ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್
2ನೇ ಬಾರಿಗೆ ಆರೆಂಜ್ ಕ್ಯಾಪ್ ಗೆದ್ದ ಆರ್ಸಿಬಿ ಮಾಜಿ ಕ್ಯಾಪ್ಟನ್ ಕೊಹ್ಲಿ!
ಮತ್ತೆ ಆರ್ಸಿಬಿ ಮತ್ತು ಕೊಹ್ಲಿ ಕಾಲೆಳೆದ ಮಾಜಿ ಕ್ರಿಕೆಟರ್ ರಾಯುಡು
ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ನಲ್ಲಿ ಆರೆಂಜ್ ಕ್ಯಾಪ್ ಗೆದ್ದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಂಬಾಟಿ ರಾಯುಡು ಮತ್ತೆ ಕಿಡಿಕಾರಿದ್ದಾರೆ.
ಆರೆಂಜ್ ಕ್ಯಾಪ್ ಗೆಲ್ಲೋದು ವೈಯಕ್ತಿಕ. ಯಾವಾಗಲೂ ವೈಯಕ್ತಿಕ ಪ್ರಶಸ್ತಿಗಳನ್ನು ಗೆದ್ದರೆ ಫ್ರಾಂಚೈಸಿಗೆ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ. ಐಪಿಎಲ್ ಟ್ರೋಫಿ ತಂಡದ ಸಾಮೂಹಿಕ ಪ್ರಯತ್ನದಿಂದ ಮಾತ್ರ ಸಾಧ್ಯ ಎಂದು ಅಂಬಾಟಿ ರಾಯುಡು ಹೀಯಾಳಿಸಿದ್ದಾರೆ.
ಸುನಿಲ್ ನರೈನ್, ಆಂಡ್ರೆ ರಸೆಲ್ ಮತ್ತು ಮಿಚೆಲ್ ಸ್ಟಾರ್ಕ್ ರೀತಿಯ ದಿಗ್ಗಜರ ಪರವಾಗಿ ನಿಂತ ಕೆಕೆಆರ್ಗೆ ಧನ್ಯವಾದಗಳು. ತಂಡದ ಗೆಲುವಿನಲ್ಲಿ ಎಲ್ಲರ ಪಾಲು ಇರುತ್ತದೆ. ನಾನು ಹಲವು ವರ್ಷಗಳಿಂದ ಇದನ್ನು ನೋಡಿದ್ದೇನೆ. ಐಪಿಎಲ್ ಗೆಲ್ಲುವುದು ಆರೆಂಜ್ ಕ್ಯಾಪ್ ಅಲ್ಲ, ಬದಲಿಗೆ ತಲಾ 300- 400 ರನ್ ನೀಡುವುದರಿಂದ ಎಂದರು.
ಇನ್ನು, 2024ರ ಐಪಿಎಲ್ ಸೀಸನ್ನಲ್ಲಿ 15 ಪಂದ್ಯಗಳಲ್ಲಿ ಬರೋಬ್ಬರಿ 741 ರನ್ ಗಳಿಸಿರೋ ಕೊಹ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಆರೆಂಜ್ ಕ್ಯಾಪ್ ಬಹುಮಾನ ಪಡೆದಿದ್ದಾರೆ. ಈ ಸೀಸನ್ನಲ್ಲಿ 1 ಶತಕ ಮತ್ತು 5 ಅರ್ಧಶತಕಗಳು ಬಾರಿಸಿದ ಕೊಹ್ಲಿ ಅದ್ಭುತ ಫಾರ್ಮ್ನಲ್ಲಿದ್ದಾರೆ.
ಇದನ್ನೂ ಓದಿ: ಆರ್ಸಿಬಿ ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ.. ಏನದು?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