newsfirstkannada.com

ಪ್ರಜ್ವಲ್ ರೇವಣ್ಣ ವಿಡಿಯೋವನ್ನು ಒಪ್ಪಿಕೊಳ್ಳಲಾಗಲ್ಲ; ಗೃಹ ಸಚಿವ ಅಮಿತ್​ ಶಾ

Share :

Published April 30, 2024 at 11:05am

Update April 30, 2024 at 11:07am

    ಹಾಸನ ಅಶ್ಲೀಲ ವಿಡಿಯೋ ಕೇಸ್​ಗೆ ಅಮಿತ್​ ಶಾ ಪ್ರತಿಕ್ರಿಯೆ

    ನಾರಿಶಕ್ತಿಗೆ ಅಪಮಾನವಾಗುವುದನ್ನು ಸಹಿಸಲ್ಲ ಎಂದ ಗೃಹ ಸಚಿವರು

    ರಾಜ್ಯ ಸರ್ಕಾರವನ್ನೇ ಪ್ರಶ್ನೆ ಮಾಡಿದ ಅಮಿತ್​ ಶಾ? ಏನಂದ್ರು ಗೊತ್ತಾ?

ಹಾಸನ ಅಶ್ಲೀಲ ವಿಡಿಯೋ ಕೇಸ್​ಗೆ ಸಂಬಂಧಿಸಿ ಕೇಂದ್ರ ತುಟಿ ಬಿಚ್ಚುತ್ತಿಲ್ಲವೆಂದು ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸುತ್ತಾ ಬಂದಿದ್ದರು. ಆದರೀಗ ಕೇಂದ್ರ ಗೃಹ ಮಂತ್ರಿ ಅಮಿತ್​ ಶಾ ಈ ಪ್ರಕರಣ ಕುರಿತು ಮಾತನಾಡಿದ್ದಾರೆ. ಕರ್ನಾಟಕ ಸರ್ಕಾರ ಏಕೆ ಶೀಘ್ರಗತಿಯಲ್ಲಿ ತನಿಖೆ ನಡೆಸುತ್ತಿಲ್ಲ? ಎಂದು ಸಿದ್ದರಾಮಯ್ಯನವರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಅಸ್ಸಾಂನ ಗುವಾಹಾಟಿಯಲ್ಲಿ ಅಮಿತ್ ಶಾ ಹಾಸನ ಅಶ್ಲೀಲ ವಿಡಿಯೋ ಪ್ರಕರಣದ ಕುರಿತಾಗಿ ಮಾತನಾಡಿದ್ದಾರೆ. ಪ್ರಜ್ವಲ್ ರೇವಣ್ಣ ವಿಡಿಯೋವನ್ನು ಒಪ್ಪಿಕೊಳ್ಳಲಾಗಲ್ಲ. ಮಹಿಳೆಯರ ಘನತೆಗೆ ಧಕ್ಕೆಯಾಗುವುದನ್ನು ಖಂಡಿಸುತ್ತೇನೆ. ನಾರಿಶಕ್ತಿಗೆ ಅಪಮಾನವಾಗುವುದನ್ನು ಸಹಿಸಲ್ಲ. ಕರ್ನಾಟಕ ಸರ್ಕಾರ ಏಕೆ ಶೀಘ್ರಗತಿಯಲ್ಲಿ ತನಿಖೆ ನಡೆಸುತ್ತಿಲ್ಲ?. ಎಂದು ರಾಜ್ಯ ಕರ್ನಾಟಕ ಸರ್ಕಾರವನ್ನು ಅಮಿತ್ ಶಾ ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ 2ನೇ ಹಂತದ ಚುನಾವಣೆಗಾಗಿ ಕರ್ನಾಟಕಕ್ಕೆ ಆಗಮಿಸಿದ್ದರು. 2 ದಿನಗಳ ಕಾಲ ಭರ್ಜರಿ ಮತ ಪ್ರಚಾರ ಮಾಡಿದ್ದರು. ಆದರೆ ಈ ಪ್ರಕರಣದ ಕುರಿತು ಮಾತನಾಡಿರಲಿಲ್ಲ. ಇದೀಗ ಗೃಹ ಸಚಿವ ಅಮಿತ್​ ಶಾ ಅಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಮಾನಸಿಕ ಅಸ್ವಸ್ಥ ಬಾಲಕಿಯನ್ನೂ ಬಿಡದ ಕಾಮುಕ.. ಗರ್ಭಿಣಿ ಮಾಡಿದ ಅತ್ಯಾಚಾರಿಗೆ 106 ವರ್ಷ ಜೈಲು ಶಿಕ್ಷೆ

ಇನ್ನು ಪ್ರಜ್ವಲ್​ ರೇವಣ್ಣ ಜಮರ್ನಿಗೆ ಹೋಗಿದ್ದು, ಸದ್ಯ ಈ ಪ್ರಕರಣದ ಕುರಿತು ಎಸ್​ಐಟಿ ತನಿಖೆ ನಡೆಸುತ್ತಿದೆ. ಮತ್ತೊಂದೆಡೆ ಪ್ರಜ್ವಲ್​ ಹಾಗೂ ತಂದೆ ರೇವಣ್ಣ ವಿರುದ್ಧ ಎಫ್​ಐಆರ್​ ಕೂಡ ದಾಖಲಾಗಿದೆ. ಅತ್ತ ಲೋಕಸಭಾ ಅಭ್ಯರ್ಥಿಯಾಗಿರುವ ಪ್ರಜ್ವಲ್​ರನ್ನ ಮಾಜಿ ಪ್ರಧಾನಿ ದೇವೇಗೌಡರು ಜೆಡಿಎಸ್​ ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ. ಇಂದು ಉಚ್ಛಾಟನೆ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.

ಒಟ್ಟಿನಲ್ಲಿ ರಾಜ್ಯದಲ್ಲಿ ಬೆಳಕಿಗೆ ಬಂದ ಈ ಪ್ರಕರಣ ಎಲ್ಲರನ್ನು ಅಚ್ಚರಿಗೆ ದೂಡುವಂತೆ ಮಾಡಿದೆ. ಮತ್ತೊಂದೆಡೆ ಲೋಕಸಭಾ ಸಭೆಗೆ ಬಿಜೆಪಿ ಮತ್ತು ಜೆಡಿಎಸ್​ ಪಕ್ಷ ಮೈತ್ರಿ ಮಾಡಿಕೊಂಡಿದ್ದಿದ್ದು, ಇದರ ನಡುವೆ ಈ ಅಶ್ಲೀಲ ವಿಡಿಯೋ ಕೇಸ್​​ ಚುನಾವಣೆಯ ದಾರಿಯನ್ನು ಬದಲಾಯಿಸುವ ನಿರೀಕ್ಷೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಜ್ವಲ್ ರೇವಣ್ಣ ವಿಡಿಯೋವನ್ನು ಒಪ್ಪಿಕೊಳ್ಳಲಾಗಲ್ಲ; ಗೃಹ ಸಚಿವ ಅಮಿತ್​ ಶಾ

https://newsfirstlive.com/wp-content/uploads/2024/04/Amit-shah-3.jpg

Load More