Advertisment

ಅಪ್ಪು ಬರ್ತ್‌ಡೇಗೆ ನಿರೂಪಕಿ ಅನುಶ್ರೀ ಮದುವೆ ಆಗೋದು ನಿಜಾನಾ? ಶುಭಾಶಯಗಳ ಸುರಿಮಳೆ!

author-image
admin
Updated On
ಅಪ್ಪು ಬರ್ತ್‌ಡೇಗೆ ನಿರೂಪಕಿ ಅನುಶ್ರೀ ಮದುವೆ ಆಗೋದು ನಿಜಾನಾ? ಶುಭಾಶಯಗಳ ಸುರಿಮಳೆ!
Advertisment
  • ಕರುನಾಡಿನ ಮನೆ ಮಗಳ ಮದುವೆಗೆ ಕಾಯುತ್ತಿರುವ ಫ್ಯಾನ್ಸ್‌!
  • ಮದುವೆ ಯಾವಾಗ ಮೇಡಂ ಅನ್ನೋರಿಗೆ ಖುದ್ದು ಅನುಶ್ರೀ ಉತ್ತರ
  • ಅನುಶ್ರೀ ಅಪ್ಪು ಫ್ಯಾನ್ ಆಗಿರೋದ್ರಿಂದ ಅಂದೇ ಮದುವೆ ಫಿಕ್ಸ್‌?

ಪಟ ಪಟ ಅಂತ ಅರಳು ಹುರಿದಂಗೆ ಮಾತನಾಡೋ ಅಚ್ಚುಮೆಚ್ಚಿನ ನಿರೂಪಕಿ ಅನುಶ್ರೀ. ಅವರ ಆ್ಯಂಕರಿಂಗ್​ ಕರುನಾಡ ಮನೆ ಮಾತು. ಅಷ್ಟೇ ಯಾಕೆ ಅನುಶ್ರೀ ಕರುನಾಡಿನ ಮನೆ ಮಗಳು ಅಂದ್ರು ತಪ್ಪಾಗಲ್ಲ. ಕಿರುತೆರೆ ಹಿರಿತೆರೆ ಯಾವುದೇ ತೆರೆಯಾದ್ರೂ ಅನುಶ್ರೀ ನಿರೂಪಣೆನೇ ಬೇಕು ಅಂತ ಕ್ಯೂನಲ್ಲಿ ನಿಂತು ಅವರ ಡೇಟ್​ ತಗೊಳ್ತಾರೆ ಅಂದ್ರೆ ಅವ್ರ ಜನಪ್ರಿಯತೆ ಬಗ್ಗೆ ಎಕ್ಸ್​ಟ್ರಾ ಮಾತಿಲ್ಲ.

Advertisment

publive-image

ಜೀವನದಲ್ಲಿ ಸಾಕಷ್ಟು ಏಳು ಬೀಳು ಕಂಡಿರೋ ಅನುಶ್ರೀ ಅವರು ಬದುಕು ಕಟ್ಟಿಕೊಂಡ ರೀತಿ ಸಾವಿರಾರು ಹೆಣ್ಮಕ್ಕಳಿಗೆ ಸ್ಪೂರ್ತಿ. ರಿಯಾಲಿಟಿ ಶೋಗಳ ನಿರೂಪಣೆಯಲ್ಲಿ ಅನುಶ್ರೀ ಅವರನ್ನ ಬೀಟ್​ ಮಾಡೋಕೆ ಸಾಧ್ಯನೇ ಇಲ್ಲ ಅನ್ನೋವಷ್ಟರ ಮಟ್ಟಿಗೆ ಅನುಶ್ರೀ ಅವರು ವೀಕ್ಷಕರನ್ನ ಆವರಿಸಿಕೊಂಡಿದ್ದಾರೆ. ಅನುಶ್ರೀ ಯಾವುದೇ ಕಾರ್ಯಕ್ರಮಕ್ಕೆ ಹೋದ್ರು ಮೊದಲು ಎದುರಾಗೋ ಪ್ರಶ್ನೆ ಮದುವೆ ಯಾವಾಗ ಮೇಡಂ ಅನ್ನೋದು. ಸೋಷಿಯಲ್​ ಮೀಡಿಯಾದಲ್ಲಂತೂ ಅನುಶ್ರೀ ಅವರ ಮದುವೆ ಪೋಸ್ಟ್​​ಗಳಿಗೆ ಲೆಕ್ಕಾನೇ ಇಲ್ಲ.

ಇದನ್ನೂ ಓದಿ: ಆ್ಯಂಕರ್ ಅನುಶ್ರೀಗೆ ಹೊಸ ಪ್ರೀತಿ, ಹೊಸ ಮದುವೆ.. ಬಿಗ್‌ ಸರ್‌ಪ್ರೈಸ್ ಕೊಟ್ಟ ಸ್ಟಾರ್ ನಿರೂಪಕಿ; ಏನಿದು? VIDEO 

publive-image

ಈ ಹಿಂದೆ ಮಹಾನಟಿ ವೇದಿಕೆಯಲ್ಲಿ ನಾನು ಈ ವರ್ಷ ಪಕ್ಕಾ ಮದುವೆ ಆಗ್ತೀನಿ ಅಂದಿದ್ರು ಅನುಶ್ರೀ. ಈ ಬೆನ್ನಲ್ಲೆ ಮೊನ್ನೆ ಅವ್ರು ನಿರೂಪಣೆ ಮಾಡುವ ಅವ್ರದ್ದೇ ಯೂಟ್ಯೂಬ್​ ಚಾನೆಲ್​ನಲ್ಲಿ ಅನುಶ್ರೀ ಅವ್ರು ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯರಾದ ನಟಿ ನಯನಾ, ಸೂರಜ್, ಜಗ್ಗ ಹಾಗೂ ಗಿಲ್ಲಿ ಜೊತೆ ಚಾಟ್ ಶೋ ನಡೆಸಿಕೊಟ್ಟಿದ್ದರು. ಈ ವೇಳೆ ಮದುವೆ ಟಾಪಿಕ್​ ಬಂದಿತ್ತು. ಸೂರಜ್​ ಅನುಶ್ರೀ ಅವ್ರು ಫೆಬ್ರವರಿಯಲ್ಲಿ ಮದುವೆ ಆಗ್ತಾರೆ ಅಂತ ಕಾಲ್​ ಎಳಿತಾರೆ. ಆಗ ಅನುಶ್ರೀ ಅವರು ಇಲ್ಲ ಕಣ್ರೋ ನಾನು ಅಪ್ಪು ಫ್ಯಾನ್ ಆಗಿರೋದ್ರಿಂದ ಮಾರ್ಚ್‌ ನಲ್ಲಿ ಮದುವೆ ಆಗಬಹುದು ಅಂತಾರೆ. ಹೀಗಾಗಿ ಎಲ್ಲಾ ಕಡೆ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ಅನುಶ್ರೀ ಮದುವೆ ವಿಚಾರ.

Advertisment

ಮಾರ್ಚ್​ ಯಾಕೆ ಅಂದ್ರೆ ಮಾರ್ಚ್ 17ರಂದು ಪುನೀತ್​ ರಾಜ್​ಕುಮಾರ್ ಅವರ ಬರ್ತ್​ ಡೇ ಆಗಿದ್ದು, ಆ ದಿನವೇ ಅನುಶ್ರೀ ಹಸೆಮಣೆ ಏರ್ತಾರೆ ಅನ್ನೋ ಸುದ್ದಿ ಓಡಾಡ್ತಿದೆ.

ಈ ಬಗ್ಗೆ ಕನ್ಫರ್ಮ್​ ಮಾಡಿಕೊಳ್ಳಲು ಅನುಶ್ರೀ ಆಪ್ತರನ್ನ ನ್ಯೂಸ್​ ಫಸ್ಟ್ ಸಂಪರ್ಕಿಸಿತ್ತು. ಆಗ ಅವ್ರು ಹೇಳಿದ್ದು ಹೀಗೆ. ಮದುವೆ ಸುದ್ದಿ ಸುಳ್ಳು. ಅವ್ರೆಲ್ಲಾ ಅನುಶ್ರೀ ಅವರ ಕಾಲು ಎಳಿತಿದ್ರು. ಹೀಗಾಗಿ ಮಾರ್ಚ್‌ನಲ್ಲಿ ಮದುವೆ ಆಗ್ತೀನಿ ಅಂತ ಹೇಳಿದ್ದಾರೆ ಅಷ್ಟೇ. ಹಾಗೇನಾದ್ರು ಇದ್ರೆ ಅವ್ರೇ ಅಧಿಕೃತವಾಗಿ ಅನೌನ್ಸ್ ಮಾಡ್ತಾರೆ ಎಂದು ಮದುವೆ ವಿಚಾರವನ್ನು ತಳ್ಳಿ ಹಾಕಿದ್ದಾರೆ. ಅದು​ ಏನೇ ಆಗಲಿ ಬೇಗ ಮದುವೆ ಆಗಿ ಅನುಶ್ರೀ ಮೇಡಂ ಎಂದು ಅಭಿಮಾನಿಗಳು, ವೀಕ್ಷಕರು ಕಮೆಂಟ್​ಗಳ ಮೂಲಕ ಶುಭ ಹಾರೈಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment