newsfirstkannada.com

ರೀಲ್ಸ್ ಟೀಚರ್ ಕೊಲೆ ಮಾಡಿ ಸಖತ್‌ ಡ್ರಾಮಾ; ಮೇಲುಕೋಟೆಯಿಂದ ಹೊಸಪೇಟೆಗೆ ಎಸ್ಕೇಪ್‌ ಆಗಿದ್ದ ಕಿರಾತಕ

Share :

Published January 24, 2024 at 3:50pm

  ತನ್ನ ಮೇಲೆ ಅನುಮಾನ ಬಾರದಂತೆ ನಾಟಕವಾಡಿದ್ದ ಹಂತಕ ನಿತೀಶ್

  ಮೇಲುಕೋಟೆ ಹಂತಕ ಪೊಲೀಸರ ದಿಕ್ಕು ತಪ್ಪಿಸಲು ಏನು ಮಾಡಿದ?

  ದೀಪಿಕಾ ಶವ ಹೂತಿಟ್ಟಿದ್ದರಿಂದ ಯಾರಿಗೂ ಗೊತ್ತಾಗಲ್ಲ ಎಂದುಕೊಂಡಿದ್ದ

ಮಂಡ್ಯ: ಮೇಲುಕೋಟೆ ಖಾಸಗಿ ಶಾಲಾ ಶಿಕ್ಷಕಿ ದೀಪಿಕಾ ಕೊಲೆ ಪ್ರಕರಣದಲ್ಲಿ ಪೊಲೀಸರು ಸ್ಫೋಟಕ ಸಂಗತಿಗಳನ್ನು ಕಲೆ ಹಾಕಿದ್ದಾರೆ. ಬೆಟ್ಟದ ತಪ್ಪಲಿನಲ್ಲಿ ದೀಪಿಕಾ ಶವ ಸಿಗುತ್ತಿದ್ದಂತೆ ಎಸ್ಕೇಪ್ ಆಗಿದ್ದ ಹಂತಕ ನಿತೀಶ್ ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಪೊಲೀಸರ ವಿಚಾರಣೆಯಲ್ಲಿ ಹಂತಕ ಪೊಲೀಸರ ದಿಕ್ಕು ತಪ್ಪಿಸಲು ಏನೆಲ್ಲಾ ಮಾಡಿದ ಅನ್ನೋ ಸತ್ಯವನ್ನು ಬಾಯ್ಬಿಟ್ಟಿದ್ದಾನೆ.

ಮೇಲುಕೋಟೆ ಬೆಟ್ಟದಲ್ಲಿ ಶಿಕ್ಷಕಿ ದೀಪಿಕಾರನ್ನು ಕೊಲೆ ಮಾಡಿದ್ದ ಆರೋಪಿ ನಿತೀಶ್ ಎರಡು ದಿನ ಗ್ರಾಮದಲ್ಲೇ ಇದ್ದಾನೆ. ಕೊಲೆಯಾದ ಮಾರನೇ ದಿನ ದೀಪಿಕಾಳ ತಂದೆಗೆ ತಾನೇ ಕರೆ ಮಾಡಿದ್ದ ನಿತೀಶ್, ಅಪ್ಪಾಜಿ ದೀಪಿಕಾ ಅಕ್ಕಾ ಸಿಕ್ಕಿದ್ರಾ ಎಂದು ವಿಚಾರಿಸಿದ್ದಾನೆ. ಮೃತ ದೀಪಿಕಾಳನ್ನ ಅಕ್ಕ ಅಂತ ಕರೆದ್ರೆ ಆಕೆಯ ತಂದೆಯನ್ನ ಅಪ್ಪಾಜಿ ಎಂದು ಆರೋಪಿ ನಿತೀಶ್ ಕರೆಯುತ್ತಿದ್ದ. ತನ್ನ ಮೇಲೆ ಅನುಮಾನ ಬಾರದಂತೆ ದೀಪಿಕಾಳ ಬಗ್ಗೆ ನಿತೀಶ್ ವಿಚಾರಿಸುವ ನಾಟಕವಾಡಿದ್ದಾನೆ.

ಬೆಟ್ಟದ ತಪ್ಪಲಿನಲ್ಲಿ ಹೂತಿಟ್ಟಿದ್ದರಿಂದ ಶವ ಯಾರಿಗೂ ಸಿಗೋದಿಲ್ಲ ಎಂದು ಆರೋಪಿ ಅಂದುಕೊಂಡಿದ್ದ. ಆದರೆ ಎರಡು ದಿನದ ಬಳಿಕ ದೀಪಿಕಾ ಶವ ಪತ್ತೆಯಾಗ್ತಿದ್ದಂತೆ ನಿತೀಶ್‌ ವಿಜಯನಗರ ಜಿಲ್ಲೆಯ ಹೊಸಪೇಟೆಗೆ ಕಾಲ್ಕಿತ್ತಿದ್ದಾನೆ. ಇವನ ಜಾಡು ಹಿಡಿದು ಹೊರಟ ಪೊಲೀಸರು ಹೊಸಪೇಟೆಯಲ್ಲಿ ಆರೋಪಿಯನ್ನ ಬಂಧಿಸಿ ಮೇಲುಕೋಟೆ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.

ಇದನ್ನೂ ಓದಿ: ಮೇಲುಕೋಟೆ ರೀಲ್ಸ್ ಟೀಚರ್ ಮರ್ಡರ್‌ ಕೇಸ್; ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಅರೆಸ್ಟ್

ಪೊಲೀಸರಿಗೆ ಸಿಕ್ಕಿಬಿದ್ದಾಗ ತಾನೇನು ಮಾಡಿಲ್ಲ. ನನಗೇನು ಗೊತ್ತೇ ಇಲ್ಲ ಎಂದಿದ್ದ ಆರೋಪಿ ನಿತೀಶ್, ಪೊಲೀಸರ ವಿಚಾರಣೆಯಲ್ಲಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಪ್ರಕರಣದ ದಿಕ್ಕು ತಪ್ಪಿಸಲು ನಾಟಕವಾಡಿದ್ದ ಕಿರಾತಕ ಈಗ ಮೇಲುಕೋಟೆ ಪೊಲೀಸರ ಅತಿಥಿಯಾಗಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೀಲ್ಸ್ ಟೀಚರ್ ಕೊಲೆ ಮಾಡಿ ಸಖತ್‌ ಡ್ರಾಮಾ; ಮೇಲುಕೋಟೆಯಿಂದ ಹೊಸಪೇಟೆಗೆ ಎಸ್ಕೇಪ್‌ ಆಗಿದ್ದ ಕಿರಾತಕ

https://newsfirstlive.com/wp-content/uploads/2024/01/Melukote-Teacher.jpg

Load More