newsfirstkannada.com

‘ನನ್ನ ಕ್ರಿಕೆಟ್​​ ಕರಿಯರ್​ ಹಾಳಾಗಿದ್ದೆ ಕೊಹ್ಲಿಯಿಂದ’- 2019ರ ಘಟನೆ ಬಗ್ಗೆ ಸತ್ಯ ಬಿಚ್ಚಿಟ್ಟ ಅಂಬಾಟಿ ರಾಯುಡು!

Share :

Published June 1, 2024 at 5:29pm

Update June 1, 2024 at 5:59pm

  ಟೀಮ್​ ಇಂಡಿಯಾದ ಮಾಜಿ ಕ್ಯಾಪ್ಟನ್​ ಕೊಹ್ಲಿ ವಿರುದ್ಧ ಮತ್ತೊಂದು ಆರೋಪ

  ವಿರಾಟ್​ ಕೊಹ್ಲಿ ವಿರುದ್ಧ ಗಂಭೀರ ಆರೋಪ ಮಾಡಿದ ಅಂಬಾಟಿ ರಾಯುಡು

  ಅಂದು ನನ್ನ ಪರ ಕೊಹ್ಲಿ ಯಾಕೆ ನಿಲ್ಲಲಿಲ್ಲ? ಎಂದು ರಾಯುಡು ಖಡಕ್​ ಪ್ರಶ್ನೆ!

ಟೀಮ್​ ಇಂಡಿಯಾದ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ವಿರುದ್ಧ ಹಿರಿಯ ಕ್ರಿಕೆಟಿಗ ಅಂಬಾಟಿ ರಾಯುಡು ಮತ್ತೊಂದು ಆರೋಪ ಮಾಡಿದ್ದಾರೆ. ತಾನು 2019ರ ಏಕದಿನ ವಿಶ್ವಕಪ್ ಟೂರ್ನಿಯ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಳ್ಳಲು ಕೊಹ್ಲಿಯೇ ಕಾರಣ ಎಂದು ಹೇಳುವ ಮೂಲಕ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.

ನನಗೂ ಬಿಸಿಸಿಐ ಆಯ್ಕೆ ಸಮಿತಿಯಲ್ಲಿದ್ದ ಒಬ್ಬ ಸದಸ್ಯರಿಗೂ ಒಂದು ಸಮಸ್ಯೆ ಇತ್ತು. ಆಂಧ್ರದ ಪರ ಆಡುತ್ತಿದ್ದಾಗ ನನ್ನ ಕ್ರಿಕೆಟ್‌ ವೃತ್ತಿ ಜೀವನದ ಆರಂಭದಲ್ಲೂ ಇವರಿಂದ ನನಗೆ ಸಮಸ್ಯೆ ಆಗಿತ್ತು. ಆ ಒಬ್ಬ ವ್ಯಕ್ತಯಿಂದಲೇ ನಾನು 2019ರ ಏಕದಿನ ವಿಶ್ವಕಪ್‌ ಟೂರ್ನಿಯ ಭಾರತ ತಂಡದಿಂದ ಹೊರಗುಳಿದೆ. ಅಂದು ಕೊಹ್ಲಿ ನನ್ನನ್ನು ಸಪೋರ್ಟ್​ ಮಾಡಬಹುದಿತ್ತು. ಕ್ಯಾಪ್ಟನ್​ ಆಗಿದ್ದ ಕೊಹ್ಲಿಗೆ ಆ ಹಕ್ಕು ಇತ್ತು. ಆದರೆ, ಅಂದು ನನ್ನ ಪರ ಕೊಹ್ಲಿ ನಿಲ್ಲಲಿಲ್ಲ ಎಂದು ರಾಯುಡು ದೂರಿದ್ದಾರೆ.

ಒಂದು ಅರ್ಥದಲ್ಲಿ ನನ್ನ ಕ್ರಿಕೆಟ್​ ಕರಿಯರ್​​ ಹಾಳಾಗಿದ್ದೆ ಕೊಹ್ಲಿಯಿಂದ. 4 ವರ್ಷಗಳ ಕಾಲ ಭಾರತ ತಂಡದ ನಾಲ್ಕನೇ ಕ್ರಮಾಂಕಕ್ಕೆ ನನ್ನನ್ನು ತಯಾರಿ ಮಾಡಲಾಗಿತ್ತು. ಆದ್ರೆ, ಒಬ್ಬ ವ್ಯಕ್ತಿ ಮಾತು ಕೇಳಿ ಏಕದಿನ ವಿಶ್ವಕಪ್‌ ಟೂರ್ನಿ ಭಾರತ ತಂಡದಿಂದ ನನ್ನುನ್ನು ಕೈ ಬಿಟ್ಟರು. ನನ್ನ ಬದಲಿಗೆ ಆಲ್‌ರೌಂಡರ್ ವಿಜಯ್‌ ಶಂಕರ್‌ ಅವರನ್ನು ಆಯ್ಕೆ ಮಾಡುವ ಮೂಲಕ ಬಿಸಿಸಿಐ ಅಚ್ಚರಿ ಮೂಡಿಸಿತ್ತು. ಅಂದು ಕೊಹ್ಲಿ ನನ್ನ ಪರ ನಿಲ್ಲಿಲ್ಲ ಎಂದಿದ್ದಾರೆ ಅಂಬಾಟಿ ರಾಯುಡು.

ಇದನ್ನೂ ಓದಿ: ‘ಆರ್​​ಸಿಬಿಯ ಈ ಯಂಗ್​ ಬ್ಯಾಟರ್​ ಟೀಮ್​ ಇಂಡಿಯಾದಲ್ಲಿ ಆಡಬೇಕು’- ಗೌತಮ್​ ಗಂಭೀರ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

‘ನನ್ನ ಕ್ರಿಕೆಟ್​​ ಕರಿಯರ್​ ಹಾಳಾಗಿದ್ದೆ ಕೊಹ್ಲಿಯಿಂದ’- 2019ರ ಘಟನೆ ಬಗ್ಗೆ ಸತ್ಯ ಬಿಚ್ಚಿಟ್ಟ ಅಂಬಾಟಿ ರಾಯುಡು!

https://newsfirstlive.com/wp-content/uploads/2024/06/Ambati-Rayudu_Kohli-IND.jpg

Load More