/newsfirstlive-kannada/media/post_attachments/wp-content/uploads/2024/08/VINESH-POGHAT-2-1.jpg)
ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಕುಸ್ತಿಪಟು ಅಮನ್ ಸೆಹ್ರಾವತ್ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದಾರೆ. ಅವರು, 57 ಕೆಜಿ ಫ್ರೀ-ಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಕಂಚಿನ ಪದಕಕ್ಕಾಗಿ ನಡೆದ ಹೋರಾಟದ ವೇಳೆ ಗಾಯದಿಂದ ಅವರ ಮೂಗಿನಲ್ಲಿ ರಕ್ತ ಸೋರುತ್ತಿತ್ತು. ಹೀಗಿದ್ದೂ ಕುಗ್ಗದ ಅಮನ್ ಗೆದ್ದು ಮೆಡಲ್ ತಮ್ಮದಾಗಿಸಿಕೊಂಡರು.
/newsfirstlive-kannada/media/post_attachments/wp-content/uploads/2024/08/VINESH-PHOGAT-9.jpg)
ಕಂಚಿನ ಪದಕ ಪಂದ್ಯಕ್ಕೂ ಮುನ್ನ ಅಮನ್​​ಗೂ ಅನರ್ಹತೆಯ ಭಯ ಕಾಡಿತ್ತಂತೆ. ಹೀಗಾಗಿ ಅವರು ಇಡೀ ರಾತ್ರಿ ಹೇಗೆ ಕಳೆದರು ಅನ್ನೋ ಮಾಹಿತಿ ಬಹಿರಂಗ ಆಗಿದೆ. ಅಮನ್​ಗೂ ದೇಹದ ತೂಕ ಹೆಚ್ಚಾಗುವ ಆತಂಕ ಕಾಡಿತ್ತು. ಹೀಗಾಗಿ ರಾತ್ರಿ ಇಡೀ ಅಮನ್ ಜಿಮ್‌ನಲ್ಲಿ ಬೆವರು ಹರಿಸಿದ್ದರು. ಜಾಗಿಂಗ್ ಕೂಡ ಮಾಡಿದ್ದಾರೆ. ರಾತ್ರಿಯೆಲ್ಲ ನಿದ್ದೆಬಿಟ್ಟ ದೇಹದ ತೂಕದ ಮೇಲೆ ನಿಗಾ ಇಟ್ಟಿದ್ದರು ಎಂದು ವರದಿಯಾಗಿದೆ. ಇದೇ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ತೂಕದಲ್ಲಿ ಕೇವಲ 100 ಗ್ರಾಮ್ ಹೆಚ್ಚಾಗಿದ್ದಕ್ಕೆ ಅನರ್ಹ ಮಾಡಲಾಗಿತ್ತು.
ಇದನ್ನೂ ಓದಿ:ಪದಕದ ಆಸೆ ಇನ್ನೂ ಜೀವಂತ; ವಿನೇಶ್ ಫೋಗಟ್​ ಪರ 4 ವಾದ ಮಂಡಿಸಿದ ಹರೀಶ್ ಸಾಳ್ವೆ.. ಹೇಗಿತ್ತು ವಾದ?
/newsfirstlive-kannada/media/post_attachments/wp-content/uploads/2024/08/Aman-1.jpg)
ಕಂಚಿನ ಪದಕ ಗೆದ್ದ ಬೆನ್ನಲ್ಲೇ ಅಮನ್ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ವರದಿಗಳ ಪ್ರಕಾರ ಕಂಚಿನ ಪದಕದ ಪಂದ್ಯಕ್ಕೂ ಮುನ್ನ ಅಮನ್ 2-3 ಗಂಟೆಗಳ ಕಾಲ ಜಾಕೆಟ್ ಧರಿಸಿದ್ದರು. ಜಿಮ್‌ಗೆ ಹೋಗಿ ಸಾಕಷ್ಟು ಜಾಗಿಂಗ್ ಮಾಡಿದ್ದಾರೆ. ತೂಕದ ಬಗ್ಗೆ ಮೊದಲೇ ಕಾಳಜಿ ವಹಿಸಿದ್ದ ಅವರು, ಭಾರತದಿಂದ ಪ್ಯಾರಿಸ್​ಗೆ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗಿದ್ದರು. ಒಂದು ವೇಳೆ ಅಮಾನ್ ಅಧಿಕ ತೂಕ ಹೊಂದಿದ್ದಲ್ಲಿ ಕಂಚಿಗೆ ಸ್ಪರ್ಧಿಸಲು ಸಾಧ್ಯವಾಗುತ್ತಿರಲಿಲ್ಲ.
ವಿನೇಶ್‌ಗೆ 100 ಗ್ರಾಂ ತೂಕ ‘ಭಾರ’ವಾಯ್ತು
ಭಾರತದ ಕುಸ್ತಿಪಟು ವಿನೇಶ್ 100 ಗ್ರಾಂ ಅಧಿಕ ತೂಕದ ಕಾರಣದಿಂದ ಅನರ್ಹಗೊಂಡರು. ಅವರು ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಚಿನ್ನದ ಪದಕದ ಪಂದ್ಯಕ್ಕೂ ಮುನ್ನ ಅವರ ತೂಕ ಹೆಚ್ಚಾಗಿತ್ತು. ಈ ಕಾರಣಕ್ಕಾಗಿ ಅನರ್ಹಗೊಳಿಸಲಾಗಿತ್ತು.
/newsfirstlive-kannada/media/post_attachments/wp-content/uploads/2024/08/Aman-Sehrawat-1.jpg)
ಭಾರತಕ್ಕೆ 6 ಪದಕ
ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತ ಇದುವರೆಗೆ ಒಟ್ಟು 6 ಪದಕಗಳನ್ನು ಗೆದ್ದಿದೆ. ಇದರಲ್ಲಿ 3 ಪದಕಗಳು ಶೂಟಿಂಗ್‌ನಿಂದ ಬಂದಿವೆ. ಹಾಕಿಯಲ್ಲಿ ಒಂದು ಪದಕ ಮತ್ತು ಜಾವೆಲಿನ್ ಎಸೆತದಲ್ಲಿ ಒಂದು ಪದಕ ಬಂದಿದೆ. ಅಮನ್ ಕುಸ್ತಿಯಲ್ಲಿ ಪದಕ ತಂದ್ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us