ಸ್ಕೂಟರ್ ಸವಾರಿ ಜೊತೆಗೆ ಲ್ಯಾಪ್ಟಾಪ್ ಆಪರೇಟ್ ಮಾಡುತ್ತಾ ಸಾಗುವ ಉದ್ಯೋಗಿ
ಈ ದೃಶ್ಯ ಕಂಡಾಗ ನಗು ಬರುತ್ತೋ? ಅಳು ಬರುತ್ತೋ? ಆತನ ಪರಿಸ್ಥಿತಿ ಹೇಗಿದೆಯೋ?
ದೃಶ್ಯ ಸಮೇತ ವೈರಲ್.. ಇದು ಬೆಂಗಳೂರಿನಲ್ಲಿ ನಡೆದ ಘಟನೆಯೇ?
ಟೈಂ ಅಂದ್ರೆ ಟೈಂ.. ಕೆಲಸ ಅಂದ್ರೆ ಕೆಲಸ.. ಕಾರ್ಪೋರೇಟ್ ಕಂಪನಿಗಳ ಕತೆಯೇ ಇಷ್ಟು. ಅದರಲ್ಲಿ ನೌಕರ ಕತೆಯೇ ಒಂದು ದೊಡ್ಡ ಗೋಳು. ಬೆಳಗೆದ್ದು ಓಡಿ ಬಸ್ ಹಿಡಿ ರಾತ್ರಿ ಮನೆಗೆ ನಡಿ ಅನ್ನೋದು ಅವರ ದಿನಚರಿಯಲ್ಲೇ ಬರೆದಂತಿದೆ. ಆದ್ರೆ ಇಲ್ಲೊಂದು ದೃಶ್ಯ ನೋಡಿದ್ರೆ ಪಾಪಾ ಈ ವ್ಯಕ್ತಿಯ ಕತೆಯೇ? ಅಥವಾ ವ್ಯಥೆಯೇ? ದೇವರೇ ಬಲ್ಲ. ಅಷ್ಟಕ್ಕೂ ಈತ ಏನು ಮಾಡಿದ್ದಾನೆ ಗೊತ್ತಾ? ಈ ಸ್ಟೋರಿ ಓದಿ.
ಇದು ಬೆಂಗಳೂರಿನಲ್ಲಿ ನಡೆದ ಕತೆಯೇ?
ಸಾಮಾನ್ಯವಾಗಿ ಕೆಲಸದ ಒತ್ತಡ ಇರುವ ಉದ್ಯೋಗಿ ಆಫೀಸು ಕ್ಯಾಬಿನಲ್ಲಿ, ಅಥವಾ ಹೋಟೆಲ್ ಇನ್ನಿತರ ಸ್ಥಳಗಳಲ್ಲಿ ಕುಳಿತು ಕೆಲಸ ಮಾಡುವವರನ್ನು ಕಾಣಬಹುದು. ಅದರಲ್ಲೂ ಬೆಂಗಳೂರಿನಂತ ನಗರದಲ್ಲಿ ಇಂತಹ ದೃಶ್ಯ ಕಾಣಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ಸ್ಕೂಟರಿನಲ್ಲಿ ಪ್ರಯಾಣಿಸುತ್ತಾ ತನ್ನ ತೊಡೆಯ ಮೇಲೆ ಲ್ಯಾಪ್ಟಾಪ್ ಇರಿಸುತ್ತಾ ಆಫೀಸು ಕೆಲಸ ಮಾಡುತ್ತಾ ಹೋಗುತ್ತಿದ್ದಾನೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸದ್ಯ ಬೆಂಗಳೂರಿನಲ್ಲಿ ನಡೆದ ದೃಶ್ಯ ಎಂದು ವೈರಲ್ ಆಗುತ್ತಿದೆ. ಆದರೆ ಇದಕ್ಕೆ ಯಾವುದೇ ಪುರಾವೆಗಳಲಿಲ್ಲ. ಅದರಲ್ಲೂ ಟ್ರೋಲ್ ಪೇಜ್ಗಳು ಇದು ಬೆಂಗಳೂರಿನಲ್ಲಿ ನಡೆದ ಕತೆ ಎನ್ನುತ್ತಾ ಟ್ರೋಲ್ ಮಾಡುತ್ತಿದೆ.
ಇದನ್ನೂ ಓದಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಪತ್ನಿಯ ಕಾರು ಕಳ್ಳತನ.. ಕದ್ದ ಖದೀಮ ಯಾರು?
— Harshith Achrappady (@HAchrappady) March 25, 2024
ಅಚ್ಚರಿ ಸಂಗತಿ ಎಂದರೆ ಸ್ಕೂಟಿ ಅಥವಾ ಬೈಕ್ನಲ್ಲಿ ಮೊಬೈಲ್ ಆಪರೇಟ್ ಮಾಡುತ್ತಾ ತೆರಳುವವರು ಬೆಂಗಳೂರಿನ ನಗರಗಳಲ್ಲಿ ಕಾಣಸಿಗುತ್ತಾರೆ. ಆದರೆ ಲ್ಯಾಪ್ಟಾಪ್ ತೊಡೆಯ ಮೇಲಿಟ್ಟುಕೊಂಡು ಮತ್ತೆರಡು ಕೈಯಲ್ಲಿ ಸ್ಕೂಟರ್ ಬಿಡುತ್ತಾ ಹೋಗ್ತಾರೆ ಅಂದ್ರೆ ನಂಬಲಸಾಧ್ಯ.
ಒಟ್ಟಿನಲ್ಲಿ ಮೊಬೈಲ್ ಬಳಸಿಕೊಂಡು, ಹೆಡ್ಫೋನ್ ಬಳಸಿಕೊಂಡು ಸಂಚಾರಿ ನಿಯಮ ಉಲ್ಲಂಘಿಸುವುದು ಅಪರಾಧ. ಆದರೆ ಈ ವ್ಯಕ್ತಿ ಲ್ಯಾಪ್ಟಾಪ್ ಆಪರೇಟ್ ಮಾಡುತ್ತಾ ಹೋಗುತ್ತಿದ್ದಾನೆ ಇದಕ್ಕೆ ಏನು ಹೇಳೋಣ?.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