/newsfirstlive-kannada/media/post_attachments/wp-content/uploads/2024/05/Kohli_Ambati-Rayudu.jpg)
ಇತ್ತೀಚೆಗೆ ನಡೆದ ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್ ಫೈನಲ್ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಗೆದ್ದು ಬೀಗಿದೆ. ಈ ಮೂಲಕ ಬರೋಬ್ಬರಿ 17 ವರ್ಷಗಳ ಬಳಿಕ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿದೆ. ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ 76 ರನ್ ಸಿಡಿಸಿ ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್ ಪಡೆದುಕೊಂಡರು. ಈಗ ಕೊಹ್ಲಿ ಆಟದ ಬಗ್ಗೆ ಅಂಬಾಟಿ ರಾಯುಡು ಮಾತಾಡಿದ್ದಾರೆ.
ಈ ಬಗ್ಗೆ ಮಾತಾಡಿರೋ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಅಂಬಾಟಿ ರಾಯುಡು, ಭಾರತ ತಂಡ ಟಿ20 ವಿಶ್ವಕಪ್ ಗೆದ್ದಿದ್ದು ಬಹಳ ಖುಷಿ ವಿಚಾರ. ಸೌತ್ ಆಫ್ರಿಕಾ ವಿರುದ್ಧ ಗೆಲ್ಲಲು ಟೀಮ್ ಇಂಡಿಯಾದ ಎಲ್ಲರೂ ಕಾರಣ ಎಂದಿದ್ದಾರೆ.
ವಿರಾಟ್ ಕೊಹ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ರೂ ಟೀಮ್ ಇಂಡಿಯಾ ಗೆಲುವಿಗೆ ಇವರೊಬ್ಬರೇ ಕಾರಣ ಅಲ್ಲ. ಬದಲಿಗೆ ಡೇವಿಡ್ ಮಿಲ್ಲರ್ ಕ್ಯಾಚ್ ಹಿಡಿದ ಸೂರ್ಯಕುಮಾರ್ ಯಾದವ್ ಮತ್ತು ಕ್ಲಾಸೆನ್ ವಿಕೆಟ್ ತೆಗೆದ ಹಾರ್ದಿಕ್ ಪಾಂಡ್ಯ ಅವರದ್ದು ಪಾತ್ರ ಇದೆ. ಈ ಪಂದ್ಯ ಗೆಲ್ಲಲು ಕೇವಲ ಕೊಹ್ಲಿ ಮಾತ್ರ ಕಾರಣ ಅಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.
ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿದೆ. ಕೋಟ್ಯಾಂತರ ಅಭಿಮಾನಿಗಳ ಫ್ರಾರ್ಥನೆ ಫಲಿಸಿದೆ. ವಿಶ್ವ ಗೆದ್ದ ಆಟಗಾರರು ಹೀರೋಗಳಾಗಿ ಮೆರೆದಾಡ್ತಿದ್ದಾರೆ. ಟೀಮ್ ಇಂಡಿಯಾದ ಸಾಧನೆಯನ್ನ ಕೊಂಡಾಡ್ತಿದ್ದಾರೆ. ಆದ್ರೆ, ಇದೆಲ್ಲದರ ಗೆಲುವಿನ ಹಿಂದಿನ ಶ್ರೇಯಸ್ಸು ರಾಹುಲ್ ದ್ರಾವಿಡ್ ಆ್ಯಂಡ್ ಕ್ಯಾಪ್ಟನ್ ರೋಹಿತ್ ಮಾತ್ರವಲ್ಲ ಕೊಹ್ಲಿಗೂ ಸಲ್ಲುತ್ತೆ.
ಇದನ್ನೂ ಓದಿ:ಕೊಹ್ಲಿ, ರೋಹಿತ್, ಜಡೇಜಾ ಆಯ್ತು.. ಮತ್ತೆ ನಾಲ್ವರು ಆಟಗಾರರು ಗುಡ್ಬೈ ಹೇಳಲು ತಯಾರಿ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್