newsfirstkannada.com

ಹೃದಯಾಘಾತ.. ಅಂಚೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರ ಹಠಾತ್ ಸಾವು

Share :

Published June 3, 2024 at 11:52am

  ಅಂಚೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕುಸಿದು ಬಿದ್ದ ನೌಕರ

  ಕರ್ತವ್ಯ ನಿರತ ಅಂಚೆ ಇಲಾಖೆ ನೌಕರ ಹೃದಯಾಘಾತದಿಂದ ಸಾವು

  ಕಳೆದ 20 ವರ್ಷಗಳಿಂದ ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು

ವಿಜಯಪುರ: ಇತ್ತೀಚೆಗೆ ಹೃದಯಾಘಾತಕ್ಕೆ ಸಾವನ್ನಪ್ಪುವರ ಸಂಖ್ಯೆ ಹೆಚ್ಚಾಗುತ್ತಿದೆ. ಹದಿಹರಿಯದ ಯುವಕರಿಂದ ಹಿಡಿದು ಮಕ್ಕಳು, ಹಿರಿಯರು ಹೃದಯಾಘಾತಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ. ವಿಜಯಪುರ ಜಿಲ್ಲೆ ಮನಗೂಳಿ ಪಟ್ಟಣದ ಅಂಚೆ ಕಚೇರಿಯಲ್ಲಿ ಇಂತಹದೇ ದಾರುಣ ಘಟನೆಯೊಂದು ನಡೆದಿದೆ.

ಕರ್ತವ್ಯ ನಿರತ ಅಂಚೆ ಇಲಾಖೆ ನೌಕರ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮನಗೂಳಿ ಪಟ್ಟಣದ ಅಂಚೆ ಕಚೇರಿಯಲ್ಲಿ ನಡೆದಿದೆ. 51 ವರ್ಷದ ಯಲ್ಲಪ್ಪ ಗೋಪಾಲ್ ಭಜಂತ್ರಿ ಮೃತಪಟ್ಟ ಅಂಚೆ ಇಲಾಖೆ ನೌಕರರಾಗಿದ್ದಾರೆ.

ಇದನ್ನೂ ಓದಿ: ಟ್ರ್ಯಾಕ್ಟರ್​ ಟ್ರಾಲಿ ಪಲ್ಟಿ.. ಮಕ್ಕಳು ಸೇರಿ 13 ಜನರು ಸಾವು, ನಾಲ್ವರು ಗಂಭೀರ 

ಯಲ್ಲಪ್ಪ ಗೋಪಾಲ್ ಅವರು ಕಳೆದ 20 ವರ್ಷಗಳಿಂದ ಅಂಚೆ ಕಚೇರಿಯಲ್ಲಿ ಜಿ.ಡಿ.ಎಸ್ ಪ್ಯಾಕರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಇಂದು ಅಂಚೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಹೃದಯಘಾತ ಸಂಭವಿಸಿದೆ. ಅಂಚೆ ಕಚೇರಿಯಲ್ಲಿ ಯಲ್ಲಪ್ಪ ಕುಸಿದು ಬಿದ್ದು ಸಾವನ್ನಪ್ಪಿದ್ದು, ಸಹೋದ್ಯೋಗಿಗಳು ಬೆಚ್ಚಿ ಬಿದ್ದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೃದಯಾಘಾತ.. ಅಂಚೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರ ಹಠಾತ್ ಸಾವು

https://newsfirstlive.com/wp-content/uploads/2024/06/Vijayapura-Postman-Heart-Attack.jpg

Load More