/newsfirstlive-kannada/media/post_attachments/wp-content/uploads/2024/03/Ananth-Ambani.jpg)
ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಅವರ ಪ್ರೀ-ವೆಡ್ಡಿಂಗ್ ಸೆಲೆಬ್ರೇಷನ್ ಜೋರಾಗಿ ನಡೆದ ಬೆನ್ನಲ್ಲೇ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆಯ ಮುಹೂರ್ತ ನಿಗದಿಯಾಗಿದೆ. ಅನಂತ್ ಅಂಬಾನಿ ಅವರ ಮದುವೆ ಆಮಂತ್ರಣ ಪತ್ರಿಕೆ ಕೂಡ ಬಿಡುಗಡೆಯಾಗಿದೆ. ಬೃಹತ್ ಮದುವೆಗೆ ಸಕಲ ಸಿದ್ಧತೆಗಳು ಜೋರಾಗಿ ನಡೆಯುತ್ತಿರುವಾಗಲೇ ಇತ್ತ ಪ್ರೀ-ವೆಡ್ಡಿಂಗ್‌ನಲ್ಲಿ ಯವ್ಯಾವ ಸೆಲೆಬ್ರಿಟಿಗಳಿಗೆ ಎಷ್ಟೇಷ್ಟು ಹಣ ಕೊಡಲಾಗಿದೆ ಎನ್ನುವ ಮಾಹಿತಿ ಕೂಡ ಇದೀಗ ಬಹಿರಂಗವಾಗಿದೆ.
ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ಪುತ್ರ ಅನಂತ್ ಅಂಬಾನಿ ವಿವಾಹ ಮಹೋತ್ಸವವನ್ನು ಅದ್ಧೂರಿಯಾಗಿ ನೆರವೇರಿಸಲು ಪೂರ್ವ ತಯಾರಿಗಳನ್ನು ಮಾಡಲಾಗುತ್ತಿದೆ. ಬಹುಶಃ ಭಾರತದಲ್ಲಿ ನಡೆಯುತ್ತಿರುವ ಅತಿ ದುಬಾರಿ ಮದುವೆ ಸಮಾರಂಭ ಅನ್ನೋ ಖ್ಯಾತಿಗೆ ಅನಂತ್ ಮತ್ತು ರಾಧಿಕಾ ಸಾಕ್ಷಿಯಾಗಲಿದ್ದಾರೆ. ಇನ್ನು ಇವರ ಪ್ರೀ ವೆಡ್ಡಿಂಗ್​ನಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದ ಸೆಲೆಬ್ರಿಟಿಗಳಿಗೆ ಕೋಟಿ, ಕೋಟಿ ಮೊತ್ತದಲ್ಲಿ ಹಣ ಸುರಿದಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ತ್ರಿವರ್ಣ ಧ್ವಜ ಹಿಡಿದು ಉಸಿರು ಚೆಲ್ಲಿದ ಯೋಧ; ದೇಶಭಕ್ತಿ ಗೀತೆಗೆ ಡ್ಯಾನ್ಸ್​ ಮಾಡುವಾಗ ಸಾವು
/newsfirstlive-kannada/media/post_attachments/wp-content/uploads/2024/03/ANANTHA_AMBANI.jpg)
- ಅಕಾಯ್- ಮದುವೆಯಂತಹ ಸಮಾರಂಭಗಳಿಗೆ ₹2 ರಿಂದ 4 ಕೋಟಿ ಬಿಲ್ ಮಾಡುತ್ತಾರೆ
- ರಿಹಾನ್ನಾ- 12 ಕೋಟಿ ರೂಗಳಿಂದ 66 ಕೋಟಿ ರೂ.ಗಳಿಗೆ ಶುಲ್ಕ ವಿಧಿಸುತ್ತಾರೆ.
- ದಿಲ್ಜಿತ್ ದೋಸಾಂಜ್- ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್​​ನಲ್ಲಿ ₹4 ಕೋಟಿ ಸಂಭಾವನೆ ಪಡೆದಿರಬಹುದು.
- ಅರಿಜಿತ್ ಸಿಂಗ್- ಪ್ರೀ ವೆಡ್ಡಿಂಗ್​​ನಲ್ಲಿ 5 ಕೋಟಿ ರೂಪಾಯಿ ಪಡೆದಿರಬಹುದು.
- ಶ್ರೇಯಾ ಘೋಷಾಲ್- ಪ್ರತಿ ಹಾಡಿಗೆ 25 ಲಕ್ಷ ರೂ.ಗಳನ್ನು ಪ್ರಿ ವೆಡ್ಡಿಂಗ್​ನಲ್ಲಿ ವಿಧಿಸಿದ್ದಾರೆ ಎನ್ನಲಾಗಿದೆ.
- ಉದಿತ್ ನಾರಾಯಣ್- ವಿವಾಹ ಸಮಾರಂಭಕ್ಕೆ 22-30 ಲಕ್ಷ ರೂ. ಸಂಭಾವನೆ ಇರುತ್ತದೆ.
- ಬಿ ಪ್ರಾಕ್- ಮದುವೆ ಸಮಾರಂಭಗಳಲ್ಲಿ ಪ್ರತಿ ಹಾಡಿಗೆ ಸುಮಾರು 10-15 ಲಕ್ಷ ರೂ.ಗಳನ್ನ ಚಾರ್ಜ್​ ಮಾಡುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us