newsfirstkannada.com

ಗೆಸ್ಟ್​​ ಹೌಸ್​ನಲ್ಲೂ ಲೈಂಗಿಕ ದೌರ್ಜನ್ಯ; ಹಾಸನ ಅಶ್ಲೀಲ ವಿಡಿಯೋ ಕೇಸ್​ಗೆ ಮತ್ತೊಂದು ಟ್ವಿಸ್ಟ್​

Share :

Published May 1, 2024 at 10:18pm

    ಒಟ್ಟು 10 ಸಂತ್ರಸ್ತೆಯರಿಂದ ಹೇಳಿಕೆಯನ್ನು ದಾಖಲಿಸಿಕೊಂಡಿದೆ ಎಸ್​ಐಟಿ ತಂಡ

    ದೇಶದಲ್ಲಿ ಹಲ್​ಚಲ್​ ಎಬ್ಬಿಸಿರೋ ಹಾಸನದಲ್ಲಿ ಹರಿದಾಡ್ತಿರೋ ಅಶ್ಲೀಲ ವಿಡಿಯೋ

    ದೂರುದಾರೆ ಹೊರತುಪಡಿಸಿ ಉಳಿದ ಸಂತ್ರಸ್ತೆಯರು ಯಾವುದಕ್ಕೂ ರೆಸ್ಪಾನ್ಸ್ ಮಾಡುತ್ತಿಲ್ಲ!

ಎಂಪಿ ಗೆಸ್ಟ್​ಗೌಸ್​ನಲ್ಲೂ ಲೈಂಗಿಕ ದೌರ್ಜನ್ಯ ನಡೆದಿರೋ ಆರೋಪ ಕೇಳಿಬಂದಿದೆ. ಈ ಮಧ್ಯೆ ಎಸ್​ಐಟಿ ಸಂತ್ರಸ್ತೆಯರ ವಿಚಾರಣೆ ನಡೆಸುತ್ತಿದ್ದು, ಕೆಲವರು ಮಾಹಿತಿ ನೀಡಲು ಹಿಂದೇಟು ಹಾಕಿದ್ದಾರಂತೆ. ಇತ್ತ ಪ್ರಜ್ವಲ್​ ಹಳೆ ಡ್ರೈವರ್​ ಕಾರ್ತಿಕ್​ನಿಂದಲೂ ಎಸ್​ಐಟಿ ಅಧಿಕಾರಿಗಳು ಕೆಲ ಮಾಹಿತಿ ಕಲೆ ಹಾಕಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ.. ಪ್ರಧಾನಿ ಮೋದಿಗೆ ರಾಹುಲ್‌ ಗಾಂಧಿ ಖಡಕ್ ಪ್ರಶ್ನೆ; ಹೇಳಿದ್ದೇನು?

ಎಂಪಿ ಕ್ವಾರ್ಟರ್ಸ್​ನಲ್ಲೂ ಚಿತ್ರೀಕರಣ ಮಾಡಿರುವ ಶಂಕೆ!

ದೇಶದಲ್ಲಿ ಹಲ್​ಚಲ್​ ಎಬ್ಬಿಸಿರೋ ಹಾಸನದಲ್ಲಿ ಹರಿದಾಡ್ತಿರೋ ಅಶ್ಲೀಲ ದೃಶ್ಯಗಳ ನೆರಳು ಈಗ ಎಂಪಿ ಗೆಸ್ಟ್​ ಹೌಸ್​ ಮೇಲೂ ಬಿದ್ದಿದೆ. ಸಂಸದರ ಗೆಸ್ಟ್​ಹೌಸನ್​ಲ್ಲೂ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ಎಸ್​ಐಟಿಗೆ ಮಾಹಿತಿ ಬಂದಿದೆ. ಅಶ್ಲೀಲ ದೃಶ್ಯಗಳು ಎಂಪಿ ಕ್ವಾರ್ಟರ್ಸ್​ನಲ್ಲೂ ಅಶ್ಲೀಲ ದೃಶ್ಯಗಳು ಸೆರೆಯಾಗಿರೋ ಶಂಕೆ ವ್ಯಕ್ತವಾಗ್ತಿದೆ. ಎಸ್​ಐಟಿ ಅಧಿಕಾರಿಗಳು ಸಂಸದನ ಸರ್ಕಾರಿ ನಿವಾಸ ಪರಿಶೀಲನೆ ನಡೆಸೋ ಸಾಧ್ಯತೆ ಇದೆ.

ಗೌಪ್ಯವಾಗಿ ಎಲ್ಲಾ ಸಂತ್ರಸ್ತೆಯರ ವಿಚಾರಣೆ

ಕೇಸ್​ ತನಿಖೆ ಚುರುಕುಗೊಳಿಸಿರೋ ಎಸ್​ಐಟಿ ತಂಡ, ಸಂತ್ರಸ್ತೆಯರ ಗುರುತು ಪತ್ತೆ ಮಾಡಿ ರಸಹ್ಯವಾಗಿ ವಿಚಾರಣೆ ನಡೆಸಿದೆ. ಈವರೆಗೂ ಒಟ್ಟು 10 ಸಂತ್ರಸ್ತ ಮಹಿಳೆಯರ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ನಿನ್ನೆ ಐವರು ಸಂತ್ರಸ್ತೆಯರು ಎಸ್ಪಿ ಸೀಮಾ ಲಾಟ್ಕರ್, ಡಿವೈಎಸ್​ಪಿ ಪ್ರಭಾವತಿ ಮುಂದೆ ಹಾಜರಾಗಿದ್ದರು. ಮೊನ್ನೆ ಕೂಡ ಎಸ್ಐಟಿ ಮುಂದೆ ಐವರು ಸಂತ್ರಸ್ತೆಯರು ಹಾಜರಾಗಿ ಹೇಳಿಕೆ ದಾಖಲಿಸಿದ್ರು. ಸದ್ಯ ಎಸ್​ಐಟಿ ತಂಡ ಎಲ್ಲಾ ಸಂತ್ರಸ್ತೆಯರನ್ನ ಗೌಪ್ಯವಾಗಿ ವಿಚಾರಣೆಗೊಳಪಡಿಸಿದೆ. ಮತ್ತೊಂದೆಡೆ ಕೆಲ ಸಂತ್ರಸ್ತೆಯರು ಎಸ್​ಐಟಿಗೆ ಮಾಹಿತಿ ನೀಡಲು ಹಿಂದೇಟು ಹಾಕಿದ್ದಾರಂತೆ.

