/newsfirstlive-kannada/media/post_attachments/wp-content/uploads/2024/10/HELICOPTOR.jpg)
ನೇಪಾಳದಲ್ಲಿ ಭಾರೀ ಮಳೆಯಿಂದಾಗಿ ಬಿಹಾರದಲ್ಲಿ ಜಲಪ್ರವಾಹ ಉಂಟಾಗಿದೆ. ರಕ್ಷಣಾ ಸಿಬ್ಬಂದಿ ಜನರ ರಕ್ಷಿಸುವ ಪ್ರಯತ್ನ ಮಾಡ್ತಿದೆ. ಇನ್ನು, ಹವಾಮಾನ ವೈಪರೀತ್ಯದಿಂದಾಗಿ ರಕ್ಷಣಾ ತಂಡ ಸಂಕಷ್ಟಗಳನ್ನು ಎದುರಿಸುತ್ತಿವೆ.
ಅಂತೆಯೇ ಗ್ರಾಮ ಒಂದರಲ್ಲಿ ಪ್ರವಾಹದ ಸಂದರ್ಭದಲ್ಲಿ ಆಗಿರುವ ಅನಾಹುತದ ವಿಡಿಯೋ ಒಂದು ವೈರಲ್ ಆಗಿದೆ. ವಿಡಿಯೋದಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ (Advanced Light Helicopter) ನೀರಿಗೆ ಅಪ್ಪಳಿಸಿದೆ. ಇದು ಇಂಟರ್ನೆಟ್‌ನಲ್ಲಿ ಭಾರೀ ವೈರಲ್ ಆಗುತ್ತಿದೆ. ರಕ್ಷಣೆಗೆ ಬಂದಿದ್ದ ಸಿಬ್ಬಂದಿಯೇ ಸಂಕಷ್ಟಕ್ಕೆ ಸಿಲುಕಿದಾಗ ಅಲ್ಲಿನ ಸ್ಥಳೀಯರೇ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಅವರನ್ನು ರಕ್ಷಣೆ ಮಾಡಿದ್ದಾರೆ.
ವಿಡಿಯೋದಲ್ಲಿ ಏನಿದೆ..?
ವಾಯುಪಡೆಯ ಹೆಲಿಕಾಪ್ಟರ್ ಪತನಗೊಂಡು ನೀರಿನಲ್ಲಿ ಮುಳುಗಿದೆ. ಅದರ ಮೇಲೆ ಮೂವರು ಪೊಲೀಸರು ನಿಂತಿದ್ದಾರೆ. ಅಪಘಾತಕ್ಕೀಡಾದ ಹೆಲಿಕಾಪ್ಟರ್‌ನಲ್ಲಿ ಯಾರಾದರೂ ಸಿಲುಕಿಕೊಂಡಿದ್ದಾರೆಯೇ ಎಂಬ ಬಗ್ಗೆ ರಕ್ಷಣಾ ತಂಡ ತನಿಖೆ ನಡೆಸುತ್ತಿದೆ. ಈ ಮಧ್ಯೆ.. ವರದಿಗಾರನೊಬ್ಬ ನೀರಲ್ಲಿ ನಿಂತು ವರದಿ ಮಾಡುತ್ತಿದ್ದಾನೆ. ಆತ ಇದು ವಾಯುಪಡೆಯ ಹೆಲಿಕಾಪ್ಟರ್ ಎಂದು ಹೇಳುತ್ತಿದ್ದಾನೆ. ಸೈನಿಕರ ಪ್ರಾಣ ಉಳಿಸಿದ್ದಕ್ಕೆ ತುಂಬಾ ಸಂತೋಷವಾಗಿದ್ದು, ಗ್ರಾಮಸ್ಥರೆಲ್ಲರೂ ಇದಕ್ಕೆ ಸಹಕರಿಸಿದ್ದಾರೆ ಎಂದಿದ್ದಾನೆ. ಹೆಲಿಕಾಪ್ಟರ್​ನಲ್ಲಿ ಮೂವರು ಸಿಬ್ಬಂದಿ ಇದ್ದರು, ಅವರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ.
ಇದನ್ನೂ ಓದಿ:BBMP: ಕನ್ನಡ ಉಪನ್ಯಾಸಕರು ಬೇಕಾಗಿದ್ದಾರೆ.. ಸಂಬಳ 43-83 ಸಾವಿರ!
— Ghar Ke Kalesh (@gharkekalesh) October 4, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us