/newsfirstlive-kannada/media/post_attachments/wp-content/uploads/2024/09/GANESH_20KG_GOLD-1.jpg)
ಗಣೇಶ ಚತುರ್ಥಿ ಭಾರತ ಸೇರಿ ವಿದೇಶದಲ್ಲೂ ವೈಭವದಿಂದ ಆಚರಿಸಲಾಗುತ್ತಿದೆ. ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನವಾದ ಇಂದು ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ವಿಗ್ರಹವನ್ನು ಪ್ರತಿಷ್ಠಾಪಿಸಿ ವಿಧ್ಯುಕ್ತವಾಗಿ ಪೂಜಿಸುತ್ತಾರೆ. ಮೋದಕ, ಕಡುಬು, ಸಿಹಿ ತಿಂಡಿಗಳನ್ನ ಮಾಡಿ ನೈವೇದ್ಯ ಮಾಡುತ್ತಾರೆ. ಚತುರ್ಥಿ ಪ್ರಯುಕ್ತ ಮುಖೇಶ್ ಅಂಬಾನಿ ಮಗ ಅನಂತ್ ಅಂಬಾನಿ 20 ಕೆ.ಜಿಯ ಚಿನ್ನದ ಕಿರೀಟವನ್ನು ವಿನಾಯಕನಿಗೆ ದಾನವಾಗಿ ನೀಡಿದ್ದಾರೆ.
ಇದನ್ನೂ ಓದಿ:ಇದೇ ನೋಡಿ ದೇಶದ ಅತಿದೊಡ್ಡ ಗಣೇಶನ ವಿಗ್ರಹ.. ಎಷ್ಟು ಅಡಿ, ಎಷ್ಟು ಟನ್ ಇದೆ, ಇದರ ವಿಶೇಷತೆ ಏನು?
/newsfirstlive-kannada/media/post_attachments/wp-content/uploads/2024/07/ananth_ambani-2.jpg)
ಗಣೇಶನ ಉತ್ಸವಕ್ಕೆ ಮುಂಬೈ ಭಾರೀ ಫೇಮಸ್. ಅದರಲ್ಲಿ ಮುಂಬೈನಲ್ಲಿ ತುಂಬಾ ಪಾಪುಲರ್ ಗಣೇಶ ಉತ್ಸವ ಎಂದರೆ ಲಾಲ್‌ಬಾಗ್ಚಾ ರಾಜಾ ಗಣಪತಿ. 10 ದಿನಗಳ ಕಾಲ ಇಲ್ಲಿ ಗಣಪತಿ ಉತ್ಸವವನ್ನು ಭರ್ಜರಿಯಾಗಿ ನಡೆಸಲಾಗುತ್ತದೆ. ಇಡೀ ಮುಂಬೈ ನಗರದ ಜನರೇ ಇಲ್ಲಿ ಸೇರಿರುತ್ತಾರೆ. ನಿತ್ಯ ಸಾಕಷ್ಟು ಸೆಲಿಬ್ರೆಟಿಗಳು, ಉದ್ಯಮಿಗಳು, ರಾಜಕಾರಣಿಗಳು ಗಣೇಶನ ದರ್ಶನಕ್ಕೆ ಆಗಮಿಸುತ್ತಾರೆ. ಅದರಂತೆ ಮೊದಲಿನಿಂದಲೂ ಅಂಬಾನಿ ಫ್ಯಾಮಿಲಿ ಕೂಡ ಇದೇ ಗಣೇಶನ ಉತ್ಸವದಲ್ಲಿ ಭಾಗಿಯಾಗುತ್ತಿದೆ. ಈ ಸಲ ನವ ಜೋಡಿ, ಇತ್ತೀಚೆಗಷ್ಟೇ ಮದುವೆಯಾದ ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಗಣಪತಿಯ ದರ್ಶನ ಪಡೆದುಕೊಳ್ಳಲ್ಲಿದ್ದಾರೆ.
ಅಂಬಾನಿ ಫ್ಯಾಮಿಲಿ ಪ್ರತಿ ವರ್ಷದಂತೆ ಮುಂಬೈನ ಲಾಲ್‌ಬಾಗ್ಚಾ ರಾಜಾ ಗಣಪತಿ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ. ಮದುವೆಯಾದ ಮೇಲೆ ಮೊದಲ ಗಣೇಶ ಚತುರ್ಥಿಯನ್ನು ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಆಚರಿಸುತ್ತಿದ್ದಾರೆ. ಆದರೆ ಈ ಸಲ ವಿಶೇಷ ಎಂದರೆ ಲಾಲ್‌ಬಾಗ್ಚಾ ರಾಜಾ ಗಣಪತಿ ವಿಗ್ರಹಕ್ಕೆ ಚಿನ್ನದ ಕಿರೀಟವನ್ನು ಅನಂತ್ ಅಂಬಾನಿ ದಾನವಾಗಿ ನೀಡಿದ್ದಾರೆ. ಒಂದಲ್ಲ, ಎರಡಲ್ಲ ಬರೋಬ್ಬರಿ 20 ಕೆ.ಜಿ ಬಂಗಾರದ ಬಂಗಾರದ ಕಿರೀಟವನ್ನು ಅನಂತ್ ಅಂಬಾನಿ ಕೊಡುಗೆಯಾಗಿ ನೀಡಿದ್ದು ಇದಕ್ಕೆ ಒಟ್ಟು 15 ಕೋಟಿ ರೂಪಾಯಿ ಖರ್ಚು ಆಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಮಕ್ಕಳಿಗೆ ಐಸ್​ ಕ್ರೀಂ ಕೊಡಿಸುವ ಮುನ್ನ ಹುಷಾರ್​.. ಪೋಷಕರು ಓದಲೇಬೇಕಾದ ಸ್ಟೋರಿ
/newsfirstlive-kannada/media/post_attachments/wp-content/uploads/2024/09/GANESH_20KG_GOLD_1.jpg)
ಅರಮನೆಯಂತೆ ಭವ್ಯವಾಗಿ ಸ್ಥಳವನ್ನು ಸಿಂಗಾರ ಮಾಡಲಾಗಿದ್ದು ಚತುರ್ಥಿ ಹಿನ್ನೆಲೆಯಲ್ಲಿ ಗಣೇಶನ ಮೂರ್ತಿಗೆ 20 ಕೆ.ಜಿಯ ಚಿನ್ನದ ಕಿರೀಟ ಈಗಾಗಲೇ ತೊಡಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಗಣೇಶ ಸಮಿತಿಯ ಅಧ್ಯಕ್ಷ ಬಾಲಸಾಹೇಬ್ ಕಾಂಬ್ಳೆ, ಅಂಬಾನಿ ಕುಟುಂಬ ಬಹಳ ವರ್ಷದಿಂದ ಈ ಗಣಪತಿ ಮಂಡಲದೊಂದಿಗೆ ಸಂಬಂಧ ಹೊಂದಿದೆ. ಈ ಬಾರಿ 20 ಕೆ.ಜಿ ಬಂಗಾರದ ಕಿರೀಟ ದಾನ ಮಾಡಿದ್ದಾರೆ. ಅದನ್ನು ಗಣಪತಿಗೆ ತೊಡಿಸಲಾಗಿದೆ. ಉತ್ಸವವನ್ನು ಮೊದಲು 1934ರಲ್ಲಿ ಪುಟ್ಲಬಾಯಿ ಚಾಲ್‌ನಲ್ಲಿ ಆರಂಭಿಸಲಾಯಿತು. ಅಲ್ಲಿಂದ ಲಾಲ್‌ಬೌಚಾ ರಾಜಾ ಸರ್ವಜನಿಕ ಗಣೇಶೋತ್ಸವ ಮಂಡಳಿ ನಿರ್ವಹಿಸಿಕೊಂಡು ಬರುತ್ತಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us