/newsfirstlive-kannada/media/post_attachments/wp-content/uploads/2024/06/MONAK-PATEL.jpg)
- ಅಮೆರಿಕ ಕ್ರಿಕೆಟ್ ತಂಡದಲ್ಲಿ ಭಾರತೀಯ ಆಟಗಾರರು
- ಭಾರತೀಯ ಮೂಲದ ಕ್ರಿಕೆಟಿಗರು ಎಷ್ಟಿದ್ದಾರೆ ಗೊತ್ತಾ..?
- ಸೂಪರ್ ಓವರ್ನಲ್ಲಿ ನಡೆದ ಮ್ಯಾಜಿಕ್ ಹೇಗಿತ್ತು..?
ಗುರುವಾರ ನಡೆದ ಟಿ20 ವಿಶ್ವಕಪ್​ ಪಂದ್ಯದಲ್ಲಿ ಪಾಕ್​ಗೆ ಭಾರೀ ಮುಖಭಂಗವಾಗಿದೆ. ಅಮೆರಿಕಾದ ವಿರುದ್ಧ ಸೂಪರ್​ ಓವರ್​ನಲ್ಲಿ ಪಾಕ್​ ಸೋತಿದ್ದು, ಕ್ರಿಕೆಟ್ ಲೋಕದಲ್ಲಿ ಅಮೆರಿಕ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.
ಭಾರತೀಯ ಮೂಲದ ಕ್ರಿಕೆಟಿಗರು ಎಷ್ಟಿದ್ದಾರೆ ಗೊತ್ತಾ..?
ಡಲ್ಲಾಸ್​​ನ ಗ್ರ್ಯಾಂಡ್​​ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲಿ ಅಮೆರಿಕ ತಂಡ ಪಾಕ್​ ತಂಡವನ್ನು ಮಣಿಸಿದೆ. ಅದಕ್ಕೂ ಮುನ್ನ ಟಾಸ್​ ಗೆದ್ದು ಜಾಣತನದಿಂದ ಬೌಲಿಂಗ್​ ಆಯ್ದುಕೊಂಡ ಅಮೆರಿಕ ತಂಡ 20 ಓವರ್​ನಲ್ಲಿ ಪಾಕ್​ ತಂಡವನ್ನು 159 ರನ್​ಗೆ ಹಿಡಿದಿಟ್ಟುಕೊಂಡಿತ್ತು.
ಶಾಬಾದ್​ ಖಾನ್​ 25 ಎಸೆತಕ್ಕೆ 40 ರನ್​ ಒಂದು ಬೌಂಡರಿ ಮತ್ತು 6 ಸಿಕ್ಸ್​ ಬಾರಿಸಿದ್ರು. ಆದರೆ ಉಳಿದ ಆಟಗಾರರ ಪರ್ಫಾಮೆನ್ಸ್​ ಅಷ್ಟೇನು ಚೆನ್ನಾಗಿರಲಿಲ್ಲ. ಅಮೆರಿಕ ಬೌಲರ್ಸ್​ ನೋಸ್ತೂಶ್ ಕೆಂಜಿಗೆ 3, ಸೌರಭ್​ ನೇತ್ರವಾಲ್ಕರ್ 2​, ಅಲಿಖಾನ್​ ಮತ್ತು ಜಸ್ದೀಪ್​​ ಸಿಂಗ್​ ತಲಾ 1 ವಿಕೆಟ್​ ಕಬಳಿಸುವ ಮೂಲಕ ಪಾಕ್​ಗೆ ಕಾಡಿದರು.
ಇದನ್ನೂ ಓದಿ:ಆ 4 ಖಾತೆ ಕೇಳಂಗಿಲ್ಲ ಎಂದ ಬಿಜೆಪಿ.. ಚೌಕಾಸಿ ಮಾಡಿ ಹೊಸ ಫಾರ್ಮೂಲ ಮುಂದಿಟ್ಟ ನಾಯ್ಡು..!
ಅತ್ತ ಪಾಕ್​ ನೀಡಿದ ಟಾರ್ಗೆಟ್​ ಬೆನ್ನತ್ತಿದ ಅಮೆರಿಕ ಮಾತ್ರ ಗೆಲುವನ್ನು ಸಂಭ್ರಮಿಸುವ ಗುರಿ ಹೊಂದಿತ್ತು. ಅದರಲ್ಲೂ ಮೋನಾಂಕ್​ ಪಟೇಲ್​​ 38 ಎಸೆತಕ್ಕೆ 7 ಬೌಂಡರಿ, 1 ಸಿಕ್ಸ್​ ಬಾರಿ ಅರ್ಧ ಶತಕ ಪೂರೈಸಿದರು. ಅತ್ತ ಆ್ಯಂಡ್ರಿಸ್​ ಗಸ್​ ಮತ್ತು ಆ್ಯರೋನ್​ ಜೋನ್ಸ್​ ಇಬ್ಬರು 26 ಎಸೆತಕ್ಕೆ 35, 36 ರನ್​ ಬಾರಿಸಿದರು. ಕೊನೆಗೆ ಪಾಕ್​ ನೀಡಿದ ಟಾರ್ಗೆಟ್​ಗೆ ಬಂದು ಮುಟ್ಟಿಸುವ ಮೂಲಕ ಪಂದ್ಯ ಟೈ ಆಯಿತು. ವಿಶೇಷ ಅಂದರೆ ಭಾರತೀಯ ಮೂಲದ ಮೋನಾಂಕ್ ಪಟೇಲ್ ಅವರು 38 ಎಸೆತಗಳಲ್ಲಿ 50 ರನ್​ಗಳಿಸಿರೋದು ತಂಡದ ಗೆಲುವಿಗೆ ಸಹಾಯವಾಯಿತು. ಅದೇ ರೀತಿ ನಿತೀಶ್ ಕುಮಾರ್ ಕೂಡ ಅಮೆರಿಕ ಪರ ಬ್ಯಾಟಿಂಗ್ ಮಾಡಿದರು. ಅವರು ಬಾರಿಸಿದ ಒಂದು ಬೌಂಡರಿಯಿಂದಲೇ ಅಮೆರಿಕ ಗೆಲುವು ಸಾಧಿಸಿದೆ.
ಸೂಪರ್​ ಓವರ್ ಸೂಪರ್​ ಮ್ಯಾಜಿಕ್
ಪಂದ್ಯ ಟೈ ಆದ ಬಳಿಕ ಸೂಪರ್​ ಓವರ್​ಗೆ ಕೊಂಡೊಯ್ಯಿತು. ಇದರಲ್ಲಿ ಪಾಕ್​ 1 ವಿಕೆಟ್​ ಒಪ್ಪಿಸಿ 13 ರನ್ ಟಾರ್ಗೆಟ್​ ನೀಡಿತು. ಆದರೆ ಅಮೆರಿಕ ತಂಡ ಒಂದು ವಿಕೆಟ್​ ನೀಡಿದರು 18 ರನ್​ ಕಬಳಿಸಿತು. ಒಟ್ಟಿನಲ್ಲಿ ಪಾಕ್​ಗೆ ಅಮೆರಿಕ ತಾವೇನು ಕಡಿಮೆ ಇಲ್ಲ ಎಂಬುದನ್ನು ನಿನ್ನೆಯ ಪಂದ್ಯದಲ್ಲಿ ತೋರಿಸಿಕೊಟ್ಟಿದೆ.
ಅಮೆರಿಕ ತಂಡದಲ್ಲಿ ಭಾರತೀಯರು..!
ಇನ್ನು ಅಮೆರಿಕ ಕ್ರಿಕೆಟ್ ತಂಡದಲ್ಲಿ ಭಾರತೀಯ ಮೂಲದವರೇ ಹೆಚ್ಚಾಗಿದ್ದಾರೆ. ಮೋನಾಕ್ ಪಟೇಲ್ ಅವರು ಗುಜರಾತ್​​ನ ಆನಂದ್ ಮೂಲದವರಾಗಿದ್ದಾರೆ. ಬೌಲರ್ ಹರ್ಮೀತ್ ಸಿಂಗ್ ಮುಂಬೈ ಮೂಲದವರಾದ್ರೆ, ಸೌರಭ್ ಕೂಡ ಮಹಾರಾಷ್ಟ್ರದವರು. ಇನ್ನು ಮಿಲಿಂದ್ ಕುಮಾರ್​ ದೆಹಲಿ ಮೂಲದವರಾಗಿದ್ದಾರೆ. ನಿಸ್ಸಾರ್ಗ್​ ಪಟೇಲ್ ಗುಜರಾತಿನವರಾಗಿದ್ದಾರೆ. ಇನ್ನು ಅಲಿ ಖಾನ್ ಮತ್ತು ಶಯಾನ್ ಜಹಂಗೀರ್ ಅವರು ಪಾಕಿಸ್ತಾನ ಮೂಲದವರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