newsfirstkannada.com

ಅಮೃತಧಾರೆ ಗೌತಮ್​​ ಅಭಿನಯಕ್ಕೆ ಮನಸೋತ ವೀಕ್ಷಕರು​; ನಿಮ್ಮಂತ ಗಂಡನೇ ಬೇಕು ಎಂದ ನಾರಿಯರು

Share :

Published May 26, 2024 at 5:04pm

  ಅಭಿಮಾನಿಗಳಿಗೆ ದಿನದಿಂದ ದಿನಕ್ಕೆ ಇಷ್ಟವಾಗುತ್ತಿದೆ ಗೌತಮ್​, ಭೂಮಿಕಾ ಪ್ರೀತಿ

  ಗೌತಮ್​ ಭೂಮಿಕಾ ಇಬ್ಬರ ರೊಮ್ಯಾಂಟಿಕ್ ಸೀನ್ಸ್​ಗಳಿಗಾಗಿ ಕಾದು ಕುಳಿತ ಫ್ಯಾನ್ಸ್

  ಸಾವಿನಂಚಿನಲ್ಲಿದ್ದ ಭೂಮಿಕಾರನ್ನು ರಕ್ಷಣೆ ಮಾಡಿದ ಪ್ರೀತಿಯ ಪತಿ ಗೌತಮ್​ ದಿವಾನ್

ಗೌತಮ್ ಹಾಗೂ​ ಭೂಮಿಕಾ ವಿಭಿನ್ನ ಲವ್​ ಸ್ಟೋರಿ ವೀಕ್ಷಕರನ್ನು ಪುಳಕಗೊಳಿಸುತ್ತಿದೆ. ಇಬ್ಬರ ರೊಮ್ಯಾಂಟಿಕ್​ ಸೀನ್ಸ್​ಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಇದ್ದು, ಅಮೃತಧಾರೆಯ ಅಮೃತ ಕ್ಷಣಗಳು ಅಂತೆಲ್ಲಾ ಫ್ಯಾನ್ಸ್​ ವರ್ಣನೆ ಮಾಡುತ್ತಿದ್ದಾರೆ. ನಟ ರಾಜೇಶ್​ ನಟರಂಗ್ ಹಾಗೂ ಛಾಯಾ ಸಿಂಗ್​ ಅವರ ಕೆಮಿಸ್ಟ್ರೀಗೆ ವೀಕ್ಷಕರು ಫಿದಾ ಆಗಿದ್ದಾರೆ.

ಇದನ್ನೂ ಓದಿ: ಬಸ್ ನಿಲ್ದಾಣ ಕಾಣೆಯಾಗಿದೆ, ಪ್ಲೀಸ್​ ಹುಡುಕಿಕೊಡಿ! ನ್ಯೂಸ್​ಫಸ್ಟ್​ಗೆ ಸಾರ್ವಜನಿಕರಿಂದ ಸ್ಪೆಷಲ್ ರಿಕ್ವೆಸ್ಟ್

ಮೊನ್ನೆಯಿಂದ ಪ್ರಸಾರವಾಗುತ್ತಿರುವ ಸಂಚಿಕೆಗಳು ಪ್ರೇಕ್ಷಕರು ಕಣ್ಣೀರು ತರಿಸುತ್ತಿವೆ. ಇಷ್ಟು ದಿನ ಈ ಇಬ್ಬರು ಯಾವಾಗ ಒಂದಾಗುತ್ತಾರೆ ಅಂತ ಕಾಯುತ್ತಿದ್ದ ವೀಕ್ಷಕರು ಫುಲ್​ ಖುಷ್​ ಆಗಿದ್ದಾರೆ. ಜೊತೆಗೆ ಈ ಇಬ್ಬರ ಜೋಡಿಗೆ ನೂರು ಕಾಲ ಹೀಗೆ ಚೆನ್ನಾಗಿ ಇರಿ ಎಂದು ಹಾರೈಸುತ್ತಿದ್ದಾರೆ. ಗೌತಮ್‌ನ ಒಲವಿನ ಮಾತುಗಳು ಭೂಮಿಕಾಗೆ ಹೊಸ ಉಸಿರು ನೀಡಿದೆ. ಚಿಕ್ಕಮಗಳೂರಿಗೆ ಗೌತಮ್‌ ಮತ್ತು ಭೂಮಿಕಾ ಹೋಗಿದ್ದರು.

