ಅಲ್ಲು ಅರ್ಜುನ್​ಗೆ ಇಂಡಿಯಾದಲ್ಲೇ ಅತಿ ಹೆಚ್ಚು ಸಂಭಾವನೆ.. ಪುಷ್ಪ-2ಗೆ ಐಕಾನ್ ಸ್ಟಾರ್ ಪಡೆದ ದುಡ್ಡು ಎಷ್ಟು?

author-image
Bheemappa
Updated On
ಅಲ್ಲು ಅರ್ಜುನ್​ಗೆ ಇಂಡಿಯಾದಲ್ಲೇ ಅತಿ ಹೆಚ್ಚು ಸಂಭಾವನೆ.. ಪುಷ್ಪ-2ಗೆ ಐಕಾನ್ ಸ್ಟಾರ್ ಪಡೆದ ದುಡ್ಡು ಎಷ್ಟು?
Advertisment
  • ಬಾಲಿವುಡ್​, ಕಾಲಿವುಡ್​ ನಟರನ್ನು ಹಿಂದಕ್ಕೆ ತಳ್ಳಿದ ಐಕಾನ್ ಸ್ಟಾರ್
  • ಅಲ್ಲು ಅರ್ಜುನ್ ಅವರು ಪುಷ್ಪ-2 ಸಿನಿಮಾಕ್ಕೆ ಎಷ್ಟು ಕೋಟಿ ಪಡೆದ್ರು?
  • ರಜನಿಕಾಂತ್, ಪ್ರಭಾಸ್, ವಿಜಯ್ ಎಲ್ಲರನ್ನೂ ಹಿಂದಿಕ್ಕಿರುವ ‘ಬನ್ನಿ’

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ಸದ್ಯ ಪುಷ್ಪ ಭಾಗ-2 ಮೂವಿಯ ಪ್ರಚಾರದಲ್ಲಿ ಫುಲ್ ಬ್ಯುಸಿ ಇದ್ದಾರೆ. ಅಭಿಮಾನಿಗಳು ಕೂಡ ಈ ಸಿನಿಮಾ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನೇನು ಡಿಸೆಂಬರ್ 5 ರಂದು ವಿಶ್ವದ್ಯಾಂತ ತೆರೆಗೆ ಅಪ್ಪಳಿಸಲಿದೆ. ಇದರ ಮಧ್ಯೆ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಇಡೀ ಇಂಡಿಯಾದಲ್ಲೇ ಅತಿ ಹೆಚ್ಚು ಸಂಭಾವನೆ (ಸಂಬಳ) ಪಡೆಯುತ್ತಿರುವ ನಟ ಎಂದು ತಿಳಿದು ಬಂದಿದೆ.

publive-image

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರು ಒಂದು ಮೂವಿಗೆ 100 ಕೋಟಿ ರೂಪಾಯಿ ತೆಗೆದುಕೊಳ್ಳುತ್ತಾರೆ ಎಂದು ಕೆಲವರು ಹೇಳಿದ್ರೆ, ಇನ್ನು ಕೆಲವರು 150 ರಿಂದ 200 ಕೋಟಿ ರೂಪಾಯಿ ಪಡೆಯುತ್ತಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ 2024ರಲ್ಲಿ ಅತ್ಯಧಿಕ ಸಂಭಾವನೆ ಪಡೆದವರಲ್ಲಿ ಅಲ್ಲು ಅರ್ಜುನ್ ಕೂಡ ಒಬ್ಬರಾಗಿದ್ದಾರೆ. ಅಲ್ಲದೇ ಇಡೀ ಇಂಡಿಯಾದಲ್ಲೇ ಒಂದು ಸಿನಿಮಾಗೆ ಅತಿ ಹೆಚ್ಚು ಹಣ ಪಡೆಯುತ್ತಿರುವ ನಟ ಅಲ್ಲು ಅರ್ಜುನ್ ಆಗಿದ್ದಾರೆ.

ಅಲ್ಲು ಅರ್ಜುನ್ ಅವರು ಪುಷ್ಪ-2 ಸಿನಿಮಾಕ್ಕೆ 300 ಕೋಟಿ ರೂಪಾಯಿಗಳ ಸಂಭಾವನೆ ಪಡೆದಿದ್ದಾರೆ. ಭಾರತದ ಅತಿ ಹೆಚ್ಚು ರೆಮ್ಯೂನರೇಷನ್ ಪಡೆಯುವ ಟಾಪ್ 10 ನಟರಲ್ಲಿ ಅಲ್ಲು ಅರ್ಜುನ್ ಗುರುತಿಸಿಕೊಂಡಿದ್ದಾರೆ. ಇದರಲ್ಲಿ ಬಾಲಿವುಡ್, ಟಾಲಿವುಡ್, ಕಾಲಿವುಡ್​ನ ಸ್ಟಾರ್ ನಟರನ್ನು ಅಲ್ಲು ಅರ್ಜುನ್ ಅವರು ಹಿಂದಿಕ್ಕಿದ್ದಾರೆ. ಪುಷ್ಪ-2 ಸಿನಿಮಾ ಒಂದು ಒಳ್ಳೆ ರೇಂಜ್​ಗೆ ಅಲ್ಲು ಅರ್ಜುನ್ ಅವರ ಕ್ರೇಜ್ ಅನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: ಪುಷ್ಪಾ-2 ಕ್ರೇಜ್ ಹೊತ್ತಲ್ಲೇ ಐಕಾನ್​ ಸ್ಟಾರ್​ಗೆ ಬಿಗ್ ಶಾಕ್​​.. ಅಲ್ಲು ಅರ್ಜುನ್​ ವಿರುದ್ಧ ಕೇಸ್ ದಾಖಲು

publive-image

ಶಾರುಖ್ ಖಾನ್, ಅಮೀರ್ ಖಾನ್, ಸಲ್ಮಾನ್ ಖಾನ್, ರಜನಿಕಾಂತ್​​, ತಮಿಳು ನಟ ದಳಪತಿ ವಿಜಯ್​ಗಿಂತ ಅಲ್ಲು ಅರ್ಜುನ್ ದೊಡ್ಡ ರೆಮ್ಯೂನರೇಷನ್ ಪಡೆಯುತ್ತಿದ್ದಾರೆ. ದಳಪತಿ ವಿಜಯ್ ಒಂದು ಸಿನಿಮಾಕ್ಕೆ 250 ಕೋಟಿ ರೂಪಾಯಿ ಪಡೆಯುತ್ತಿದ್ದರು ಎಂದು ಈ ಹಿಂದೆ ಹೇಳಲಾಗಿತ್ತು. ಶಾರುಖ್ ಖಾನ್ ಅವರು 150 ರಿಂದ 250 ಕೋಟಿ ರೂ.ಗಳನ್ನ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಆದರೆ ಈಗ ಅಲ್ಲು ಅರ್ಜುನ್ ಅವರು 300 ಕೋಟಿ ರೂಪಾಯಿ ಪಡೆಯುತ್ತಿದ್ದು ಭಾರತದಲ್ಲೇ ಅತಿ ಹೆಚ್ಚು ರೆಮ್ಯೂನರೇಷನ್ ಪಡೆಯುತ್ತಿರುವ ನಟ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment