newsfirstkannada.com

29 ಮಂದಿ ನಿಗೂಢ ಕಣ್ಮರೆ; 8 ವರ್ಷಗಳ ಬಳಿಕ ಭಾರತೀಯ ವಾಯುಸೇನೆ ವಿಮಾನದ ಅವಶೇಷಗಳು ಪತ್ತೆ!

Share :

Published January 12, 2024 at 6:24pm

Update January 12, 2024 at 6:25pm

    ಇಂಡಿಯನ್ ಏರ್‌ಪೋರ್ಸ್​ನ‌ AN -32 ವಿಮಾನದ ಅವಶೇಷ ಪತ್ತೆ

    ಚೆನ್ನೈನಿಂದ 310 km ದೂರದ ಸಮುದ್ರದಲ್ಲಿ ಪತನಗೊಂಡ ವಿಮಾನ

    ಇಂಡಿಯನ್ ಏರ್ ಫೋರ್ಸ್ ವಿಮಾನದಲ್ಲಿ 29 ಮಂದಿ ಪ್ರಯಾಣ

ನವದೆಹಲಿ: 8 ವರ್ಷಗಳ ಹಿಂದೆ 29 ಸಿಬ್ಬಂದಿಗಳನ್ನು ಹೊತ್ತುಕೊಂಡು ಹೋಗಿದ್ದ AN-32 ವಿಮಾನ ನಾಪತ್ತೆಯಾಗಿತ್ತು. ಕೊನೆಗೂ ಭಾರತೀಯ ವಾಯುಸೇನೆಯ ಟ್ರಾನ್ಸ್‌ಪೋರ್ಟ್‌ ವಿಮಾನದ ಅವಶೇಷಗಳು ಪತ್ತೆಯಾಗಿದೆ.

2016ರ ಜುಲೈ 22ರ ಬೆಳಗ್ಗೆ AN-32 ವಿಮಾನ ಚೆನ್ನೈನಿಂದ ಪೋರ್ಟ್ ಬ್ಲೇರ್​ಗೆ ಹೊರಟಿತ್ತು. ಈ ಇಂಡಿಯನ್ ಏರ್ ಪೋರ್ಸ್ ವಿಮಾನದಲ್ಲಿ 29 ಮಂದಿ ಪ್ರಯಾಣಿಸುತ್ತಿದ್ದರು. AN-32 ವಿಮಾನ ಹಾರಾಟ ಆರಂಭವಾದ ಕೆಲವೇ ಹೊತ್ತಿನಲ್ಲಿ ಗ್ರೌಂಡ್‌ ಸ್ಟೇಷನ್‌ನೊಂದಿಗೆ ತನ್ನೆಲ್ಲಾ ಸಂಪರ್ಕವನ್ನು ಕಳೆದುಕೊಂಡಿತ್ತು. ಬಂಗಾಳಕೊಲ್ಲಿಯಲ್ಲಿ ವಿಮಾನ ಹಾರಾಟದ ವೇಳೆ ರಾಡಾರ್‌ನ ಸಂಪರ್ಕಕ್ಕೂ ಇದು ಸಿಕ್ಕಿರಲಿಲ್ಲ.  ಭಾರತೀಯ ಸರ್ಕಾರದ ಸಂಬಂಧಿತ ಇಲಾಖೆ ದೊಡ್ಡ ಪ್ರಮಾಣದ ಶೋಧ ಕಾರ್ಯ ನಡೆಸಿದರೂ ಈ ವಿಮಾನದ ಸಣ್ಣ ಮಾಹಿತಿ ಕೂಡ ಲಭ್ಯವಾಗಿರಲಿಲ್ಲ. ಸಮುದ್ರದಲ್ಲಿ ಕಾಣೆಯಾದ ವಿಮಾನಕ್ಕಾಗಿ ಭಾರತ ಈವರೆಗೂ ನಡೆಸಿರುವ ಅತಿದೊಡ್ಡ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಇದಾಗಿತ್ತು.

ಇದನ್ನೂ ಓದಿ: ನಾಸಿಕ್‌ನಲ್ಲಿ ಖುದ್ದು ದೇವಸ್ಥಾನ ಸ್ವಚ್ಛಗೊಳಿಸಿದ ಪ್ರಧಾನಿ ಮೋದಿ; ಟಾಪ್ 10 ಫೋಟೋ ಇಲ್ಲಿವೆ

ಇದೇ ವೇಳೆ AN-32 ವಿಮಾನ ಬಂಗಾಳ ಕೊಲ್ಲಿಯಲ್ಲಿ AN-32 ಪತನವಾಗಿತ್ತು. ಕಳೆದ 8 ವರ್ಷಗಳಿಂದ ಈ ವಿಮಾನದ ಅವಶೇಷಗಳ ಪತ್ತೆ ಸಾಧ್ಯವಾಗಿರಲಿಲ್ಲ. ವಿಮಾನದಲ್ಲಿದ್ದ 29 ಮಂದಿ ಮೃತಪಟ್ಟಿದ್ದಾರೆ ಎಂದು ಧೃಡೀಕರಿಸಲಾಗಿತ್ತು. ಇದೀಗ ಚೆನ್ನೈ ಕಡಲತೀರದಿಂದ 310 ಕಿಲೋಮೀಟರ್‌ ದೂರದಲ್ಲಿ 3.4 ಕಿಲೋಮೀಟರ್‌ ಆಳದಲ್ಲಿ ಈ ವಿಮಾನದ ಅವಶೇಷಗಳು ಪತ್ತೆಯಾಗಿದೆ ಎಂದು ಇಂಡಿಯನ್ ಏರ್ ಪೋರ್ಸ್​ನಿಂದ ಅಧಿಕೃತ ಮಾಹಿತಿ ಹೊರ ಬಿದ್ದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

29 ಮಂದಿ ನಿಗೂಢ ಕಣ್ಮರೆ; 8 ವರ್ಷಗಳ ಬಳಿಕ ಭಾರತೀಯ ವಾಯುಸೇನೆ ವಿಮಾನದ ಅವಶೇಷಗಳು ಪತ್ತೆ!

https://newsfirstlive.com/wp-content/uploads/2024/01/missing.jpg

Load More