newsfirstkannada.com

Electoral Bond: 303 ಸಂಸದರಿರುವ ಬಿಜೆಪಿಗೆ 6000 ಕೋಟಿ, ಇನ್ನುಳಿದ 14,000 ಕೋಟಿ ಎಲ್ಲಿಗೆ ಹೋಯ್ತು? ಅಮಿತ್ ಪ್ರಶ್ನೆ

Share :

Published March 16, 2024 at 10:07am

    ಕಪ್ಪುಹಣದ ಪ್ರಾಬಲ್ಯ ಕೊನೆಗೊಳಿಸಲು ಚುನಾವಣಾ ಬಾಂಡ್‌ ತರಲಾಗಿತ್ತು

    ಚುನಾವಣಾ ಬಾಂಡ್​ನಿಂದ ಬಿಜೆಪಿಗೆ ಲಾಭ ಎಂದಿದ್ದ ರಾಹುಲ್​​ ವಿರುದ್ಧ ಗರಂ

    Electoral Bondsನಿಂದ ಯಾವ ಪಕ್ಷಗಳು ಎಷ್ಟು ಕೋಟಿ ಸ್ವೀಕಾರ ಮಾಡಿವೆ?

ದೇಶದ ರಾಜಕೀಯದಲ್ಲಿ ಕಪ್ಪುಹಣದ ಪ್ರಾಬಲ್ಯ ಕೊನೆಗೊಳಿಸಲು ಚುನಾವಣಾ ಬಾಂಡ್‌ ತರಲಾಗಿತ್ತು. ಆದರೆ ಸುಪ್ರೀಂ ಕೋರ್ಟ್ ಅದನ್ನು ಅಮಾನ್ಯ ಮಾಡಿದೆ. ಕೋರ್ಟ್​ ನೀಡಿರುವ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ. ಚುನಾವಣಾ ಆಯೋಗವು ಚುನಾವಣಾ ಬಾಂಡ್‌ಗಳ ಕುರಿತು ಎಸ್‌ಬಿಐನಿಂದ ಪಡೆದ ಡೇಟಾವನ್ನು ಸಾರ್ವಜನಿಕಗೊಳಿಸಿದ ಬೆನ್ನಲ್ಲೇ ಅಮಿತ್ ಶಾ ಅದರ ಬಗ್ಗೆ ಮೌನಮುರಿದಿದ್ದಾರೆ.

14 ಸಾವಿರ ಕೋಟಿ ಯಾರಿಗೆ ಹೋಗಿದೆ..?

ಕೋರ್ಟ್​ ತೀರ್ಪಿನ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ. ಆದರೆ ಯಾವುದೇ ವೇದಿಕೆಯಲ್ಲಿ ಯಾವುದೇ ವ್ಯಕ್ತಿಯೊಂದಿಗೆ ಈ ಬಗ್ಗೆ ಚರ್ಚಿಸಲು ಸಿದ್ಧ. ಬಿಜೆಪಿ ಚುನಾವಣಾ ಬಾಂಡ್‌ಗಳಿಂದ ದೊಡ್ಡ ಲಾಭ ಪಡೆದುಕೊಂಡಿದೆ ಎಂಬ ವದಂತಿ ಹಬ್ಬಿಸಲಾಗ್ತಿದೆ. ರಾಹುಲ್ ಗಾಂಧಿ ಅವರೇ ಈ ಹೇಳಿಕೆ ನೀಡಿದ್ದಾರೆ. ದೇಶದ ಜನತೆಗೆ ನನ್ನ ನಿಲುವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಬಿಜೆಪಿ 6000 ಕೋಟಿ ರೂಪಾಯಿ ಮೌಲ್ಯದ ಬಾಂಡ್‌ಗಳನ್ನು ಸ್ವೀಕರಿಸಿದೆ. ಒಟ್ಟು 20,000 ಕೋಟಿ ರೂಪಾಯಿ ಮೌಲ್ಯದ ಬಾಂಡ್​ಗಳು ಎಸ್​ಬಿಐನಿಂದ ಸ್ವೀಕಾರ ಆಗಿವೆ. ಹಾಗಿದ್ದರೆ ಇನ್ನುಳಿದ 14,000 ಕೋಟಿ ಮೌಲ್ಯದ ಬಾಂಡ್‌ಗಳು ಎಲ್ಲಿಗೆ ಹೋದವು? ಎಂದು ಅಮಿತ್ ಶಾ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದ ಕಂಪನಿ ಭಾರತದ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಿದೆಯೇ..? Electoral Bondನ ಸತ್ಯಾಸತ್ಯತೆ ಬಹಿರಂಗ..!

ಅದನ್ನು ನಾನು ಹೇಳುತ್ತೇನೆ ಎಂದು ಮುಂದುವರಿಸಿದ ಅವರು.. ಟಿಎಂಸಿಗೆ 1600 ಕೋಟಿ, ಕಾಂಗ್ರೆಸ್‌ಗೆ 1400 ಕೋಟಿ, ಬಿಆರ್‌ಎಸ್‌ಗೆ 1200 ಕೋಟಿ, ಬಿಜೆಡಿಗೆ 775 ಮತ್ತು ಡಿಎಂಕೆಗೆ 639 ಕೋಟಿ. ದೇಶದಲ್ಲಿ ಬಿಜೆಪಿಯಲ್ಲಿ 303 ಸಂಸದರಿದ್ದು 6000 ಕೋಟಿ ರೂಪಾಯಿ ಮೌಲ್ಯದ ಬಾಂಡ್‌ಗಳನ್ನು ಪಡೆದುಕೊಂಡಿದ್ದಾರೆ. ವಿರೋಧ ಪಕ್ಷಗಳಲ್ಲಿ 242 ಸಂಸದರಿದ್ದಾರೆ. ಅವರು 14,000 ಕೋಟಿ ರೂಪಾಯಿಗಳ ಬಾಂಡ್‌ ಪಡೆದಿವೆ. ವಿರೋಧ ಪಕ್ಷಗಳು ಯಾಕೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಿರಿ ಎಂದು ಅಮಿತ್ ಶಾ ಪ್ರಶ್ನೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Electoral Bond: 303 ಸಂಸದರಿರುವ ಬಿಜೆಪಿಗೆ 6000 ಕೋಟಿ, ಇನ್ನುಳಿದ 14,000 ಕೋಟಿ ಎಲ್ಲಿಗೆ ಹೋಯ್ತು? ಅಮಿತ್ ಪ್ರಶ್ನೆ

https://newsfirstlive.com/wp-content/uploads/2024/03/AMIT.jpg

Load More