newsfirstkannada.com

ಅನಂತ್ ಕುಮಾರ್‌ ಹೆಗಡೆಗೆ ತಪ್ಪಿದ ‘ಲೋಕ’ ಸಮರ, ಮಾಜಿ ಸ್ಪೀಕರ್​ಗೆ ಟಿಕೆಟ್.. ಚಿತ್ರದುರ್ಗ ಇನ್ನೂ ನಿಗೂಢ

Share :

Published March 25, 2024 at 7:40am

    ಮತ್ತೆ ಬಿಜೆಪಿಗೆ ಸೇರಿದ್ದ ಜಗದೀಶ್​ ಶೆಟ್ಟರ್‌ಗೆ ಹೈಕಮಾಂಡ್ ಮಣೆ

    ಲೋಕಸಭಾ ಚುನಾವಣೆ ಕದನಕ್ಕೆ ಬಿಜೆಪಿಯ 5ನೇ ಪಟ್ಟಿ ಬಿಡುಗಡೆ

    ಅನಂತ್ ಕುಮಾರ್‌ ಹೆಗಡೆ ಬದಲು ಟಿಕೆಟ್ ಯಾರಿಗೆ ನೀಡಲಾಗಿದೆ?

ಲೋಕಕದನಕ್ಕೆ ಇನ್ನೇನು ದಿನಗಣನೆ ಶುರುವಾಗಿದೆ. ಬಿಜೆಪಿ- ಕಾಂಗ್ರೆಸ್ ಪಕ್ಷಗಳು ಆಗ್ಲೇ ಪ್ರಚಾರ ಕಾರ್ಯ ಶುರು ಮಾಡಿವೆ. ಚುನಾವಣಾ ಅಖಾಡದಲ್ಲಿ ಗೆಲ್ಲಲೇ ಬೇಕೆಂದು ಪಣ ತೊಟ್ಟಿರುವ ಕೇಸರಿ ಪಡೆ ಅಳೆದು ತೂಗಿ ಕೊನೆಗೂ 5ನೇ ಪಟ್ಟಿ ರಿಲೀಸ್ ಮಾಡಿದ್ದು, ಪಕ್ಷ ತೊರೆದು ಹೋಗಿ ಮತ್ತೆ ಬಿಜೆಪಿಗೆ ಪಾದಾರ್ಪಣೆ ಮಾಡಿದ್ದ ಶೆಟ್ಟರ್‌ಗೆ ಹೈಕಮಾಂಡ್ ಮಣೆ ಹಾಕಿದೆ.

ಲೋಕಸಭಾ ಕುರುಕ್ಷೇತ್ರದಲ್ಲಿ ಗೆಲ್ಲುವ ಕುದುರೆಯನ್ನೇ ಈಗಾಗ್ಲೇ ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದೆ. ಅಳೆದು ತೂಗಿ ಕಾಂಗ್ರೆಸ್‌ಗೆ ಠಕ್ಕರ್ ಕೊಡುವ ಅಭ್ಯರ್ಥಿಗಳನ್ನ ಆಯ್ಕೆ ಮಾಡಿದೆ. ಇದೀಗ ಬಿಜೆಪಿ ಹೈಕಮಾಂಡ್ 5ನೇ ಪಟ್ಟಿಯನ್ನ ರಿಲೀಸ್ ಮಾಡಿದ್ದು, ಕರ್ನಾಟಕದ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಅನೌನ್ಸ್ ಮಾಡಿದೆ.

ಇದನ್ನೂ ಓದಿ: BJP 5ನೇ ಪಟ್ಟಿಯಲ್ಲಿ ಪ್ರಮುಖ ನಾಯಕರಿಗೆ ಟಿಕೆಟ್​ ಮಿಸ್​, ವರುಣ್​ ಗಾಂಧಿಗೆ ಬ್ಯಾಡ್​​ಲಕ್.. ಕಂಗನಾಗೆ ಲಕ್ 

