Advertisment

ಎಲ್ಲರ ಕಣ್ಣು ಹಾರ್ದಿಕ್ ಮೇಲೆ.. ಒಂದೇ ಕಲ್ಲಿನಲ್ಲಿ 5 ಹಕ್ಕಿ ಹೊಡೆಯಲು ಪಾಂಡ್ಯ ಪ್ಲಾನ್​​​..!

author-image
Ganesh
Updated On
ಡಿವೋರ್ಸ್ ವದಂತಿ ಬೆನ್ನಲ್ಲೇ.. ವಿಶ್ವಕಪ್​​ಗೆ ವಿಮಾನ ಹತ್ತದ ಹಾರ್ದಿಕ್ ಪಾಂಡ್ಯ.. ಕೈಕೊಟ್ರಾ..?
Advertisment
  • ವಿಶ್ವಕಪ್ ರಣರಂಗದಲ್ಲಿ ಹಾರ್ದಿಕ್ ಹಾಟ್ ಟಾಪಿಕ್
  • ಆಲ್​ರೌಂಡರ್ ಮುಂದಿವೆ ಸಾಲು ಸಾಲು ಸಮಸ್ಯೆ
  • ಸಮಸ್ಯೆಗಳ ಸುಳಿಯಿಂದ ಹೊರಬರ್ತಾರಾ ಪಾಂಡ್ಯ..?

ಟೀಮ್ ಇಂಡಿಯಾಗೆ ಈ ಬಾರಿ ಟಿ20 ವಿಶ್ವಕಪ್​​ ಪ್ರತಿಷ್ಠೆಯಾಗಿದೆ. ಅಷ್ಟೇ ಸ್ಟಾರ್​​ ಆಲ್​ರೌಂಡರ್ ಹಾರ್ದಿಕ್​​​​​​​​ ಪಾಂಡ್ಯ ಅವರಿಗೂ ಕೂಡ. ಯಾಕಂದ್ರೆ ಚುಟುಕು ದಂಗಲ್​​​​ ಹಾರ್ದಿಕ್​ಗೆ ಸವಾಲಿನ ಚಕ್ರವ್ಯೂಹವಾಗಿ ಮಾರ್ಪಟ್ಟಿದೆ. ಗ್ಲೋಬಲ್​ ಈವೆಂಟ್​ನಲ್ಲಿ ಪಾಂಡ್ಯ ಸಮಸ್ಯೆ​​​​​​ ಮೆಟ್ಟಿನಿಲ್ತಾರಾ? ಇಲ್ವಾ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ.

Advertisment

ALL EYES ON ಹಾರ್ದಿಕ್​​ ಪಾಂಡ್ಯ
ಬಹುನಿರೀಕ್ಷಿತ ಟಿ20 ವಿಶ್ವಕಪ್​​​​​​​ಗೆ ಚಾಲನೆ ಸಿಕ್ಕಿದೆ. ವಿಶ್ವದೆಲ್ಲೆಡೆ ಟ್ವೆಂಟಿ-ಟ್ವೆಂಟಿ ಕ್ರಿಕೆಟ್​ ಹಬ್ಬ ಕಳೆಗಟ್ಟಿದೆ. ಇಂತಹ ಹೊತ್ತಲ್ಲೇ ALL EYES ON ಹಾರ್ದಿಕ್​​ ಪಾಂಡ್ಯ ಮೇಲೆ ನೆಟ್ಟಿದೆ. ಹೇಳಿ ಕೇಳಿ ಇದು ಗ್ಲೋಬಲ್​ ಇವೆಂಟ್​​. ಎಲ್ಲರಿಗಿಂತ ಅದ್ಭುತವಾಗಿ ಆಡಿ ತನ್ನ ಕೆಪಾಸಿಟಿ ಪ್ರೂವ್ ಮಾಡಬೇಕಿದೆ. ಬರೀ ಫಾರ್ಮ್​ ಅಷ್ಟೇ ಅಲ್ಲದೇ, ಅನೇಕ ವಿಚಾರಗಳಿಂದಲೂ ಹಾರ್ದಿಕ್​​​, ವಿಶ್ವಕಪ್​​ ರಣರಂಗದಲ್ಲಿ ಹಾಟ್​​ ಟಾಪಿಕ್ ಆಗಿದ್ದಾರೆ.

ಇದನ್ನೂ ಓದಿ:ನಮ್ಮ ಮೆಟ್ರೋ ಲೈನ್​​ ಮೇಲೆ ಬಿದ್ದ ಮರ.. ಇವತ್ತು ಮೆಟ್ರೋ ಸಂಚಾರ ಇರುತ್ತೋ..? ಇಲ್ವೋ..?

publive-image

ರೋಹಿತ್​​​-ಹಾರ್ದಿಕ್​​​​ ನಡುವೆ ವಿವಾದದ ಕಾವು..!
ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್​ನಲ್ಲಿ ಹಾರ್ದಿಕ್​​ ಪಾಂಡ್ಯ ಹಾಗೂ ರೋಹಿತ್​ ಶರ್ಮಾ ನಡುವಿನ ವಿವಾದ, ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಕ್ಯಾಪ್ಟನ್ಸಿ ಕೈತಪ್ಪಿದ್ದಕ್ಕೆ ರೋಹಿತ್​ ಆರಂಭದಲ್ಲೆ ಮುನಿಸಿಕೊಂಡಿದ್ರು. ಬಳಿಕ ಹಾರ್ದಿಕ್ ನಾಯಕರಾಗಿ, ರೋಹಿತ್​​ರನ್ನ ಅವಮಾನಿಸಿದ್ರು ಅನ್ನೋ ಟಾಕ್ಸ್​​​​​​ ಕೇಳಿ ಬಂದಿತ್ತು. ಈ ಶೀತಲ ಸಮರದ ಮಧ್ಯೆ, ಇಬ್ಬರು ವಿಶ್ವಕಪ್​ನಲ್ಲಿ ಜೊತೆಯಾಗಿ ಕಾಣಿಸಿಕೊಳ್ತಿದ್ದಾರೆ. ನಾಯಕ-ಉಪನಾಯಕರ ಮುನಿಸು ಕಂಟಿನ್ಯೂ ಆಗುತ್ತಾ? ತಣ್ಣಗಾಗುತ್ತಾ ಅನ್ನೋ ಪ್ರಶ್ನೆ ಎಲ್ಲರನ್ನ ಕಾಡ್ತಿದೆ.

Advertisment

ಹಾರ್ದಿಕ್​​​​​​​​ ಪಾಂಡ್ಯ ದಾಂಪತ್ಯದಲ್ಲಿ ಬಿರುಕು
ಸ್ಟಾರ್​ ಆಲ್​ರೌಂಡರ್ ಹಾರ್ದಿಕ್​ ಪಾಂಡ್ಯ ಹಾಗೂ ನತಾಶಾ ಸ್ಟಾಂಕೋವಿಕ್​​​ ದಾಂಪತ್ಯ ಜೀವನದಲ್ಲಿ, ಬಿರುಕು ಕಾಣಿಸಿಕೊಂಡಿದೆ. ಇಬ್ಬರು ವಿಚ್ಛೇದನ ಪಡೆದಿದ್ದಾರೆ ಎಂಬ ಗಾಸಿಪ್​ ಹಬ್ಬಿದೆ. ಖಾಸಗಿ ಬದುಕಿನ ಈ ಸಮಸ್ಯೆಯನ್ನ ಬದಿಗೊತ್ತಿ, ಹಾರ್ದಿಕ್​​​​ ವಿಶ್ವಕಪ್​ನಲ್ಲಿ ಹೇಗೆ ಆಡ್ತಾರೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಬೆಂಗಳೂರು-ಮೈಸೂರು ಹೈವೇನಲ್ಲಿ ನದಿಯಂತೆ ಹರಿದ ನೀರು.. 8 ಕಿಮೀ ವರೆಗೆ ಟ್ರಾಫಿಕ್ ಜಾಮ್..!

publive-image

ಹಾರ್ದಿಕ್ ಫಿಟ್ನೆಸ್ ಬಗ್ಗೆ ಮೂಡಿದೆ ಪ್ರಶ್ನೆ..!
ವೈಸ್​ಕ್ಯಾಪ್ಟನ್​ ಹಾರ್ದಿಕ್​​​​​​​​ ಪಾಂಡ್ಯ ಅವರ ಫಿಟ್ನೆಸ್​ ಬಗ್ಗೆನೂ ದೊಡ್ಡ ಪ್ರಶ್ನೆ ಎದ್ದಿದೆ. ಇಂಜುರಿ ಬಳಿಕ ಹಾರ್ದಿಕ್​​​​​ ಐಪಿಎಲ್​ನಲ್ಲಿ ಭಾಗವಹಿಸಿದ್ರು. ಆದರೂ ಪೂರ್ಣ ಪ್ರಮಾಣದಲ್ಲಿ ಬೌಲಿಂಗ್​ ಮಾಡಿರಲಿಲ್ಲ. ಆರಂಭದಲ್ಲಿ ಬೌಲಿಂಗ್ ನಡೆಸಿ ನಂತರ, ಆ ಜವಾಬ್ದಾರಿಯಿಂದ ನುಣುಚಿಕೊಂಡಿದ್ರು. ಫೀಲ್ಡಿಂಗ್​​​ ವೇಳೆಯು ಬಳಲಿದ್ದು ಕಂಡು ಬಂತು. ಇದರಿಂದಾಗಿ ಪಾಂಡ್ಯ ಫಿಟ್ನೆಸ್​​ ಬಗ್ಗೆ ಪ್ರಶ್ನೆಗಳು ಉದ್ಭವಿಸಿದ್ವು.

Advertisment

ದಿನ ಕಳೆದಂತೆ ಹಾರ್ದಿಕ್​ ಅಸಲಿ ಖದರ್ ಮಾಯ..!
ಇಂಜುರಿ ಬಳಿಕ ಕಮ್​ಬ್ಯಾಕ್​​​​ ಮಾಡಿದ ಹಾರ್ದಿಕ್​ ಅಸಲಿ ಆಟ, ಮಾಯವಾಗಿದೆ. ಐಪಿಎಲ್​​​​​ನಲ್ಲೆ ಅದು ಬಟಬಯಲಾಗಿತ್ತು. 18ರ ಌವರೇಜ್​​​ನಲ್ಲಿ ಬ್ಯಾಟ್ ಬೀಸಿ, ಬರೀ 216 ರನ್​​​ ಗಳಿಸಿದ್ರು. ಬೌಲಿಂಗ್​​ನಲ್ಲೂ ಹಿಂದಿನ ಖದರ್ ಕಾಣಲಿಲ್ಲ. 14 ಇನ್ನಿಂಗ್ಸ್ ಆಡಿ 10.75 ರ ಎಕಾನಮಿಯಲ್ಲಿ 11 ವಿಕೆಟ್ ಬೇಟೆಯಾಡಿದ್ರು. ಟಿ20 ವಿಶ್ವಕಪ್​​ನಲ್ಲಿ ಕಳಪೆ ಆಟದಿಂದ ಹೊರಬರಬೇಕಾದ ಸವಾಲಿದೆ. ಇನ್ನೊಂದು ವಿಚಾರ ಏನಂದರೆ ಮೊನ್ನೆ ನಡೆದ ಅಭ್ಯಾಸ ಪಂದ್ಯದಲ್ಲಿ ಪಾಂಡ್ಯ ಅದ್ಭುತ ಬ್ಯಾಟಿಂಗ್ ಮಾಡಿದ್ದಾರೆ. 23 ಬಾಲ್​ನಲ್ಲಿ 40 ರನ್​ ಚಚ್ಚಿರುವ ಅವರು ಒಂದು ವಿಕೆಟ್ ಪಡೆದು ಅಲ್​ರೌಂಡರ್ ಆಟವನ್ನಾಡಿದ್ದಾರೆ.

ಇದನ್ನೂ ಓದಿ:ಟೀಂ ಇಂಡಿಯಾದ ಮುಖ್ಯ ಕೋಚ್​.. ಕೊನೆಗೂ ಮೌನ ಮುರಿದ ಗೌತಮ್ ಗಂಭೀರ್..! ಏನಂದ್ರು?

publive-image

ಶಿವಂ ದುಬೆ ಓವರ್ ಟೇಕ್ ಮಾಡುವ ಭೀತಿ
ಟಿ20 ವಿಶ್ವಕಪ್​ ಕದನದಲ್ಲಿ ಹಾರ್ದಿಕ್​​​​ ಪಾಂಡ್ಯಗೆ ಶಿವಂ ದುಬೆ ಭೀತಿ ಕಾಡ್ತಿದೆ. ಪಾಂಡ್ಯ ಸ್ಥಾನದ ಮೇಲೆ ದುಬೆ ಕಣ್ಣಿಟ್ಟಿದ್ದಾರೆ. ಚಾನ್ಸ್ ಸಿಕ್ರೆ ಉಪನಾಯಕನ ಸ್ಥಾನವನ್ನ ಕಬ್ಜಾ ಮಾಡಬಲ್ಲರು. ಹೀಗಾಗಿ ಹಾರ್ದಿಕ್ ತಮ್ಮ ಜವಾಬ್ದಾರಿಯನ್ನ ಸಮರ್ಥವಾಗಿ ನಿಭಾಯಿಸಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಮೇಲಿನ ಎಲ್ಲಾ ಕಾರಣಗಳಿಂದ ಎಲ್ಲರ ಚಿತ್ತ ಹಾರ್ದಿಕ್ ಮೇಲೆ ನೆಟ್ಟಿದೆ. ಸ್ಟಾರ್ ಆಲ್​ರೌಂಡರ್​​​​​​​​​​ ಈ ಸಮಸ್ಯೆಗಳಿಂದ ಹೇಗೆ ಹೊರ ಬರ್ತಾರೆ ಅನ್ನೋದೆ, ಸದ್ಯ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

Advertisment

ಇದನ್ನೂ ಓದಿ: ವೀಕೆಂಡ್ ರಿಲೀಫ್​​ನಲ್ಲಿದ್ದ ಜನಕ್ಕೆ ಮಳೆ ಆಘಾತ.. ಭಾರೀ ಅನಾಹುತ.. ಎಲ್ಲೆಲ್ಲಿ ಏನೆಲ್ಲ ಆಯ್ತು..? Photos

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment