newsfirstkannada.com

BJP 5ನೇ ಪಟ್ಟಿಯಲ್ಲಿ ಪ್ರಮುಖ ನಾಯಕರಿಗೆ ಟಿಕೆಟ್​ ಮಿಸ್​, ವರುಣ್​ ಗಾಂಧಿಗೆ ಬ್ಯಾಡ್​​ಲಕ್.. ಕಂಗನಾಗೆ ಲಕ್

Share :

Published March 25, 2024 at 7:06am

Update March 25, 2024 at 7:16am

    ಹಾಲಿ 12 ಸಂಸದರಿಗೆ ಲೋಕಸಭೆಯಿಂದ ಕೊಕ್‌ ನೀಡಿದ ಬಿಜೆಪಿ

    ಸಂಸತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಹ್ಯಾಟ್ರಿಕ್ ಗೆಲುವಿನ ಕನಸು

    ದೀದಿ ವಿರುದ್ಧ ತಿರುಗಿಬಿದ್ದಿದ್ದ ಅಭಿಜಿತ್‌ ಗಂಗೋಪಾಧ್ಯಾಯಗೆ ಟಿಕೆಟ್‌

ಬಿಜೆಪಿ 5ನೇ ಪಟ್ಟಿ ಬಿಡುಗಡೆ.. ಕಂಗನಾ ರಣವಾತ್​ಗೆ ಟಿಕೆಟ್​.. ಮನೇಕಾ ಗಾಂಧಿ ಟಿಕೆಟ್​ ಮಗನಿಗೆ ಮಿಸ್​.. ಬಿಜೆಪಿ ಸೇರಿದ ಒಂದೇ ಗಂಟೆಯಲ್ಲಿ ನವೀನ್ ಜಿಂದಾಲ್​ಗೆ ಟಿಕೆಟ್​.. ದೀದಿ ಸರ್ಕಾರದ ವಿರುದ್ಧ ತೊಡೆತಟ್ಟಿದ್ದ ನ್ಯಾಯಾಧೀಶನಿಗೆ ಬಿಜೆಪಿ ಟಿಕೆಟ್​​. ರಾಮಾಯಣ ಪಾತ್ರಧಾರಿ ಅರುಣ್​ ಗೋವಿಲ್​ಗೆ ಟಿಕೆಟ್​.

ಲೋಕಸಭೆ ಚುನಾವಣೆಗೆ ಬಿಜೆಪಿ 5ನೇ ಪಟ್ಟಿ ರಿಲೀಸ್​

ದೇಶದಲ್ಲಿ 18ನೇ ಲೋಕಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅದರಲ್ಲೂ ಈ ಬಾರಿ ಲೋಕಸಭಾ ಚುನಾವಣೆಗೆ ಖ್ಯಾತ ನಟ ಹಾಗೂ ನಟಿಯರಿಗೆ ನಾನಾ ಪಕ್ಷಗಳು ಟಿಕೆಟ್ ನೀಡುತ್ತಿವೆ. ಇದರ ಮಧ್ಯೆ ಬಿಜೆಪಿ ಲೋಕಸಭಾ ಚುನಾವಣೆಗೆ 111 ಅಭ್ಯರ್ಥಿಗಳ 5ನೇ ಪಟ್ಟಿ ರಿಲೀಸ್​ ಮಾಡಿದೆ.. ಐದನೇ ಪಟ್ಟಿಯಲ್ಲಿ ಬಾಲಿವುಡ್​ ನಟರು, ಹೊಸದಾಗಿ ಪಕ್ಷ ಸೇರಿದವರು, ನಿವೃತ್ತ ನ್ಯಾಯಾಧೀಶರಿಗೆ ಕೇಸರಿ ಪಾಳಯ ಮಣೆ ಹಾಕಿದೆ. ಆದ್ರೆ ಹಾಲಿ 12 ಸಂಸದರಿಗೆ ಲೋಕಸಭೆಯಿಂದ ಬಿಜೆಪಿ ಕೊಕ್‌ ನೀಡಿದೆ.

ಮಂಡಿ ಕ್ಷೇತ್ರದಿಂದ ನಟಿ ಕಂಗನಾ ರಣಾವತ್‌ಗೆ ಸ್ಪರ್ಧೆ

ಸಂಸತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಹ್ಯಾಟ್ರಿಕ್ ಗೆಲುವಿನ ಕನಸು ಕಾಣ್ತಿದ್ದು, ಚಿತ್ರರಂಗದ ಗಣ್ಯರಿಗೂ ಟಿಕೆಟ್ ನೀಡಿ ಗೆಲ್ಲುವ ಕುದುರೆಗಳನ್ನೇ ಆಯ್ಕೆ ಮಾಡಿದೆ. ರಾಷ್ಟ್ರೀಯ ಪ್ರಶಸ್ತಿ ವಿಜೇತೆ, ಬಾಲಿವುಡ್ ಕ್ವೀನ್​ ಕಂಗನಾ ರಣಾವತ್​​ಗೆ ಕೊನೆಗೂ ಬಿಜೆಪಿ ಟಿಕೆಟ್ ಸಿಕ್ಕಿದೆ. ನಟಿ ಕಂಗಾನಾ, ಹಿಮಾಚಲ ಪ್ರದೇಶದ ಮಂಡಿ ನಿವಾಸಿಯಾಗಿದ್ದು, ಮಂಡಿ ಕ್ಷೇತ್ರದಿಂದಲೇ ಮೊದಲ ಚುನಾವಣೆ ಎದುರಿಸುತ್ತಿದ್ದಾರೆ. ಟಿಕೆಟ್​ ಸಿಕ್ಕಿದ್ದಕ್ಕೆ ಬಾಲಿವುಡ್​ ನಟಿ ಸಂತಸ ವ್ಯಕ್ತಪಡಿಸಿದ್ದಾರೆ.

ವರುಣ್‌ ಗಾಂಧಿಗೆ ಟಿಕೆಟ್‌ ಮಿಸ್​.. ಮನೇಕಾಗೆ ಬಿಜೆಪಿ ಮಣೆ

ಹಾಲಿ ಸಂಸದ ವರುಣ್‌ ಗಾಂಧಿ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್‌ ನೀಡುವುದಿಲ್ಲ ಎಂದೇ ಹೇಳಲಾಗುತ್ತಿತ್ತು. ಈ ವದಂತಿ ಕೊನೆಗೂ ನಿಜವಾಗಿದೆ. ಪಿಲಿಭಿಟ್‌ ಕ್ಷೇತ್ರದಿಂದ ವರುಣ್‌ ಗಾಂಧಿ ಅವರನ್ನು ಕೈಬಿಡಲಾಗಿದೆ. ವರುಣ್‌ ಗಾಂಧಿ ಬದಲು ಜಿತಿನ್‌ ಪ್ರಸಾದ ಅವರಿಗೆ ಟಿಕೆಟ್‌ ನೀಡಿದೆ. ಆದರೆ, ವರುಣ್‌ ಗಾಂಧಿ ಅವರ ತಾಯಿ ಮನೇಕಾ ಗಾಂಧಿಗೆ ಸುಲ್ತಾನ್‌ಪುರದಿಂದ ಟಿಕೆಟ್‌ ನೀಡಲಾಗಿದೆ.

ರಾಮಾಯಣ ಧಾರಾವಾಹಿಯ ಶ್ರೀರಾಮನಿಗೆ ಬಿಜೆಪಿ ಟಿಕೆಟ್

ಬಿಜೆಪಿ ತನ್ನ 5ನೇ ಪಟ್ಟಿಯಲ್ಲಿ ಹಲವು ಅಚ್ಚರಿ ಅಭ್ಯರ್ಥಿಗಳಿಗೆ ಮಣೆ ಹಾಕಿದೆ. ‘ರಾಮಾಯಣ’ ಧಾರಾವಾಹಿಯ ಶ್ರೀರಾಮ ಪಾತ್ರಧಾರಿ ಅರುಣ್ ಗೋವಿಗೆ ಟಿಕೆಟ್ ನೀಡಿದೆ.

  • ನಟ ಅರುಣ್ ಗೋವಿಲ್ ಬಾಲಿವುಡ್‌ನ ಜನಪ್ರಿಯ ನಟ
  • ಕಿರುತೆರೆಯ ಜೊತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ
  • ‘ರಾಮಾಯಣ’ ಧಾರಾವಾಹಿಯಲ್ಲಿ ಶ್ರೀರಾಮನಾಗಿ ನಟಿಸಿದ್ದರು
  • ಆ ಪಾತ್ರವನ್ನು ಬಹುತೇಕ ಮಂದಿ ಇನ್ನು ಕೂಡ ಮರೆತಿಲ್ಲ
  • ಇದೇ ಲೆಕ್ಕಾಚಾರದಿಂದ ಅರುಣ್​ ಗೋವಿಲ್​ಗೆ BJP ಮಣೆ
  • ಉತ್ತರ ಪ್ರದೇಶದ ಮೀರತ್‌ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಟಿಕೆಟ್

