newsfirstkannada.com

ಟ್ರ್ಯಾಕ್ಟರ್​ ಟ್ರಾಲಿ ಪಲ್ಟಿ.. ಮಕ್ಕಳು ಸೇರಿ 13 ಜನರು ಸಾವು, ನಾಲ್ವರು ಗಂಭೀರ

Share :

Published June 3, 2024 at 9:11am

Update June 3, 2024 at 9:12am

    ಟ್ರ್ಯಾಕ್ಟರ್​ ಟ್ರಾಲಿಯಲ್ಲಿ ಮದುವೆ ಮೆರವಣಿಗೆ ಹೊರಟಿದ್ದರು

    ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ.. ಟ್ರಾಲಿ ಅಡಿಗೆ ಬಿದ್ದು 13 ಜನ ಸಾವು

    ಸುಮಾರು 35 ಮಂದಿ ಟ್ರ್ಯಾಕ್ಟರ್​ ಟ್ರಾಲಿಯಲ್ಲಿ ಮದುವೆ ಮೆರವಣಿಗೆ ಹೊರಟಿದ್ದರು

ಟ್ರ್ಯಾಕ್ಟರ್​ ಟ್ರಾಲಿ ಪಲ್ಟಿಯಾಗಿ 13 ಜನರು ಸಾವನ್ನಪ್ಪಿದ ದುರ್ಘಟನೆಯೊಂದು ಭಾನುವಾರ ರಾತ್ರಿ ನಡೆದಿದೆ. ಮಧ್ಯ ಪ್ರದೇಶದ ರಾಜ್​ಗಢದ ಪಿಪ್ಲೋಡಿಯಲ್ಲಿ ಈ ಘಟನೆ ನಡೆದಿದೆ.

ಟ್ರ್ಯಾಕ್ಟರ್​ ಟ್ರಾಲಿಯಲ್ಲಿ ಮದುವೆ ಮೆರವಣಿಗೆ ಹೊರಟಿದ್ದರು. ರಾಜಸ್ಥಾನದಿಂದ ರಾಜ್​ಗಢಕ್ಕೆ ಟ್ರಾಲಿ ಮೂಲಕ ಜನರು ಬರುತ್ತಿದ್ದರು. ಆದರೆ ನಿಯಂತ್ರಣ ತಪ್ಪಿ ಈ ವೇಳೆ ದುರ್ಘಟನೆ ಸಂಭವಿಸಿದೆ. ಪಲ್ಟಿ ಹೊಡೆದ ರಂಭಸಕ್ಕೆ 13 ಮಂದಿ ಕೊನೆಯುಸಿರೆಳೆದಿದ್ದಾರೆ.

ಸುಮಾರು 35 ಮಂದಿ ಟ್ರ್ಯಾಕ್ಟರ್​ ಟ್ರಾಲಿ ಮೂಲಕ ಬರುತ್ತಿದ್ದರು. ಟ್ರಾಲಿ ಮಗುಚಿ ಬಿದ್ದ ಕಾರಣ ನಾಲ್ವರು ಮಕ್ಕಳು, ಐವರು ಪುರುಷರು, ನಾಲ್ವರು ಮಹಿಳೆಯರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಬೆಂಗಳೂರು: 133 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದ ಮಹಾಮಳೆ! ಹಳೆಯ ಘಟನೆಯನ್ನ ನೆನಪಿಸುತ್ತಿದೆ!

ಇನ್ನು ಗಂಭೀರ ಗಾಯಗೊಂಡ ನಾಲ್ವರನ್ನು ಭೋಪಾಲ್​ ಆಸ್ಪತೆಗೆ ದಾಖಲಿಸಲಾಗಿದೆ. 15 ಮಂದಿಯನ್ನು ರಾಜ್​ಗಢ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟ್ರ್ಯಾಕ್ಟರ್​ ಟ್ರಾಲಿ ಪಲ್ಟಿ.. ಮಕ್ಕಳು ಸೇರಿ 13 ಜನರು ಸಾವು, ನಾಲ್ವರು ಗಂಭೀರ

https://newsfirstlive.com/wp-content/uploads/2024/06/Accident.jpg

Load More