/newsfirstlive-kannada/media/post_attachments/wp-content/uploads/2024/10/pomegranate-Benifits.jpg)
ದಾಳಿಂಬೆ, ಹಣ್ಣುಗಳ ಸ್ವರ್ಗ ಅಂತಲೇ ಅದನ್ನು ಕರೆಯುತ್ತಾರೆ. ಚೆಲುವೆಯರ ನಗೆಗೆ ಆ ದಾಳಿಂಬೆ ಹಣ್ಣಿನ ಕಾಳುಗಳನ್ನು ಹೋಲಿಸುತ್ತಾರೆ. ದಾಳಿಂಬೆ ಹಣ್ಣು, ಸೇಬುವಿನ ಹಾಗೆಯೇ ಎಲ್ಲರಿಗೂ ಪ್ರಿಯವಾದ ಹಣ್ಣು. ಈ ಹಣ್ಣು ಆರೋಗ್ಯ ದೃಷ್ಟಿಯಿಂದಲೂ ಕೂಡ ಅಷ್ಟೇ ಮಹತ್ವ ಪಡೆದುಕೊಂಡಿದೆ. ಈ ಹಣ್ಣಿನೊಳಗಡೆ ಅಡಗಿರುವ ಒಂದೊಂದು ಕೆಂಪು ಮುತ್ತುಗಳು ಆರೋಗ್ಯಕ್ಕೆ ಹಲವು ಕೊಡುಗೆಗಳನ್ನು ನೀಡುತ್ತವೆ. ಇದನ್ನು ಬೆರಿಽ ಹಣ್ಣಿನ ಜೊತೆ ಕೂಡ ಹೋಲಿಕೆ ಮಾಡುತ್ತಾರೆ. ಪ್ರೀತಿಯಿಂದ ತಿನ್ನುವ ಈ ಬೀಜಗಳನ್ನು ಪಾಕಶಾಲೆಯಲ್ಲಿ ಅನೇಕ ಖಾದ್ಯಗಳ ತಯಾರಿಕೆಗೆ ಬಳಸುತ್ತಾರೆ.
ಇದನ್ನೂ ಓದಿ:ನವರಾತ್ರಿಗೆ ಉಪವಾಸ ಮಾಡ್ತೀರಾ? ಈ ಎರಡು ಪದಾರ್ಥ ತ್ಯಜಿಸಿದ್ರೆ ಆಗೋ ಲಾಭವೇನು?
ಈ ದಾಳಿಂಬೆ ಹಣ್ಣಿನಿಂದ ನಮಗೆ ಅನೇಕ ಆರೋಗ್ಯದ ಪ್ರಯೋಜನಗಳು ಇವೆ. ನ್ಯೂಟ್ರಿಷನ್ಸ್ಗಳು ಹೇಳುವ ಪ್ರಕಾರ ಒಂದು ಬೌಲ್ ದಾಳಿಂಬೆ ಹಣ್ಣಿನ ಬೀಜಗಳಲ್ಲಿ 93 ಕ್ಯಾಲರೀಸ್ 2..30 ಗ್ರಾಮ್ನಷ್ಟು ಪೌಷ್ಠಿಕಾಂಶ (ಪ್ರೋಟಿನ್)ಸ, 20.88 ಗ್ರಾಮ್ನಷ್ಟು ಕಾರ್ಬೋಹೈಡ್ರೆಡ್ ಹಾಗೂ 0.4 ಗ್ರಾಮ್ನಷ್ಟು ಕೊಬ್ಬಿನಂಶ ಅಂದ್ರೆ ಫ್ಯಾಟ್ ಇರುತ್ತದೆ. ಇನ್ನು ನಿತ್ಯ ನೀವು ದಾಳಿಂಬೆ ಹಣ್ಣನ್ನು ಸೇವಿಸುವುದರಿಂದ ಆಗಲಿರುವ ಐದು ಉಪಯೋಗಗಳ ಬಗ್ಗೆ ನಾವು ಈ ಲೇಖನದಲ್ಲಿ ಹೇಳುತ್ತೇವೆ.
ರಕ್ತದೊತ್ತಡ ನಿರ್ವಹಣೆ ಮಾಡುವ ಹಣ್ಣು
ನೀವು ರಕ್ತದೊತ್ತಡದಿಂದ ಬಳಲುತ್ತಿದ್ದರೆ. ಅದರಿಂದ ಅನೇಕ ತೊಂದರೆಳಾಗುತ್ತಿದ್ದರೆ ದಾಳಿಂಬೆಯೊಂದಿಗೆ ನಿಮ್ಮ ಸ್ನೇಹ ಬೆಳೆಸಿಕೊಳ್ಳಿ. ನಿತ್ಯ ಒಂದು ಗ್ಲಾಸ್ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ನಿಮ್ಮ ದೈನಂದಿನ ಬದುಕಿನಲ್ಲಾಗುವ ಒತ್ತಡಗಳ ನಿರ್ವಹಣೆಯ ಜೊತೆಗೆ ರಕ್ತದೊತ್ತಡವನ್ನು ಕಡಿಮೆ ಮಾಡುವ ಶಕ್ತಿ ದಾಳಿಂಬೆ ಹಣ್ಣಿನನಲ್ಲಿದೆ.
ಸೋಂಕಿನಿಂದ ಬಳಲುತ್ತಿದ್ದರೆ ಬೇಕು ದಾಳಿಂಬೆ ಹಣ್ಣು
ನೀವು ಪದೇ ಪದೇ ವೈರಲ್ ಇನ್ಫೆಕ್ಷನ್ನಂತಹ ಸಮಸ್ಯೆಗಳಿಂದ ಬಳಲುತ್ತಿದ್ದಲ್ಲಿ, ನೀವು ದಾಳಿಂಬೆ ಹಣ್ಣಿನ ಮೊರೆ ಹೋಗಬೇಕು. ದಾಳಿಂಬೆ ಹಣ್ಣು ನಮ್ಮ ದೇಹದಲ್ಲಿ ಆ್ಯಂಟಿ ಬ್ಯಾಕ್ಟಿರಿಯಾ ಹಾಗೂ ಆ್ಯಂಟಿಫಂಗಲ್ನ್ನು ಧ್ವಂಸಗೊಳಿಸುವ ಶಕ್ತಿಯನ್ನು ಹೊಂದಿದೆ. ನಿತ್ಯ ಒಂದು ಬಟ್ಟಲದಷ್ಟು ದಾಳಿಂಬೆ ಹಣ್ಣನ್ನು ತಿನ್ನುವುದರಿಂದ, ನಮ್ಮ ದೇಹದಲ್ಲಿ ಕಾಯಿಲೆಗಳ ವಿರುದ್ಧ ಹೋರಾಡುವ ಒಂದು ರಕ್ಷಣಾತ್ಮಕ ಶಕ್ತಿಯನ್ನು ಈ ಹಣ್ಣು ಬೆಳೆಸುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಾಗುವುದರಿಂದ ಸೋಂಕುಗಳು ನಮ್ಮನ್ನು ಆವರಿಸುವುದು ಕಡಿಮೆ ಆಗುತ್ತದೆ.
ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತೆ ಕೆಂಪು ಮುತ್ತುಗಳ ಹಣ್ಣು
ನಿತ್ಯ ದಾಳಿಂಬೆ ಹಣ್ಣನ್ನು ತಿನ್ನುವುದರಿಂದ ಅಥವಾ ನಿತ್ಯ ಅದರ ಜ್ಯೂಸ್ ಮಾಡಿಕೊಂಡು ಕುಡಿಯುವದರಿಂದ ನಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಝಮೈರ್ಸ್ನಂತಹ ಕಾಯಿಲೆಗಳು ನಮಗೆ ಬರದಂತೆ ತಡೆಗಟ್ಟುವ ಶಕ್ತಿ ಈ ದಾಳಿಂಬೆ ಹಣ್ಣಿಗಿದೆ. ಹೃದಯಸಂಬಂಧಿ ಕಾಯಿಲೆಗಳನ್ನು ನಿಯಂತ್ರಣ ಮಾಡುವ ಶಕ್ತಿಯೂ ಕೂಡ ಈ ಹಣ್ಣಿಗಿದೆ.
ಇದನ್ನೂ ಓದಿ:ನೆನೆಯಿಟ್ಟ ಹೆಸರು ಕಾಳು ತಿನ್ನುವುದರಿಂದ ಇದೆ ಹಲವು ಪ್ರಯೋಜನಗಳು; ಆರೋಗ್ಯದಲ್ಲಿ ಏನೆಲ್ಲಾ ಸುಧಾರಣೆ ಆಗಲಿದೆ?
ವ್ಯಾಯಾಮ ಮಾಡುವವರಿಗೆ ಮತ್ತಷ್ಟು ಶಕ್ತಿ
ನಿತ್ಯ ಒಂದು ಬಟ್ಟಲು ದಾಳಿಂಬೆ ಹಣ್ಣಿನ ಕಾಳುಗಳನ್ನು ತಿನ್ನವುದರಿಂದ ಅನೇಕ ಲಾಭಗಳಲ್ಲಿ ಮತ್ತೊಂದು ಲಾಭ ಎಂದರೆ, ನಿತ್ಯ ಕಸರತ್ತು ಮಾಡುವವರಿಗೆ ಇದು ಬಹಳ ಸಹಾಯಕಾರಿ. ಈ ಹಣ್ಣು ತಿನ್ನುವುದರಿಂದ ದೇಹದಲ್ಲಿ ರಕ್ತ ಪೂರೈಕೆ ಸರಳವಾಗುತ್ತದೆ. ವ್ಯಾಯಾಮ ಮಾಡುವವರ ಸ್ನಾಯುಗಳಿಗೆ ಹೆಚ್ಚು ಹೆಚ್ಚು ರಕ್ತ ಪೂರೈಸುವಲ್ಲಿ ಈ ಹಣ್ಣು ಸಹಾಯಕಾರಿ ಹೀಗಾಗಿ ಈ ಹಣ್ಣನ್ನು ಹೆಚ್ಚು ಹೆಚ್ಚು ಜಿಮ್ಗೆ ಹೋಗುವವರು ಸೇವಿಸುವುದು ಒಳ್ಳೆಯದು. ಈ ಹಣ್ಣಿನಲ್ಲಿ ಪೌಷ್ಠಿಕಾಂಶದ ಜೊತೆಗೆ ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್ಸ್ಗಳು ಇವೆ. ಇವು ನಿಮ್ಮ ಸ್ನಾಯುಗಳನ್ನು ಮತ್ತಷ್ಟು ಬಲಿಷ್ಠಗೊಳಿಸುವಲ್ಲಿ ಸಹಾಯಕಾರಿ.
ಕ್ಯಾನ್ಸರ್ ತಡೆಗಟ್ಟವು ಶಕ್ತಿ
ದಾಳಿಂಬೆ ಹಣ್ಣಿನಲ್ಲಿ ಪಾಲಿಫೆನಿಲ್ಸ್ ಎನ್ನುವ ಅಂಶವಿದೆ ಇದರಿಂದ ದೇಹದಲ್ಲಿ ಆ್ಯಂಟಿಆಕ್ಸಿಡಂಟ್, ಆ್ಯಂಟಿ ಇನ್ಫ್ಲೆಮೆಟರಿ ಆ್ಯಂಟಿ ಕಾರ್ಗಿನಾಜಿಕ್ನಂತಹ ಪರಿಣಾಮ ಬೀರುತ್ತದೆ. ಇವು ಲಂಗ್ಸ್ ಕ್ಯಾನ್ಸರ್ನಂತಹ ಕಾಯಿಲೆಗಳು ಬರದಂತೆ ತಡೆಗಟ್ಟುತ್ತವೆ. ಬ್ರೀಸ್ಟ್ ಕ್ಯಾನ್ಸರ್ಗಳ ವಿರುದ್ಧ ಕೆಮೊ ಪ್ರಿವೆಂಟ್ ಪ್ರಾಪರ್ಟಿಸ್ಗಳನ್ನು ಇವು ಬೆಳೆಸುತ್ತವೆ.
ಹೀಗಾಗಿ ನಿತ್ಯ ಒಂದು ದಾಳಿಂಬೆ ಇಲ್ಲವೇ ಒಂದು ಬಟ್ಟಳು ದಾಳಿಂಬೆ ಕಾಳುಗಳನ್ನು ತಿನ್ನುವುದರಿಂದ ಈ ಐದು ಪ್ರಮುಖ ಆರೋಗ್ಯ ಲಾಭಗಳಿವೆ. ಇಷ್ಟೆ ಅಲ್ಲ ವಿರ್ಯಾಣುಗಳ ಸಂಖ್ಯೆಯನ್ನು ವೃದ್ಧಿಸುವಲ್ಲಿಯೂ ಕೂಡ ದಾಳಿಂಬೆ ಹಣ್ಣು ಬಹಳ ಸಹಾಯಕಾರಿ ಎಂದು ವೈದ್ಯರು ಹೇಳುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