ಸಂತ್ರಸ್ತೆಯರು ನೋ ರೆಸ್ಪಾನ್ಸ್

ದೂರುದಾರೆ ಹೊರತುಪಡಿಸಿ ಉಳಿದವರು ಯಾವುದಕ್ಕೂ ರೆಸ್ಪಾನ್ಸ್ ಮಾಡುತ್ತಿಲ್ಲ. ವಿಡಿಯೋದಲ್ಲಿರುವ ಮಹಿಳೆರನ್ನ ಸಂಪರ್ಕಿಸಲು SIT ಯತ್ನಿಸ್ತಿದ್ದು, ಎಷ್ಟೇ ಪ್ರಯತ್ನ ಪಟ್ಟರೂ ಸಂತ್ರಸ್ತೆಯರು ಪ್ರತಿಕ್ರಿಯಿಸುತ್ತಿಲ್ಲ. ಸಂತ್ರಸ್ತೆಯರು ಏನು ಹೇಳಲ್ಲ, ಏನು ಕೇಳಬೇಡಿ. ನಾವೇನ್ ದೂರು ಕೊಟ್ಟಿಲ್ಲ, ನಮ್ಮನ್ನು ಯಾಕೆ ಎಳೆದು ತರ್ತಿರಿ. ನಮ್ಮನ್ನ ನಮ್ಮ ಪಾಡಿಗೆ ಬಿಟ್ಟುಬಿಡಿ ಅಂತ ಹೇಳ್ತಿದ್ದಾರಂತೆ. ಸದ್ಯ ದೂರುದಾರೆ ಸಂತ್ರಸ್ತೆಯ ಮಾಹಿತಿ ಆಧರಿಸಿ ಮಾತ್ರ ತನಿಖೆ ನಡೆಸಲಾಗ್ತಿದೆ. ಅಶ್ಲೀಲ ವಿಡಿಯೋ ಕೇಸ್​ ಸಂಬಂಧ ಪೆನ್​ಡ್ರೈವ್ ಜನ್ಮಜಾಲಾಡ್ತಿರೋ ಎಸ್​ಐಟಿ ತಂಡ ವಿಡಿಯೋಗಳ ಫಸ್ಟ್ ಕಾಪಿ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಪ್ರಜ್ವಲ್​ ಹಳೆ ಡ್ರೈವರ್​ ಕಾರ್ತಿಕ್​ ಬಳಿಯಿಂದ ಎಸ್​ಐಟಿ ಮೊದಲ ಕಾಪಿಯ ಎರಡು ಪೆನ್​ಡ್ರೈವ್ ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ವೇಳೆ ವಿಡಿಯೋ ಶೇರ್ ಆದ ಬಗ್ಗೆ ಕಾರ್ತಿಕ್ಎಳೆಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾನೆ. ಸಂತ್ರಸ್ತೆಯರು ಹೇಳಿಕೆ ನೀಡೋಕೆ ಹಿಂದೇಟು ಹಾಕ್ತಿದ್ದು, ಎಸ್​ಐಟಿ ಅಧಿಕಾರಿಗಳು ಎಲ್ಲಾ ಅಯಾಮಾಗಳಲ್ಲೂ ತನಿಖೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಹಲವು ವರ್ಷಗಳ ಕಾಲ ಪ್ರಜ್ವಲ್ ರೇವಣ್ಣ ಜೊತೆ ನಾನು ಕೆಲಸ ಮಾಡಿದ್ದೆ. ಪ್ರಜ್ವಲ್ ರೇವಣ್ಣ ಮೊಬೈಲ್ ಪಾಸ್​ವರ್ಡ್​ನ ನಾನು ನೋಡ್ಕೊಂಡಿದ್ದೆ. ಪ್ರಜ್ವಲ್​ಗೆ ಗೊತ್ತಿಲ್ಲದಂತೆಯೇ ವಿಡಿಯೋಗಳನ್ನ ಮೊದಲು ನನ್ನ ಮೊಬೈಲ್​ಗೆ ಕಾಪಿ ಮಾಡಿಕೊಂಡಿದ್ದೆ. ನಂತರ ಎರಡು ಪೆನ್​ಡ್ರೈವ್​ಗೆ ಕಾಪಿ ಮಾಡಿಕೊಂಡಿದ್ದೆ. ಆದರೆ ಆ ಪೆನ್​ಡ್ರೈವ್​ನ​ ನಾನು ದೇವರಾಜೇಗೌಡರಿಗೆ ಬಿಟ್ರೆ ಬೇರೆ ಯಾರಿಗೂ ಕೊಟ್ಟಿಲ್ಲ. ನನ್ನ ಬಳಿ ವಿಡಿಯೋಗಳು ಇರೋದು ದೇವರಾಜೇಗೌಡರಿಗೆ ಗೊತ್ತಾಗಿತ್ತು. ನನ್ನ ಬಳಿ ಬಂದು ನಂಬಿಸಿ ದೇವರಾಜೇಗೌಡ ಕಾಪಿ ಮಾಡಿಕೊಂಡಿದ್ರು. ಯಾರಿಗೂ ಕೊಡಲ್ಲ, ಸೇಫಾಗಿರುತ್ತೆ ಅಂತಲೇ ಕಾಪಿ ಮಾಡಿಕೊಂಡಿದ್ರು. ದೇವರಾಜೇಗೌಡ ಬಿಟ್ಟರೆ ಬೇರೆ ಯಾರಿಗೂ ಪ್ರಜ್ವಲ್ ವಿಡಿಯೋ ನೀಡಿಲ್ಲ.

ಕಾರ್ತಿಕ್​, ಪ್ರಜ್ವಲ್​ ಹಳೆ ಡ್ರೈವರ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೆಸ್ಟ್​​ ಹೌಸ್​ನಲ್ಲೂ ಲೈಂಗಿಕ ದೌರ್ಜನ್ಯ; ಹಾಸನ ಅಶ್ಲೀಲ ವಿಡಿಯೋ ಕೇಸ್​ಗೆ ಮತ್ತೊಂದು ಟ್ವಿಸ್ಟ್​

https://newsfirstlive.com/wp-content/uploads/2024/05/prajwal-revanna9.jpg

Load More