ಬೆಳಗಾವಿಯಿಂದ ಜಗದೀಶ್ ಶೆಟ್ಟರ್‌ಗೆ ಬಿಜೆಪಿ ಮಣೆ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದೇ ಇದ್ದಿದ್ದಕ್ಕೆ ಅಸಮಾಧಾನಗೊಂಡು ಬಿಜೆಪಿ ತೊರೆದು ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾಗಿದ್ರು. ಸ್ವಲ್ಪ ದಿನಗಳ ನಂತ್ರ ದೆಹಲಿಯಲ್ಲಿ ಬಿಜೆಪಿ ಚಾಣಕ್ಯ ಅಮಿತ್‌ ಶಾ-ಜೆಪಿ ನಡ್ಡಾರನ್ನ ಭೇಟಿಯಾಗಿ ಚರ್ಚೆ ನಡೆಸಿ ನಂತರ ಅಧಿಕೃತವಾಗಿ ಮತ್ತೆ ಬಿಜೆಪಿ ಸೇರ್ಪಡೆಗೊಂಡಿದ್ರು. ಈಗ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಅನ್ನು ಮಾಜಿ ಸಿಎಂ ಆಗಿರೋ ಜಗದೀಶ್ ಶೆಟ್ಟರ್‌ಗೆ ನೀಡಲಾಗಿದೆ. ಶೆಟ್ಟರ್ ಲಿಂಗಾಯತ ನಾಯಕರಾಗಿದ್ದು, ಲಿಂಗಾಯತ ಮತಗಳ ಮೇಲೆ ಹೈಕಮಾಂಡ್ ಕಣ್ಣಿಟ್ಟಿದೆ. ಟಿಕೆಟ್ ಘೋಷಣೆ ಆಗ್ತಿದ್ದಂತೆ ಶೆಟ್ಟರ್‌ ಹಾಕಿ ಸಂಭ್ರಮಿಸಲಾಯ್ತು. ಜಗದೀಶ್‌ ಶೆಟ್ಟರ್‌ಗೆ ಬೆಳಗಾವಿ ಟಿಕೆಟ್ ಸಿಕ್ಕಿರೋದಕ್ಕೆ ಹಾಲಿ ಸಂಸದೆ ಮಂಗಲ ಅಂಗಡಿ ಸಂತಸ ವ್ಯಕ್ತಪಡಿಸಿದ್ರು.

ಟಿಕೆಟ್ ಕೊಡುವುದರ ಮೂಲಕ ಬೆಳಗಾವಿ ಕ್ಷೇತ್ರದಲ್ಲಿ ಹೆಚ್ಚಿನ ಸೇವೆ ಮಾಡಲು ಒಂದು ಅವಕಾಶ ಕೊಟ್ಟಿದ್ದಾರೆ. ಪ್ರಧಾನಿ ಮೋದಿ, ಜೆಪಿ ನಡ್ಡಾ ಮತ್ತು ಅಮಿತ್ ಶಾಗೆ ಅಭಿನಂದನೆ ಸಲ್ಲಿಸುತ್ತೇನೆ. ಬಿಜೆಸ್ ಯಡಿಯೂರಪ್ಪ ಮತ್ತು ವಿಜಯೇಂದ್ರಗೂ ಅಭಿನಂದನೆ ಸಲ್ಲಿಸುತ್ತೇನೆ.

ಜಗದೀಶ್ ಶೆಟ್ಟರ್, ಬೆಳಗಾವಿ ಬಿಜೆಪಿ ಅಭ್ಯರ್ಥಿ

ಉತ್ತರಕನ್ನಡದಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಕಣಕ್ಕೆ

ಹಿಂದೂ ಫೈರ್ ಬ್ರ್ಯಾಂಡ್ ಅಂತೇ ಗುರುತಿಸಿಕೊಂಡಿರೋ ಅನಂತ್ ಕುಮಾರ್‌ ಹೆಗಡೆಗೆ ಉತ್ತರಕನ್ನಡ ಲೋಕಸಭಾ ಟಿಕೆಟ್ ಮಿಸ್ ಆಗಿದೆ. 3 ದಶಕಗಳ ಕಾಲ ಸಂಸದರಾಗಿದ್ದ ಹೆಗಡೆಗೆ ಈ ಬಾರಿ ಟಿಕೆಟ್ ಕೈ ತಪ್ಪಿದೆ. ಅನಂತ್​ಕುಮಾರ್​ ಹೆಗಡೆ ಕ್ಷೇತ್ರಕ್ಕೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಆಯ್ಕೆ ಮಾಡಲಾಗಿದೆ. ಟಿಕೆಟ್ ಸಿಕ್ಕ ಸಂತಸದಲ್ಲಿ ಕಾಗೇರಿ ತಮ್ಮ ತಾಯಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ್ರು.

ಜನರ ಅಪೇಕ್ಷೆಯಂತೆ ನಾನು ನನ್ನ ಜವಾಬ್ದಾರಿಗಳನ್ನ ಮುಂದಿನ ದಿನಗಳಲ್ಲಿ ನಿರ್ವಹಿಸುತ್ತೇನೆ. ಮೋದಿ ಪ್ರಧಾನಿಯಾಗುವುದಕ್ಕೆ ಎಲ್ಲ ಬಿಜೆಪಿಗೆ ಬೆಂಬಲಿಸಬೇಕು. ಹಾಗೂ ಗೆಲ್ಲಿಸಬೇಕು ಎಂದು ಪ್ರಾರ್ಥಿಸುತ್ತೇನೆ.

ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಅಭ್ಯರ್ಥಿ

ಚಿತ್ರದುರ್ಗ ಕ್ಷೇತ್ರದ ಟಿಕೆಟ್​ ಪೆಂಡಿಂಗ್​ ಇಟ್ಟ ಬಿಜೆಪಿ

ಇನ್ನುಳಿದಂತೆ, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಮಾಜಿ ಸಚಿವ ಡಾ.ಕೆ ಸುಧಾಕರ್‌ಗೆ ಬಿಜೆಪಿ ಟಿಕೆಟ್ ನೀಡಿದೆ. ಅತ್ತ ರಾಯಚೂರಿಗೆ ಹಾಲಿ ಸಂಸದ ರಾಜಾ ಅಮರೇಶ್ವರ್ ನಾಯಕರ್‌ಗೆ ಬಿಜೆಪಿ ಟಿಕೆಟ್ ನೀಡಿದೆ. ಆದ್ರೆ ಚಿತ್ರದುರ್ಗ ಕ್ಷೇತ್ರವನ್ನ ಬಿಜೆಪಿ ಹೈಕಮಾಂಡ್​ ಪೆಂಡಿಂಗ್​ ಇಟ್ಟಿದೆ. ಇದು ಹಾಲಿ ಸಂಸದ ಎ ನಾರಾಯಣಸ್ವಾಮಿಗೆ ಟೆನ್ಷನ್​ ಹೆಚ್ಚಿಸಿದೆ.

ಇಂದು ಮೈತ್ರಿ ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ಸಾಧ್ಯತೆ

ರಾಜ್ಯದ 28 ಕ್ಷೇತ್ರಗಳ ಪೈಕಿ 24 ಕ್ಷೇತ್ರಕ್ಕೆ ಅಭ್ಯರ್ಥಿ ಘೋಸಿಷಿದ್ದು ಒಂದು ಕ್ಷೇತ್ರ ಪೆಂಡಿಂಗ್​ ಇಟ್ಟುಕೊಂಡಿದೆ. ಇನ್ನು ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆ ಮೂರು ಕ್ಷೇತ್ರಗಳನ್ನು ಜೆಡಿಎಸ್​ಗೆ ಬಿಟ್ಟುಕೊಡಲಾಗಿದೆ. ಇವತ್ತು ಚನ್ನಪಟ್ಟಣದಲ್ಲಿ ಜೆಡಿಎಸ್​ ಮುಖಂಡರ ಜೊತೆ ಹೆಚ್​ಡಿಕೆ ಸಭೆ ನಡೆಸಲಿದ್ದು, ಸಭೆ ಬಳಿಕ ಮಂಡ್ಯಕ್ಕೆ ಅಭ್ಯರ್ಥಿ ಘೋಷಣೆ ಮಾಡುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅನಂತ್ ಕುಮಾರ್‌ ಹೆಗಡೆಗೆ ತಪ್ಪಿದ ‘ಲೋಕ’ ಸಮರ, ಮಾಜಿ ಸ್ಪೀಕರ್​ಗೆ ಟಿಕೆಟ್.. ಚಿತ್ರದುರ್ಗ ಇನ್ನೂ ನಿಗೂಢ

https://newsfirstlive.com/wp-content/uploads/2024/03/ANANT-KUMAR-HEGADE.jpg

Load More