಹೇಳಿದ್ದಾರೆ.

publive-image

ಇದನ್ನೂ ಓದಿ:ಪೋಷಕರೇ ಎಚ್ಚರ.. ನಿಮ್ಮ ಮಕ್ಕಳ ಕಣ್ಣಿಗೆ Kajal ಹಚ್ಚುತ್ತಿದ್ದರೆ ಈಗಲೇ ನಿಲ್ಲಿಸಿ; ಯಾಕೆ ಗೊತ್ತಾ?

ನಾನು ಸ್ವಲ್ಪ ಈ Attention Deficit Disorder ದಿಂದ ಬಳಲುತ್ತಿದ್ದೇನೆ. ನನಗೆ ಶೂಟಿಂಗ್​ ಸೆಟ್​ನಲ್ಲೂ ಕೂಡ ಅಷ್ಟೇ ಎಲ್ಲವೂ ಬೇಗ ಬೇಗ ಆಗಬೇಕು ಇಲ್ಲಾವಾದಲ್ಲಿ ಏನಾದ್ರೂ ಒಂದು ಕಸಿವಿಸಿ. ಚಡಪಡಿಕೆ ನನ್ನನ್ನು ಕಾಡಲು ಶುರು ಮಾಡುತ್ತದೆ ಎಂದು ಆಲಿಯಾ ತಮ್ಮ ಸಂದರ್ಶನದಲ್ಲಿ ಹೇಳಿದ್ದಾರೆ. ಅವರ ಮೇಕಪ್​ ಮ್ಯಾನ್ ಪುನೀತ್ ಬಿ ಸೈನಿ, ಆಲಿಯಾ ಮದುವೆ ಸಮಯದಲ್ಲಿ ಕನಿಷ್ಠ ಎರಡು ಗಂಟೆಯಾದ್ರೂ ನೀವು ಸಹಕರಿಸಬೇಕು. ಮೇಕಪ್ ಮಾಡಲು ಅಷ್ಟು ಸಮಯ ಬೇಕೇ ಬೇಕು ಎಂದಿದ್ದರಂತೆ. ಆದ್ರೆ ಆಲಿಯಾ ಮಾತ್ರ ಅದಕ್ಕೆ ಒಪ್ಪಿಕೊಂಡಿಲ್ಲ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಮುಗಿಸು ಅಂತ ಹೇಳಿದ್ದೆ. ಯಾಕಂದ್ರೆ ನನ್ನಲ್ಲಿ ಗಮನದ ಕೊರತೆ ಎಂದು ಕರೆಸಿಕೊಳ್ಳುವ ಎಡಿಡಿ ಗುಣಲಕ್ಷಣಗಳು ಇವೆ ಎಂದು ಆಲಿಯಾ ಭಟ್ ಹೇಳಿದ್ದಾರೆ.

publive-image

ಇದನ್ನೂ ಓದಿ:ಅಭಿಷೇಕ್​​ ಬಚ್ಚನ್​ಗಿಂತಲೂ ಐಶ್ವರ್ಯ ರೈ ಶ್ರೀಮಂತೆ; ಇವರ ಬಳಿ ಇರೋ ಆಸ್ತಿ ಕೇಳಿದ್ರೆ ಶಾಕ್​ ಆಗ್ತೀರಾ!

ಫೋಟೋಶೂಟ್ ಆಗಲಿ, ಮೇಕಪ್ ಆಗಲಿ ಆದಷ್ಟು ಬೇಗ ಆಗಿಬಿಡಬೇಕು ಒಂದೇ ಕೆಲಸಕ್ಕೆ ಸಾಕಷ್ಟು ಸಮಯ ನೀಡುವುದು ಅಂದ್ರೆ ನನಗೆ ಆಗಿಬರೋದಿಲ್ಲ. ಏನೇ ಆಗುವುದಿದ್ದರೂ ಅದು ಆದಷ್ಟು ಬೇಗನೇ ಆಗಿಬಿಡಬೇಕು ಅನ್ನೋದು ನನ್ನ ನಿಲುವು. ಇದನ್ನು ಅನೇಕರು ಎಡಿಡಿ ಸಮಸ್ಯೆ ಎಂದು ಕರೆಯುತ್ತಾರೆ. ಅದು ನನಗೆ ಇದೆ ಕೂಡ ಎಂದು 31 ವರ್ಷದ ನಟಿ ಆಲಿಯಾ ಭಟ್ ಹೇಳಿದ್ದಾರೆ.

ಎಡಿಡಿ ಅಂದ್ರೆ Attention Deficit Disorder ಎಂದು ಕರೆಯಲಾಗುತ್ತದೆ. ಈ ಒಂದು ಸಮಸ್ಯೆ ಇದ್ದವರು ಒಂದೇ ವಿಷಯಕ್ಕೆ ಬಹುಕಾಲದವರೆಗೆ ಗಮನ ಕೊಡುವಲ್ಲಿ ಸಮಸ್ಯೆಯನ್ನು ಎದುರಿಸುತ್ತಾರೆ. ಒಂದೇ ಸ್ಥಳದಲ್ಲಿ ಬಹಳ ಹೊತ್ತು ಕೂರುವುದಕ್ಕೂ ಈ ಸಮಸ್ಯೆ ಇದ್ದವರಿಂದ ಆಗುವುದಿಲ್ಲ.  ಇದನ್ನು ADHD ಎಂದು ಕೂಡ ಕರೆಯುತ್ತಾರೆ. ಅಂದ್ರೆ Attention Deficit Hyperactivity Disorder. ಈ ರೀತಿಯ ಸಮಸ್ಯೆ ಇರುವವರು ಸಾಮಾಜಿಕವಾಗಿ ಬೆರೆಯುವುದು. ಒಂದೇ ವಿಷಯಕ್ಕೆ ಹೆಚ್ಚು ಸಮಯ ಗಮನ ನೀಡುವುದು ಇವೆಲ್ಲವೂ ಅವರಿಂದ ಆಗುವುದಿಲ್ಲ. ದೂರ ಇರುತ್ತಾರೆ ಇಂತಹ ಸಮಸ್ಯೆಗಳಿಗೆ ಎಡಿಡಿ ಅಥವಾ ಎಡಿಹೆಚ್​ಡಿ ಎಂದು ಕರೆಯಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment