newsfirstkannada.com

ಅಯೋಧ್ಯೆಯಲ್ಲಿ 14.5 ಕೋಟಿ ರೂ.ಗೆ ಭೂಮಿ ಖರೀದಿಸಿದ ಅಮಿತಾಬ್ ಬಚ್ಚನ್; ಏನಿದರ ಸ್ಪೆಷಲ್‌ ಗೊತ್ತಾ?

Share :

Published January 15, 2024 at 1:47pm

    ‘ಆಧ್ಯಾತ್ಮದ ರಾಜಧಾನಿ ಅಯೋಧ್ಯೆಯಲ್ಲೇ ನಾನು ಒಂದು ಮನೆ ಕಟ್ಟುವೆ’

    ದಿ ಹೌಸ್ ಆಫ್ ಅಭಿನಂದನ್ ಲೋಧಾರಿಂದ ಜಾಗ ಖರೀದಿಸಿದ ಮೊದಲ ವ್ಯಕ್ತಿ

    ಅಯೋಧ್ಯೆಯಲ್ಲಿ ಸೆವೆನ್ ಸ್ಟಾರ್ ಹೊಟೇಲ್ ನಿರ್ಮಾಣಕ್ಕೆ ಬಹಳಷ್ಟು ಅರ್ಜಿ

ಬಾಲಿವುಡ್ ಬಿಗ್‌ ಬಿ ಅಮಿತಾಬ್ ಬಚ್ಚನ್ ಅವರು ಅಯೋಧ್ಯೆಯಲ್ಲಿ 10 ಸಾವಿರ ಚದರ ಅಡಿಯ ಭೂಮಿಯನ್ನು ಖರೀದಿಸಿದ್ದಾರೆ. 10 ಸಾವಿರ ಚದರ ಅಡಿ ಜಾಗವನ್ನು 14.5 ಕೋಟಿ ರೂಪಾಯಿಗೆ ಈ ಜಾಗ ಖರೀದಿಸಲಾಗಿದ್ದು, ಜಾಗತಿಕ ಆಧ್ಯಾತ್ಮದ ರಾಜಧಾನಿ ಅಯೋಧ್ಯೆಯಲ್ಲೇ ನಾನು ಒಂದು ಮನೆ ಕಟ್ಟುವೆ ಎಂದು ಅಮಿತಾಬ್ ಬಚ್ಚನ್ ಹೇಳಿದ್ದಾರೆ.

ಅಮಿತಾಬ್ ಬಚ್ಚನ್ ಅವರು ಖರೀದಿಸಿರುವ ಈ ಜಾಗದಿಂದ ಕೇವಲ 15 ನಿಮಿಷದಲ್ಲಿ ಅಯೋಧ್ಯೆ ರಾಮಮಂದಿರವನ್ನು ತಲುಪಬಹುದಾಗಿದೆ. ಅಯೋಧ್ಯೆಯ ಏರ್‌ಪೋರ್ಟ್‌ನಿಂದ ಈ ಜಾಗಕ್ಕೆ ಅರ್ಧ ಗಂಟೆಯ ಪ್ರಯಾಣದ ಅವಧಿ ಇದೆ. ಅಯೋಧ್ಯೆಯ ಈ ಜಾಗದಲ್ಲೇ ಮನೆ ನಿರ್ಮಿಸಲು ಅಮಿತಾಬ್ ಬಚ್ಚನ್ ನಿರ್ಧಾರ ಮಾಡಿದ್ದಾರೆ.

ಅಯೋಧ್ಯೆಯಲ್ಲಿ ಬಿಗ್‌ಬಿ ಅಮಿತಾಬ್ ಬಚ್ಚನ್ ಅವರು ದಿ ಹೌಸ್ ಆಫ್ ಅಭಿನಂದನ್ ಲೋಧಾರಿಂದ 10 ಸಾವಿರ ಚದರ ಅಡಿಯ ಜಾಗವನ್ನು ಖರೀದಿಸಿದ್ದಾರೆ. ಅಯೋಧ್ಯೆಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಅಯೋಧ್ಯೆಯಲ್ಲಿ ಸಂಪ್ರದಾಯ, ಆಧುನೀಕತೆ ಎರಡರ ಸಮ್ಮಿಲನವಾಗಿದೆ. ನನ್ನ ಹೃದಯಸ್ಪರ್ಶಿ ಪ್ರಯಾಣವು ಅಯೋಧ್ಯೆಯ ಆತ್ಮದೊಂದಿಗೆ ಆರಂಭವಾಗಿದೆ. ಹೀಗಾಗಿ ಜಾಗತಿಕ ಆಧ್ಯಾತ್ಮ ರಾಜಧಾನಿಯಲ್ಲಿ ನನ್ನ ಮನೆ ನಿರ್ಮಾಣವನ್ನು ಎದುರು ನೋಡುತ್ತಿದ್ದೇನೆ ಎಂದು ಅಮಿತಾಬ್ ಬಚ್ಚನ್ ಹೇಳಿದ್ದಾರೆ.

ಇದನ್ನೂ ಓದಿ: ಅಯೋಧ್ಯೆಯ ಅದ್ಭುತ ಫೋಟೋಗಳು.. ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಿಂದ ಇಂದು ಮಹತ್ವದ ಮಾಹಿತಿ

ಅಮಿತಾಬ್ ಬಚ್ಚನ್ ಖರೀದಿಸಿರುವ ಭೂಮಿಯು ಅಯೋಧ್ಯೆ ಸರಯೂ ದಂಡೆಯಲ್ಲಿದೆ. ದಿ ಹೌಸ್ ಆಫ್ ಅಭಿನಂದನ್ ಲೋಧಾರಿಂದ ಜಾಗ ಖರೀದಿಸಿದ ಮೊದಲ ವ್ಯಕ್ತಿ ಅಮಿತಾಬ್ ಬಚ್ಚನ್ ಅವರಾಗಿದ್ದಾರೆ. ಅಯೋಧ್ಯೆಯ ಆರ್ಥಿಕ ಸಾಮರ್ಥ್ಯ, ಆಧ್ಯಾತ್ಮದ ಪರಂಪರೆಯ ಮೆಚ್ಚುಗೆಯನ್ನು ಈ ಜಾಗ ಖರೀದಿ ಸೂಚಿಸುತ್ತೆ ಎಂದು ಅಭಿನಂದನ್ ಲೋಧಾ ಹೇಳಿದ್ದಾರೆ.

ಸೆವೆನ್ ಸ್ಟಾರ್ ಹೋಟೆಲ್‌ ನಿರ್ಮಾಣಕ್ಕೆ ಡಿಮ್ಯಾಂಡ್‌!
ರಾಮಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯ ಸಕಲ ಸಿದ್ಧತೆಗಳು ಜೋರಾಗಿದೆ. ಜನವರಿ 22ರಂದು ರಾಮಮಂದಿರ ಲೋಕಾರ್ಪಣೆ ಆಗುತ್ತಿದ್ದು, ಅಯೋಧ್ಯೆ ಇಡೀ ವಿಶ್ವದ ಗಮನ ಸೆಳೆದಿದೆ. ಭವ್ಯ ರಾಮಮಂದಿರ ತಲೆ ಎತ್ತುತ್ತಿರುವ ಈ ಸುವರ್ಣ ಸಂದರ್ಭದಲ್ಲಿ ಅಯೋಧ್ಯೆಯ ಭೂಮಿಗೆ ಸಖತ್ ಡಿಮ್ಯಾಂಡ್ ಬಂದಿದೆ.

ರಾಮಮಂದಿರ ಉದ್ಘಾಟನೆಗೂ ಮುನ್ನವೇ ಅಯೋಧ್ಯೆಯಲ್ಲಿ ಸೆವೆನ್ ಸ್ಟಾರ್ ಹೊಟೇಲ್ ನಿರ್ಮಾಣ ಮಾಡಲು ವಿವಿಧ ಕಂಪನಿಗಳು ಅರ್ಜಿ ಹಾಕಿವೆ. ಉತ್ತರ ಪ್ರದೇಶ ಸರ್ಕಾರಕ್ಕೆ ಪ್ರತಿಷ್ಠಿತ ವಿವಿಧ ಕಂಪನಿಗಳು ಅರ್ಜಿ ಸಲ್ಲಿಸಿದ್ದು, 25ಕ್ಕೂ ಹೆಚ್ಚು ಫೈವ್ ಸ್ಟಾರ್, ಸೆವೆಲ್ ಸ್ಟಾರ್ ಹೋಟೇಲ್ ನಿರ್ಮಾಣಕ್ಕೆ ಅನುಮತಿ ಕೋರಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯೋಧ್ಯೆಯಲ್ಲಿ 14.5 ಕೋಟಿ ರೂ.ಗೆ ಭೂಮಿ ಖರೀದಿಸಿದ ಅಮಿತಾಬ್ ಬಚ್ಚನ್; ಏನಿದರ ಸ್ಪೆಷಲ್‌ ಗೊತ್ತಾ?

https://newsfirstlive.com/wp-content/uploads/2024/01/Ayodhya-Amitab-Bachan.jpg

Load More