newsfirstkannada.com

ಅನಂತ್ ಅಂಬಾನಿ, ರಾಧಿಕಾ ಮದ್ವೆ ಆಮಂತ್ರಣ ಪತ್ರಿಕೆ ರಿಲೀಸ್‌; ಅತಿಥಿಗಳಿಗೆ ಸ್ಪೆಷಲ್‌ ಡ್ರೆಸ್ ಕೋಡ್‌ ಕಡ್ಡಾಯ

Share :

Published May 30, 2024 at 2:15pm

Update May 30, 2024 at 2:25pm

  ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆಗೆ ಮುಹೂರ್ತ

  ಜಿಯೋ ವರ್ಲ್ಡ್ ಕನ್ಷೆಷನ್ ಸೆಂಟರ್‌ನಲ್ಲಿ ಅದ್ಧೂರಿ ವಿವಾಹ ಸಮಾರಂಭ

  ಮದುವೆ ಆಮಂತ್ರಣದಲ್ಲಿ ಅತಿಥಿಗಳಿಗೆ ಡ್ರೆಸ್‌ ಕೋಡ್‌ನಲ್ಲಿ ಬರುವಂತೆ ಮನವಿ

ಮುಂಬೈ: ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಖೇಶ್‌ ಅಂಬಾನಿ ಅವರ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ಪುತ್ರ ಅನಂತ್ ಅಂಬಾನಿ ಅವರ ವಿವಾಹ ಮಹೋತ್ಸವವನ್ನು ಬಹಳ ಅದ್ಧೂರಿಯಿಂದ ನೆರವೇರಿಸಲಾಗುತ್ತಿದೆ. ಬಹುಶಃ ಭಾರತದಲ್ಲಿ ನಡೆಯುತ್ತಿರುವ ಅತಿ ದುಬಾರಿ ಮದುವೆ ಸಮಾರಂಭ ಅನ್ನೋ ಖ್ಯಾತಿಗೆ ಇದು ಪಾತ್ರವಾಗುತ್ತಿದೆ.

ಇದನ್ನೂ ಓದಿ: 100, 200, 300 ಅಲ್ಲ.. ನೀತಾ ಅಂಬಾನಿ ಧರಿಸಿದ್ದ ನೆಕ್ಲೆಸ್ ಬೆಲೆ ಎಷ್ಟು ಕೋಟಿ ರೂ. ಗೊತ್ತಾ? 

ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್‌ ಅವರ ಪ್ರೀ-ವೆಡ್ಡಿಂಗ್‌ ಸೆಲೆಬ್ರೇಷನ್ ಜೋರಾಗಿರುವಾಗಲೇ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆಯ ಮುಹೂರ್ತ ನಿಗದಿಯಾಗಿದೆ. ಅನಂತ್ ಅಂಬಾನಿ ಅವರ ಮದುವೆ ಆಮಂತ್ರಣ ಪತ್ರಿಕೆ ಬಿಡುಗಡೆಯಾಗಿದೆ.

ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್‌ ಮದುವೆ ಹಿಂದೂ ವೈದಿಕ ಸಂಪ್ರದಾಯದ ಪ್ರಕಾರ ಮುಂಬೈನಲ್ಲಿ ನಡೆಯುತ್ತಿದೆ. ಇದೇ ಜುಲೈ 12ರಂದು ಮುಂಬೈನ ಬಾಂದ್ರಾ ಕುರ್ಲಾ ಕಾಂಫ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ಕನ್ಷೆಷನ್ ಸೆಂಟರ್‌ನಲ್ಲಿ ಅದ್ಧೂರಿ ವಿವಾಹ ಸಮಾರಂಭ ನಡೆಯಲಿದೆ.

ಮದುವೆ ಆಮಂತ್ರಣ ಪತ್ರಿಕೆಯ ಅನ್ವಯ ಇದೇ ಜುಲೈ 12ರಂದು ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ವಿವಾಹ ಸಮಾರಂಭ ನಡೆಯಲಿದೆ. ಜುಲೈ 13ರಂದು ಶುಭ ಆಶೀರ್ವಾದ ಸಮಾರಂಭ ಹಾಗೂ ಜುಲೈ 14ರಂದು ವಿವಾಹ ಆರತಕ್ಷತೆಯ ಸಮಾರಂಭ ನಡೆಯುತ್ತಿದೆ.

ಇದನ್ನೂ ಓದಿ: ಲವ್ ಬ್ರೇಕ್ ಅಪ್ ಸ್ಟೋರಿ.. ಪ್ರಿಯಕರನ ಮೇಲೆ ಪೆಟ್ರೋಲ್ ಎರಚಿ ಕೊಲೆಗೆ ಯತ್ನ; ಮುಂದೇನಾಯ್ತು? 

ಅನಂತ್ ಅಂಬಾನಿ ವಿವಾಹದ ಆಮಂತ್ರಣದಲ್ಲಿ ಅತಿಥಿಗಳಿಗೆ ಡ್ರೆಸ್‌ ಕೋಡ್‌ನಲ್ಲಿ ಬರುವಂತೆ ಆಹ್ವಾನದಲ್ಲಿ ತಿಳಿಸಲಾಗಿದೆ. ಮೊದಲ ದಿನ ಭಾರತದ ಸಂಪ್ರದಾಯಿಕ ಡ್ರೆಸ್ ಕೋಡ್‌ನಲ್ಲಿ ಬರುವಂತೆ ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ. 2ನೇ ದಿನ ಇಂಡಿಯನ್ ಫಾರ್ಮಲ್ ಡ್ರೆಸ್‌ನಲ್ಲಿ ಬರುವಂತೆ ಅತಿಥಿಗಳಿಗೆ ಕೋರಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅನಂತ್ ಅಂಬಾನಿ, ರಾಧಿಕಾ ಮದ್ವೆ ಆಮಂತ್ರಣ ಪತ್ರಿಕೆ ರಿಲೀಸ್‌; ಅತಿಥಿಗಳಿಗೆ ಸ್ಪೆಷಲ್‌ ಡ್ರೆಸ್ ಕೋಡ್‌ ಕಡ್ಡಾಯ

https://newsfirstlive.com/wp-content/uploads/2024/05/Ananth-Ambani-Invitation-1.jpg

Load More