ದೀದಿ ವಿರುದ್ಧ ಸೆಡ್ಡು ಹೊಡೆದಿದ್ದ ಅಭಿಜಿತ್‌ ಗಂಗೋಪಾಧ್ಯಾಯಗೆ ಟಿಕೆಟ್‌

ಕೆಲ ದಿನಗಳ ಹಿಂದಷ್ಟೇ ಕೋಲ್ಕೊತಾ ನ್ಯಾಯಮೂರ್ತಿ ಹುದ್ದೆಗೆ ರಾಜೀನಾಮೆ ನೀಡಿ, ಬಿಜೆಪಿ ಸೇರ್ಪಡೆಯಾಗಿದ್ದ ನ್ಯಾ. ಅಭಿಜಿತ್‌ ಗಂಗೋಪಾಧ್ಯಾಯಗೆ ಬಿಜೆಪಿ ಟಿಕೆಟ್‌ ನೀಡಿದೆ. ಅಭಿಜಿತ್‌ ಗಂಗೋಪಾಧ್ಯಾಯ ಅವರು ಪಶ್ಚಿಮ ಬಂಗಾಳದ ತಮ್ಲುಕ್‌ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇನ್ನು ಕೇರಳದ ವಯನಾಡು ಕ್ಷೇತ್ರದಲ್ಲಿ ಬಿಜೆಪಿಯು ರಾಜ್ಯಾಧ್ಯಕ್ಷ ಕೆ. ಸುರೇಂದ್ರ ಅವರಿಗೆ ಟಿಕೆಟ್‌ ನೀಡಿದೆ. ಇದರೊಂದಿಗೆ ವಯನಾಡಿನಲ್ಲಿ ರಾಹುಲ್‌ ಗಾಂಧಿ ಹಾಗೂ ಕೆ. ಸುರೇಂದ್ರ ಮಧ್ಯೆ ಪೈಪೋಟಿ ನಡೆಯಲಿದೆ.

ಇದನ್ನೂ ಓದಿ: ಇಡಿ ವಶದಲ್ಲಿ ದೆಹಲಿ ಸಿಎಂ ಕೇಜ್ರಿವಾಲ್; ಮಾರ್ಚ್​ 31ಕ್ಕೆ ಮಹಾ ಱಲಿ ಘೋಷಿಸಿದ AAP, ಕಾಂಗ್ರೆಸ್

ಹೊಸದಾಗಿ ಪಕ್ಷ ಸೇರ್ಪಡೆಯಾವರಿಗೂ ಕಮಲ ಪಡೆ ಟಿಕೆಟ್

ಬಿಜೆಪಿಯು ಐದನೇ ಅಭ್ಯರ್ಥಿಗಳ ಪಟ್ಟಿಯಲ್ಲಿ ನಿರೀಕ್ಷೆಯಂತೆಯೇ ಕೆಲವು ಅಚ್ಚರಿಯ ಘೋಷಣೆಗಳನ್ನು ಮಾಡಿದೆ. ಅದರಲ್ಲೂ, ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಕೆಲವೇ ಗಂಟೆಗಳಲ್ಲಿ ಉದ್ಯಮಿ ನವೀನ್‌ ಜಿಂದಾಲ್‌ಗೆ ಟಿಕೆಟ್‌ ನೀಡಿದೆ. ಕುರುಕ್ಷೇತ್ರದಿಂದ ಉದ್ಯಮಿ ನವೀನ್​ ಜಿಂದಾಲ್​ಗೆ ಸ್ಪರ್ಧೆ ಮಾಡುತ್ತಿದ್ದಾರೆ. ಜಾರ್ಖಂಡ್‌ ಮುಕ್ತಿ ಮೋರ್ಚಾ ಮುಖ್ಯಸ್ಥ ಶಿಬು ಸೊರೇನ್‌ ಅವರ ಸೊಸೆ ಸೀತಾ ಸೊರೇನ್‌ ಅವರಿಗೆ ಜಾರ್ಖಂಡ್‌ನ ಡುಮ್ಕಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ನೀಡಲಾಗಿದೆ

ಇದೇ ವೇಳೆ ಪ್ರಮುಖ ನಾಯಕರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ವಿಕೆ ಸಿಂಗ್ ಸೇರಿದಂತೆ ಕೆಲ ಪ್ರಮುಖರು ಈ ಬಾರಿಯ ಲೋಕಸಭಾ ಚುನಾವಣಾ ಟಿಕೆಟ್ ಮಿಸ್ ಆಗಿದೆ. ಲೋಕಸಭೆ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವಿನ ಲೆಕ್ಕಾಚಾರದಲ್ಲಿ ಬಿಜೆಪಿ ಅಳೆದೂ ತೂಗಿ ಅಭ್ಯರ್ಥಿಗಳು ಅಖಾಡಕ್ಕೆ ಇಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BJP 5ನೇ ಪಟ್ಟಿಯಲ್ಲಿ ಪ್ರಮುಖ ನಾಯಕರಿಗೆ ಟಿಕೆಟ್​ ಮಿಸ್​, ವರುಣ್​ ಗಾಂಧಿಗೆ ಬ್ಯಾಡ್​​ಲಕ್.. ಕಂಗನಾಗೆ ಲಕ್

https://newsfirstlive.com/wp-content/uploads/2024/03/KANGANA-1.jpg

Load More