newsfirstkannada.com

ಅಂಬಾನಿ ಮಗನ ಅದ್ದೂರಿ ಮದುವೆ.. 1 ವೆಡ್ಡಿಂಗ್​​ ಕಾರ್ಡ್​​​ಗೆ ಖರ್ಚು ಮಾಡಿದ ಹಣ ಎಷ್ಟು ಗೊತ್ತಾ?

Share :

Published July 8, 2024 at 6:24am

Update July 8, 2024 at 8:24am

  ಜುಲೈ 12ರಂದು ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅನಂತ್, ರಾಧಿಕಾ ವಿವಾಹ

  ಸಂಗೀತ​ ಕಾರ್ಯಕ್ರಮದಲ್ಲಿ ಬಿಟೌನ್ ಬ್ಯೂಟಿಗಳ ಬೊಂಬಾಟ್ ಡ್ಯಾನ್ಸ್​

  ಹಾಡುಗಳಿಗೆ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ ಬಾಲಿವುಡ್​ ತಾರೆಯರು

ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಮಗನ ಮದುವೆ ಸಂಭ್ರಮ ಅಂದ್ರೆ ಅಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ದಂಡು ಇದ್ದೆ ಇರುತ್ತೆ. ಎರಡನೇ ಪ್ರಿ ವೆಡ್ಡಿಂಗ್​ನಲ್ಲೂ ಬಾಲಿವುಡ್​ ತಾರೆಯರು ಕುಣಿದು ಕುಪ್ಪಳಿಸಿದ್ದಾರೆ. ಅದ್ರಲ್ಲೂ ಬಿಟೌನ್ ಬ್ಯೂಟಿಗಳ ಬೊಂಬಾಟ್ ಡ್ಯಾನ್ಸ್​ ಕಿಚ್ಚು ಹೆಚ್ಚು ಮಾಡಿತ್ತು.

ಡಿಫರೆಂಟ್ ಡಿಫರೆಂಟ್ ಕಾಸ್ಟ್ಯೂಮ ಹಾಕೊಂಡು ರಾಕಿಂಗ್ ಆಗಿ ಮಿಂಚಿದ್ದ ಬಿಟೌನ್ ಮಂದಿ ಸಂಗೀತ್​ನಲ್ಲಿ ಫುಲ್ ಜೋಷ್​ನಲ್ಲಿದ್ರು, ಮದುವೆ ಹಾಡುಗಳಿಗೆ ಭರ್ಜರಿಯಾಗಿ ಕುಣಿದು ಇವೆಂಟ್​​ ಕಲರ್​ಫುಲ್ ಆಗುವಂತೆ ಮಾಡಿದ್ರು.

ಇದನ್ನೂ ಓದಿ: ದಾಸ ಜೈಲಿನಲ್ಲಿರುವಾಗಲೇ ಶಾಸ್ತ್ರಿ ಥಿಯೇಟರ್‌ಗೆ ಲಗ್ಗೆ.. 20 ವರ್ಷಗಳ ಬಳಿಕ ರೀ ರಿಲೀಸ್​; ಯಾವಾಗ ಗೊತ್ತಾ?

ಸಲ್ಮಾನ್​ ಖಾನ್, ರಣವೀರ್​, ಆಲಿಯಾ ಭಟ್, ಸಾರಾ ಅಲಿ ಖಾನ್, ಅನನ್ಯ ಪಾಂಡೆ, ಜಾಹ್ನವಿ ಕಪೂರ್. ಬಾಲಿವುಡ್​ ತಾರೆಯರೆಲ್ಲ ಅನಂತ್ ಮತ್ತು ರಾಧಿಕಾ ಸಂಗೀತ್​ ಕಾರ್ಯಕ್ರಮದಲ್ಲಿ ಕಲರ್​ಫುಲ್ ಆಗಿ ಮಿಂಚಿದ್ರು. ಬಾಲಿವುಡ್ ಬಾಕ್ಸ್​ಆಫೀಸ್ ಸುಲ್ತಾನ್ ನಟ ಸಲ್ಮಾನ್​​​ಖಾನ್ ಅನಂತ್ ಅಂಬಾನಿ ಜೊತೆ ಬೈಕ್​ನಲ್ಲಿ ಸ್ಟೇಜ್​ಗೆ ಎಂಟ್ರಿ ಕೊಟ್ಟಿದ್ರು. ತಮ್ಮದೇ ಸಿನಿಮಾದ ಐಸಾ ಪೆಹಲಿ ಬಾರ್ ಹೂವಾ, ಹಾಡಿಗೆ ಫುಲ್​ ಜಬರದಸ್ತ್​ ಆಗಿ ಕುಣಿದು ಭಾಯ್​ಜಾನ್ ದೂಳೆಬ್ಬಿಸಿಬಿಟ್ಟಿದ್ರು.

ಬಾಲಿವುಡ್​ಗಳಲ್ಲಿ ಬಾಯ್ ರಣವೀರ್ ಸಿಂಗ್ ಕೂಡ ಸಂಗೀತ್​ನಲ್ಲಿ ರಾಕಿಂಗ್ ಡ್ಯಾನ್ಸ್ ಮಾಡಿದ್ರು. ಬ್ಲೂ ಆ್ಯಂಡ್ ವೈಟ್​ ಔಟ್​ಫಿಟ್​ನಲ್ಲಿ ಸ್ಟೇಜ್​ ಮೇಲೆ ಬೊಂಬಾಟಾಗಿ ಕುಣಿದು ಫುಲ್ ಎಂಜಾಯ್ ಮಾಡಿದರು. ಸಂಗೀತ ಕಾರ್ಯಕ್ರಮ ಅಂದ್ರೆ ಅಲ್ಲಿ ಬ್ಯೂಟಿಗಳ ಡ್ಯಾನ್ಸ್ ಇರಲೇಬೇಕಲ್ವಾ? ಬಾಲಿವುಡ್ ಸುಂದರಿಯರಾದ ಸಾರಾ ಅಲಿ ಖಾನ್, ಅನನ್ಯ ಪಾಂಡೆ ಹೇ ಲಡಕಿ ಹಾಯ್ ಅಲ್ಹಾ.. ಅಂತ ಸೊಂಟ ಬಳುಕಿಸಿದ್ರು.

ವಿಶ್ವಕಪ್ ಗೆದ್ದ ಚಾಂಪಿಯನ್ಸ್​ಗೆ ಅಂಬಾನಿ ಫ್ಯಾಮಿಲಿಯು ಹೂಮಳೆ

ಅನಂತ್ ಸಂಗೀತ್ ಕಾರ್ಯಕ್ರಮಕ್ಕೆ ಕೇವಲ ಬಾಲಿವುಡ್ ಮಂದಿ ಮಾತ್ರವಲ್ಲ ಕ್ರಿಕೆಟ್ ಆಟಗಾರರು ಕೂಡ ಆಗಮಿಸಿದ್ರು. ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್​, ಸಂಗೀತ್​ನಲ್ಲಿ ಭಾಗಿಯಾಗಿದ್ರು. ಈ ವೇಳೆ ಅಂಬಾನಿ ಕುಟುಂಬ ಭಾರತ ತಂಡ ವಿಶ್ವಕಪ್ ಗೆದ್ದ ಕಾರಣಕ್ಕೆ ಆಟಗಾರರಿಗೆ ಹೂಮಳೆ ಮೂಲಕ ಸ್ವಾಗತ ಮಾಡಿದ್ರು. ಆರತಿ ಮಾಡಿ ಕಪ್ ಗೆದ್ದ ಚಾಂಪಿಯನ್ಸ್​ಗೆ ವಿಶೇಷ ಗೌರವ ಸಲ್ಲಿಸಿದ್ರು. ಈ ವೇಳೆ ಮಾತನಾಡಿದ ನೀತಾ ಅಂಬಾನಿ ದೇಶ ಹೆಮ್ಮೆ ಪಡುವಂತ ಸಾಧನೆ ಮಾಡಿದ ಭಾರತ ತಂಡದ ಆಟಗಾರರಿಗೆ ಸೆಲ್ಯೂಟ್ ಅಂತ ಹೇಳಿದ್ದರು. ಈ ಮಾತುಗಳನ್ನ ಹೇಳುವಾಗ ನೀತಾ ಕಣ್ಣಂಚಲಿ ಕಂಬನಿ ಬಂದಿದ್ದು ತುಂಬಾ ವಿಶೇಷವಾಗಿತ್ತು.

ಇದನ್ನೂ ಓದಿ: ಐಷಾರಾಮಿ ಹಡಗಿನಲ್ಲಿ ಅನಂತ್​​ ಅಂಬಾನಿಯ ರಾಧಿಕಾ ಮರ್ಚೆಂಟ್ 2ನೇ ಪ್ರೀ ವೆಡ್ಡಿಂಗ್; ಏನೆಲ್ಲಾ ವಿಶೇಷತೆ ಇರಲಿದೆ?

ನಾವೆಲ್ಲ ಕುಟುಂಬ ಇಲ್ಲಿ ಸೇರಿದ್ದೇವೆ. ಆದ್ರೆ ನಮ್ಮ ಜೊತೆ ಇನ್ನೊಂದು ಕುಟುಂಬವಿದೆ. ಇಡೀ ದೇಶವನ್ನೆ ಹೆಮ್ಮೆಗೊಳಿಸಿದ ಕುಟುಂಬ ಅದು. ಹೀಗಾಗಿ ಈ ಸಂಭ್ರಮ ಇಲ್ಲಿಗೆ ನಿಲ್ಲಲ್ಲ. ನನಗೆ ಎಷ್ಟು ಖುಷಿಯಾಗ್ತಿದೆ ಅಂದ್ರೆ ಅದನ್ನ ಹೇಳೋದಿಕ್ಕೆ ಆಗ್ತಿಲ್ಲ. ನನ್ನ ಮುಂಬೈ ಇಂಡಿಯನ್ಸ್ ಕುಟುಂಬ. ಈ ರಾತ್ರಿ ಸಂಭ್ರಮದ ರಾತ್ರಿ. ಅನಂತ್ ರಾಧಿಕಾ ಜೊತೆ ಭಾರತವನ್ನು ನಾವು ಸೆಲೆಬ್ರೆಟ್ ಮಾಡ್ತಿದ್ದೇವೆ. ನಮ್ಮ ವಿನ್ನಿಂಗ್ ಕ್ಯಾಪ್ಟನ್​ ರೋಹಿತ್ ಶರ್ಮಾ.

ನೀತಾ ಅಂಬಾನಿ

ಚುಟುಕು ಕ್ರಿಕೆಟ್​ನಲ್ಲಿ ಭಾರತಕ್ಕೆ ಜಯದ ಕಪ್ ಮುಡಿಗೇರಿಸುವಂತೆ ಮಾಡಿದ್ದ ಭಾರತದ ತಂಡದ ಆಟಗಾರರಿಗೆ ನೀತಾ ಅಂಬಾನಿ ತುಂಬು ಹೃದಯದ ಧನ್ಯವಾದ ತಿಳಿಸಿದ್ರು. ಪ್ರೀತಿಯ ಅಪ್ಪುಗೆ ನೀಡುವ ಮೂಲಕ ತಮ್ಮ ಮನಸ್ಸಲ್ಲಿದ್ದ ಖುಷಿಯನ್ನು ವ್ಯಕ್ತಪಡಿಸಿದ್ರು. ಭಾವುಕರಾಗಿದ್ದ ನೀತಾ ಮಾತು ಮರೆತು ಮೌನವಾಗಿದ್ರು. ಕೊನೆ ಓವರ್ ನಲ್ಲಿ ಮೇಜರ್ ಕ್ಯಾಚ್ ಹಿಡಿದ ಸೂರ್ಯಕುಮಾರ್ ಯಾದವ್​ಗೆ ಕೂಡ ನೀತಾ ಅದ್ಧೂರಿಯಾಗಿ ವೆಲ್ ಕಮ್ ಮಾಡಿದ್ರು. ಮುಕೇಶ್ ಅಂಬಾನಿ ಕೂಡ ಕಪ್ ಗೆದ್ದ ತಂಡಕ್ಕೆ ತಮ್ಮ ಅಭಿನಂದನೆ ಸಲ್ಲಿಸಿದ್ರು. ತಮ್ಮ ಇಡೀ ಕುಟುಂಬದ ಪರವಾಗಿ ರೋಹಿತ್ , ಹಾರ್ದಿಕ್​, ಸೂರ್ಯಕುಮಾರ ಯಾದವ್​ಗೆ ಹೃದಯ ತುಂಬಿ ಧನ್ಯವಾದ ತಿಳಿಸಿದ್ರು.

ಭಾರತ ಮತ್ತು ನಮ್ಮ ಕುಟುಂಬದ ಪರವಾಗಿ ನಿಮಗೆ ಧನ್ಯವಾದ ಹೇಳೋದಿಕ್ಕೆ ಇಷ್ಟ ಪಡ್ತೀನಿ. ಭಾರತಕ್ಕೆ ಕಪ್ ವಾಪಸ್ ತಂದಿದ್ದೀರ. 2011ರಿಂದಲೂ ಮಾಹಿ ನಾವು ಜೊತೆಗಿದ್ದೇವೆ. ನೀವು 2024ರಲ್ಲಿ ಮತ್ತೆ ಕಪ್​ ಗೆದ್ದಿದ್ದೀರಾ. ನಿಮ್ಮ ಬಗ್ಗೆ ಇಡೀ ಭಾರತ ಹೆಮ್ಮೆ ಪಡುತ್ತೆ. ಅಭಿನಂದನೆಗಳು

ಮುಕೇಶ್ ಅಂಬಾನಿ

ಚಿನ್ನ-ಬೆಳ್ಳಿ ಅಲಂಕೃತ ಆಹ್ವಾನಪತ್ರಿಕೆ! ಮದುವೆ ಇನ್ವಿಟೇಷನ್‌ನಲ್ಲಿ ಏನೇನಿದೆ?

ಅಂಬಾನಿ ಮನೆ ಮದುವೆ ಅಂದ್ರೆ ಅಲ್ಲಿ ಆಮಂತ್ರಣ ಪತ್ರಿಕೆ ಕೂಡ ಸದ್ದು ಮಾಡಲೇಬೇಕು. ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಜೆಂಟ್‌ ಮದುವೆ ಕಾರ್ಡ್ ನೋಡಿ ಜನ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ರು. ಈ ಐಷರಾಮಿ ವೆಡ್ಡಿಂಗ್ ಕಾರ್ಡ್​ಗೆ ಲಕ್ಷ ಲಕ್ಕ ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಪೆಟ್ಟಿಗೆಯಂತಿರುವ ಆಮಂತ್ರಣ ಪತ್ರಿಕೆ ತೆರೆದ ಕೂಡಲೇ, ಭಗವಾನ್ ವಿಷ್ಣುವಿನ ಮಂತ್ರಗಳನ್ನು ಪಠಿಸುತ್ತಾ ಆಡಿಯೋ ರೆಕಾರ್ಡಿಂಗ್ ಪ್ಲೇ ಆಗಲು ಪ್ರಾರಂಭಿಸುತ್ತದೆ. ಒಳಗೆ, ವೈಕುಂಠದ ಚಿತ್ರವಿದೆ. ಇದು ಭಗವಾನ್ ಮಹಾವಿಷ್ಣು ಮತ್ತು ಲಕ್ಷ್ಮೀದೇವಿಯ ಸ್ವರ್ಗೀಯ ವಾಸಸ್ಥಾನವಾಗಿದೆ. ಜೊತೆಗೆ ಗೋಲ್ಡನ್‌ ಬಣ್ಣದ ಪುಸ್ತಕವಿದೆ. ಆ ಪುಸ್ತಕದಂತಹ ಪೆಟ್ಟಿಗೆಯ ಒಳಗೆ ಸುಂದರವಾಗಿ ಅಲಂಕರಿಸಿದ ಮದುವೆಯ ಆಮಂತ್ರಣ ಪತ್ರವಿದೆ. ಆಮಂತ್ರಣದ ಮೊದಲ ಪುಟವು ಗಣೇಶನ ಡಿಟ್ಯಾಚೇಬಲ್ ಫ್ರೇಮ್ ಅನ್ನು ಹೊಂದಿದೆ, ಆದರೆ ಎರಡನೇ ಪುಟವು ‘ನಿಮಂತ್ರಣ ಪತ್ರ’ ಜೊತೆಗೆ ಕೃಷ್ಣನ ಚಿತ್ರವನ್ನು ಪ್ರದರ್ಶಿಸುತ್ತದೆ. ಇದರಲ್ಲಿ ಅಂಬಾನಿ ಕುಟುಂಬದ ಕೈಬರಹದ ಪ್ರತಿಯನ್ನೂ ಗಮನಿಸಬಹುದು, ಪುಟಗಳನ್ನು ತಿರುಗಿಸಿದಾಗ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಚಿತ್ರವಿದೆ. ಅದರ ನಂತರ ಅಂಬೆ ದೇವಿಯ ಡಿಟ್ಯಾಚೇಬಲ್ ಫ್ರೇಮ್ ಕಾಣಬಹುದು. ಈ ಆಮಂತ್ರಣ ಪತ್ರಿಕೆಯ ಪ್ರತಿಪುಟವು ಚಿನ್ನದಂತೆ ಹೊಳೆಯುತ್ತದೆ. ಕೆಂಪು ಕ್ಲೋಸೆಟ್‌ನಲ್ಲಿ ಇರಿಸಲಾಗಿರುವ ಆಮಂತ್ರಣವು, ಗಣೇಶ ಮತ್ತು ರಾಧಾ ಕೃಷ್ಣನ ಚಿನ್ನದ ವಿಗ್ರಹಗಳಿಂದ ಅಲಂಕರಿಸಲ್ಪಟ್ಟ ಬೆಳ್ಳಿಯ ದೇವಾಲಯವನ್ನು ಒಳಗೊಂಡಿದೆ. ಸಿಹಿತಿಂಡಿಗಳು ಮತ್ತು ಒಣ ಹಣ್ಣುಗಳನ್ನು ಒಳಗೊಂಡಿರುವ ಬೆಳ್ಳಿಯ ಪೆಟ್ಟಿಗೆಯನ್ನು ಸಹ ಒಳಗೊಂಡಿದೆ. ಆಯ್ದ ವಿವಿಐಪಿಗಳು ಮತ್ತು ವಿಐಪಿಗಳಿಗೆ ಈ ವಿಶೇಷ ಆಹ್ವಾನ ಪತ್ರಿಕೆಯನ್ನ ಕಳುಹಿಸಲಾಗಿದೆ.

ಜುಲೈ 12 ರಂದು ಮದುವೆ! ಹೇಗಿರುತ್ತೆ ಮೂರು ದಿನದ ವೈಭವ?

ಜುಲೈ 12 ರಿಂದ 14ರವರೆಗೆ ಮೂರು ದಿನಗಳ ಕಾಲ ಅನಂತ್ ಮತ್ತು ರಾಧಿಕ ಮದುವೆ ವೈಭೋವಪೇತವಾಗಿ ನೇರವೇರಲಿದೆ. ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಯುವ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ. ಜುಲೈ 13 ರಂದು ಶುಭ ವಿವಾಹ ನೇರವೇರಲಿದ್ದು, ಜುಲೈ 14 ರಂದು ಶುಭ ಆಶಿರ್ವಾದ ಅಂದ್ರೆ ಮದುವೆಗೆ ಬಂದ ಗಣ್ಯರಿಂದ ಆಶಿರ್ವಾದ ಕಾರ್ಯಕ್ರಮ ನೇರವೇರಲಿದೆ. ಇನ್ನೂ ಕೊನೆಯ ದಿನ ಮಂಗಳ ಉತ್ಸವ ಅಂದ್ರೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಶುಕ್ರವಾರ ಮದುವೆ ಸಂಭ್ರಮ ಆರಂಭವಾಗಿ ಭಾನುವಾರಕ್ಕೆ ತೆರೆ ಬೀಳಲಿದೆ. ಈ ಮದುವೆಯಲ್ಲಿ ಜಗತ್ತಿನ ಗಣ್ಯಾತಿಗಣ್ಯರು ಭಾಗವಹಿಸಲಿದ್ದು ವಿಶ್ವದ ದುಬಾರಿ ಮದುವೆ ಇದಾಗಿರಲಿದೆ. ಒಟ್ಟಾರೆ ಜಗತ್ತಿನ ಅದ್ಧೂರಿ ಮದುವೆಗೆ ಕೌಂಟ್​ಡೌನ್ ಶುರುವಾಗಿದ್ದು, ಈಗಾಗಲೇ ಸಂಗೀತ್ ಕಾರ್ಯಕ್ರಮಕ್ಕೆ ತೆರೆ ಬಿದ್ದಿದ್ದು, ಇನ್ನೇನು ಮದುವೆ ಸಂಭ್ರಮ ಮಾತ್ರ ಬಾಕಿಯಿದೆ. ಸಂಗೀತ್ ವೈಭೋಗವನ್ನ ಕಣ್ತುಬಿಕೊಂಡ ಜನ ಮದುವೆ ವೈಭವ ಹೇಗಿರುತ್ತೆ ಅಂತ ಬೆರಗು ಕಣ್ಣಿನಿಂದ ಕಾಯ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂಬಾನಿ ಮಗನ ಅದ್ದೂರಿ ಮದುವೆ.. 1 ವೆಡ್ಡಿಂಗ್​​ ಕಾರ್ಡ್​​​ಗೆ ಖರ್ಚು ಮಾಡಿದ ಹಣ ಎಷ್ಟು ಗೊತ್ತಾ?

https://newsfirstlive.com/wp-content/uploads/2024/07/ambani-1.jpg

Load More