newsfirstkannada.com

IND vs PAK ಪಂದ್ಯಕ್ಕೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​​.. ಜಸ್ಟ್​ 10 ಸೆಕೆಂಡ್ಸ್ ಜಾಹೀರಾತಿಗೆ ಅರ್ಧ ಕೋಟಿ..!

Share :

Published June 7, 2024 at 7:00am

Update June 7, 2024 at 8:08am

    ಪಂದ್ಯ ಪ್ರಸಾರ ವಾಹಿನಿಗೆ ಬಂಪರ್ ಜಾಕ್​ಪಾಟ್​​​..!

    ಸೆಕೆಂಡ್ಸ್​​​ಗೆ ಲಕ್ಷ ಲಕ್ಷ ಹಣ.. ಹಿಂದೆಂದೂ ಕಾಣದಷ್ಟು ಕ್ರೇಜ್​​​​..!

    ಕಳೆದ ಸಲಕ್ಕಿಂತ 22-25% ಜಾಹೀರಾತು ರೇಟು ಹೆಚ್ಚು..!

ಇಂಡೋ-ಪಾಕ್​​ ಪಂದ್ಯ ಅಂದ್ರೆ ಬರಿ ಕಣ್ಣಿಗಷ್ಟೇ ಹಬ್ಬ ಅಲ್ಲ. ಪ್ರಸಾರ ವಾಹಿನಿಗೂ ದೊಡ್ಡ ಹಬ್ಬ. ಬದ್ಧವೈರಿಗಳ ಕಾದಾಟದಿಂದ ಸ್ಟಾರ್ ಇಂಡಿಯಾ ವಾಹಿನಿ ನಸೀಬು ತೆರೆದಿದೆ.

ಇಂಡೋ-ಪಾಕ್​​ ಪಂದ್ಯಕ್ಕೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​​..!
ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸರಣಿ ಆಡದೇ ದಶಕಗಳೇ ಕಳೆದಿವೆ. ಕೇವಲ ಐಸಿಸಿ ಟೂರ್ನಾಮೆಂಟ್​ಗಳಲ್ಲಿ ಮಾತ್ರ ಮುಖಾಮುಖಿಯಾಗ್ತಿವೆ. ಎದುರಾಗಲೆಲ್ಲಾ ನೆಕ್ಸ್ಟ್ ಲೆವೆಲ್​​​​​ ಕ್ರೇಜ್​​ ಹಾಗೂ ಹೈಪ್ ಇರುತ್ತೆ. ಸದ್ಯ ಅದೇ ಕ್ರೇಜ್ ಟಿ20 ವಿಶ್ವಕಪ್​​​​ ಮಹಾಸಂಗ್ರಾಮದಲ್ಲಿ ಕಾಣಿಸ್ತಿದೆ. ಜೂನ್​​ 9 ರಂದು ಸಾಂಪ್ರದಾಯಿಕ ಎದುರಾಳಿಗಳು ಕಾದಾಡಲಿದ್ದು ಮೆಗಾ ಬ್ಯಾಟಲ್​ಗೆ ಇನ್ನಿಲ್ಲದ ಡಿಮ್ಯಾಂಡ್ ಕುದುರಿದೆ.

ಇದನ್ನೂ ಓದಿ:ಅಪ್ಪ, ಅಮ್ಮ ಇಬ್ಬರೂ IAS; 10ನೇ ಮಹಡಿಯಿಂದ ಜಿಗಿದು ಪುತ್ರಿ ಸಾವು.. ಡೆತ್​ನೋಟ್​ನಲ್ಲಿ ಕಾರಣ ರಿವೀಲ್..

ಇಂಡೋ-ಪಾಕ್​​ ನೋಡುಗರಿಗೆ ಇನ್ನಿಲ್ಲದ ಮನರಂಜನೆ ನೀಡುತ್ತೆ ನಿಜ. ಆದ್ರೆ ಪಂದ್ಯಾವಳಿ ಆಯೋಜಿಸುವ ಐಸಿಸಿ ಹಾಗೂ ಸ್ಟಾರ್ ವಾಹಿನಿ ಈ ಪಂದ್ಯದಿಂದ ಕೋಟಿ ಕೋಟಿ ಹಣ ಜೇಬಿಗಿಳಿಸುತ್ತೆ. ಭಾನುವಾರ ನಡೆಯುವ ಬಿಗ್​​ ಗೇಮ್​​​ನಿಂದ ಸ್ಟಾರ್​ ಇಂಡಿಯಾ ವಾಹಿನಿಗೆ ಬಂಪರ್​ ಜಾಕ್​ಪಾಟ್​​​ ಹೊಡೆದಿದ್ದು, ಸೆಕೆಂಡ್ಸ್​ಗೆ ಲಕ್ಷ ಲಕ್ಷ ಹಣ ಜೇಬಿಗಿಳಿಸಿಕೊಳ್ತಿದೆ.

ಭಾರತ-ಪಾಕ್​ ಪಂದ್ಯ ಅಂದ್ರೆ ಪ್ರಸಾರ ವಾಹಿನಿಗಳಿಗೆ ದೊಡ್ಡ ಹಬ್ಬ. ಈ ಒಂದೇ ಒಂದು ಪಂದ್ಯದಿಂದ ನೂರಾನೂರು ಕೋಟಿ ರೂಪಾಯಿ ಗಳಿಸ್ತಾರೆ. ಈ ಸಲವು ಅದರಿಂದ ಹಿಂದೆ ಬಿದ್ದಿಲ್ಲ. ಕಳೆದ ಬಾರಿಗೆ ಹೋಲಿಸಿದ್ರೆ ಜಾಹೀರಾತಿನ ದರ 22-25% ಹೆಚ್ಚಾಗಿದೆ. ಪಂದ್ಯ ಪ್ರಸಾರದ ಟಿವಿ ಹಕ್ಕು ಪಡೆದಿರೋ ಸ್ಟಾರ್ ಸ್ಪೋರ್ಟ್ಸ್​​ ವಾಹಿನಿ ಆ ದಿನ 10 ಸೆಕೆಂಡ್ಸ್​ ಜಾಹೀರಾತಿಗೆ ಬರೋಬ್ಬರಿ 50 ಲಕ್ಷ ರೂಪಾಯಿ ಗಳಿಸಲಿದೆ. ಈಗಾಗ್ಲೇ ಈ ಮ್ಯಾಚ್​ನ ಶೇಕಡಾ 90 ರಷ್ಟು ಜಾಹೀರಾತು ಫುಲ್​ ಆಗಿದೆ.

ಜಾಹೀರಾತು ರೇಟ್​​​ 22-25% ಹೆಚ್ಚಿದೆ
ಭಾರತ-ಪಾಕಿಸ್ತಾನ ಪಂದ್ಯ ದೊಡ್ಡ ಪ್ರಮಾಣದಲ್ಲಿ ಆದಾಯ ತಂದು ಕೊಡುತ್ತೆ. ಕಳೆದ ಬಾರಿಗಿಂತ ಈ ಬಾರಿ ಟಿವಿ ಹಾಗೂ ಡಿಜಿಟಲ್​​​​​​​​​​​ ಜಾಹೀರಾತಿನ ದರ 22-25% ಹೆಚ್ಚಾಗಿದೆ ಹಾಗೂ ಈ ಪಂದ್ಯಕ್ಕೆ ಬ್ರಾಂಡ್​​ ಜಾಹೀರಾತುದಾರರು ಮುಂದಾಗಿದ್ದಾರೆ. ಉತ್ತಮ ಆದಾಯದ ನಿರೀಕ್ಷೆಯಲ್ಲಿವೆ-ಇಂಡಸ್ಟ್ರಿಯಲ್​ ಪರಿಣತ

ಇದನ್ನೂ ಓದಿ:ವಿಶ್ವಕಪ್​​ನಲ್ಲೂ RCB ಬ್ಯಾಟ್ಸ್​​ಮನ್ ಫ್ಲಾಪ್​ ಶೋ.. ಇವತ್ತು ಗಳಿಸಿದ ರನ್ ಎಷ್ಟು ಗೊತ್ತಾ?

ಭಾರತದ ಉಳಿದ ಪಂದ್ಯಗಳಿಗೆ 11.25 ಲಕ್ಷ ರೂಪಾಯಿ
ಇಂಡೋ-ಪಾಕ್​​​ ಪಂದ್ಯದ ದಿನ 10 ಸೆಕೆಂಡ್ಸ್ ಜಾಹೀರಾತಿಗೆ 50 ಲಕ್ಷ ಬೇಬಿಗಿಳಿಸಿಕೊಳ್ಳುವ ಪ್ರಸಾರ ವಾಹಿನಿ ಉಳಿದ ಪಂದ್ಯಗಳಿಗೆ ದರವನ್ನ ಕಮ್ಮಿ ಮಾಡಿದೆ. ಪಾಕಿಸ್ತಾನವನ್ನ ಹೊರತಪಡಿಸಿ ಭಾರತ ಆಡುವ ಉಳಿದ ಪಂದ್ಯಗಳ ವೇಳೆ 10 ಸೆಕೆಂಡ್ಸ್ ಜಾಹೀರಾತಿಗೆ 11.25 ಲಕ್ಷ ರೂಪಾಯಿ ಜೇಬಿಗಿಳಿಸಿಕೊಳ್ಳಲಿದೆ. ಇನ್ನು ನಾನ್​​ಇಂಡಿಯನ್ ಮ್ಯಾಚ್​ಗೆ 10 ಸೆಕೆಂಡ್ಸ್​​​​​​ಗೆ 4.50 ಲಕ್ಷ ರೂಪಾಯಿ ಗಳಿಸಲಿದೆ.

ಟಿಕೆಟ್​ ದರವು ಬಲು ದುಬಾರಿ
ಬರೀ ಅಡ್ವರ್​​ಟೈಸ್​ಮೆಂಟ್​ ಅಲ್ಲ ಇಂಡೋ-ಪಾಕ್​​ ಪಂದ್ಯದ ಟಿಕೆಟ್ ದರವು ಗಗನಕುಸುಮವಾಗಿದೆ. ನಸೌ ಕೌಂಟಿ ಸ್ಟೇಡಿಯಂನಲ್ಲಿ 3 ಬಗೆಯ ಟಿಕೆಟ್​ ಪ್ಯಾಕೇಜ್ ಇದ್ದು, ಒಂದೊಂದರ ಬೆಲೆ ಲಕ್ಷ ಲಕ್ಷ ಮೀರಿದೆ. ಡೈಮಂಡ್ ಕ್ಲಬ್ ಟಿಕೆಟ್ ಬೆಲೆ ​ 8,34,323 ರೂ ಆದ್ರೆ ಪ್ರೀಮಿಯಮ್ ಕ್ಲಬ್​ 2,08,585 ಹಾಗೂ ಕಾರ್ನರ್​​​​​ ಕ್ಲಬ್ ಗರಿಷ್ಠ ಬೆಲೆ 15 ಲಕ್ಷದ 2 ಸಾವಿರ ರೂಪಾಯಿ ಆಗಿದೆ. ಲಕ್ಷ ಲಕ್ಷ ಕೊಟ್ರೂ ಟಿಕೆಟ್​​ಗೆ ಡಿಮ್ಯಾಂಡ್ ಮಾತ್ರ ತಪ್ಪಿಲ್ಲ. ಹೀಗಾಗಿ ಮುಂಬರುವ ದಿನಗಳಲ್ಲಿ ಟಿಕೆಟ್ ಬೆಲೆ ಕೋಟಿ ಆದ್ರೂ, ಅಚ್ಚರಿ ಪಡಬೇಕಿಲ್ಲ.!

ಇದನ್ನೂ ಓದಿ:ರಾಹುಲ್ ಗಾಂಧಿ ಅಚ್ಚರಿ ನಿರ್ಧಾರ.. ಅದೃಷ್ಟ ಒಲಿದು ಬಂದರೂ ಒಲ್ಲೆ ಅಂದಿದ್ದೇಕೆ..?

ಒಟ್ಟಿನಲ್ಲಿ ವಿಶ್ವಕಪ್​ ಅಖಾಡದಲ್ಲಿ ಇಂಡೋ-ಪಾಕ್​ ಪಂದ್ಯಕ್ಕೆ ಮ್ಯಾಚ್​ ಆಗುವ ಮತ್ತೊಂದು ಪಂದ್ಯವಿಲ್ಲ. ಇದರ ಕ್ರೇಜ್​​ ಮುಂದೆ ಮತ್ಯಾವುದು ಇಲ್ಲ. ಹೀಗಾಗಿನೇ ಬದ್ಧವೈರಿಗಳ ಕಾದಾಟಕ್ಕೆ ಇನ್ನಿಲ್ಲದ ಡಿಮ್ಯಾಂಡ್ ಕುದುರಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

IND vs PAK ಪಂದ್ಯಕ್ಕೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​​.. ಜಸ್ಟ್​ 10 ಸೆಕೆಂಡ್ಸ್ ಜಾಹೀರಾತಿಗೆ ಅರ್ಧ ಕೋಟಿ..!

https://newsfirstlive.com/wp-content/uploads/2024/06/IND-vs-PAK.jpg

Load More