ಜಮೀನೊಂದರ ವಿವಾದಕ್ಕೆ ಸಂಬಂಧಿಸಿದಂತೆ ಕೆಲವರು ಜಗಳಕ್ಕೆ ಬಂದಿದ್ದರು. ಆದರೆ ಜಮೀನಿನ ವಿಚಾರ ಗೌತಮ್‌ಗೆ ಗೊತ್ತಿಲ್ಲ. ಇದೇ ನೆಪ ಇಟ್ಟುಕೊಂಡು ಶಕುಂತಲಾ ಇಬ್ಬರನ್ನೂ ಹನಿಮೂನ್‌ಗೆ ಕಳುಹಿಸಿರುತ್ತಾಳೆ. ಅಲ್ಲಿ ಹೋದರೆ ಇಬ್ಬರ ಸಾವು ಖಂಡಿತ ಎನ್ನುವುದು ಆಕೆಯ ಪ್ಲ್ಯಾನ್​. ಅದೇ ರೀತಿ ಭೂಮಿಕಾ ಕಿಡ್ನ್ಯಾಪ್ ಆಗಿದ್ದಳು. ಭೂಮಿಕಾಳನ್ನು ಹುಡುಕುತ್ತ ಬಂದ ಗೌತಮ್​ಗೆ ಶಾಕ್​ವೊಂದು ಎದುರಾಗಿತ್ತು. ಜಮೀನು ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದವನು ಭೂಮಿಕಾಳನ್ನು ಮಣ್ಣಿನ ಅಡಿಯಲ್ಲಿ ಮುಚ್ಚಿಟ್ಟದ್ದ. ಬಳಿಕ ಈ ವಿಚಾರ ಗೌತಮ್​ಗೆ ಗೊತ್ತಾಗಿ ಆ ಸ್ಥಳಕ್ಕೆ ಹೋಗಿ ಭೂಮಿಕಾರನ್ನು ರಕ್ಷಣೆ ಮಾಡುತ್ತಾರೆ.

ನಿನ್ನೆಯ ಸಂಚಿಕೆಯನ್ನು ಕಣ್ತುಂಬಿಕೊಂಡ ಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್​ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಗೌತಮ್​ ರೀತಿಯ ಗಂಡನೇ ಸಿಗಬೇಕು, ಇದ್ರೆ ಆನಂದ್ ಅಂಥ ಗೆಳೆಯ ಇರಬೇಕು. ಕಷ್ಟದಲ್ಲೂ ಜೊತೆ ಇದ್ದು ಖುಷಿ ಹಂಚಿಕೊಳ್ಳೋ ಥರ ಸೂಪರ್ ಆನಂದ ಸರ್, ನನ್ನೊಲಮೆಯ ಅಮೃತದಾರೆ ಎರಡು ದೇಹ ಒಂದೇ ಉಸಿರು ಪ್ರೀತಿಯಿಂದ ಖುಷಿ, ಖುಷಿಯಿಂದ ದುಃಖ ಎರಡು ಆಯಿತು ನೋಡುವರಿಗೆ ಅಂತ ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮೃತಧಾರೆ ಗೌತಮ್​​ ಅಭಿನಯಕ್ಕೆ ಮನಸೋತ ವೀಕ್ಷಕರು​; ನಿಮ್ಮಂತ ಗಂಡನೇ ಬೇಕು ಎಂದ ನಾರಿಯರು

https://newsfirstlive.com/wp-content/uploads/2024/05/amrutha-dare1.jpg

Load More