31 ತಿಂಗಳ ಹಿಂದೆ ಶಪಥ.. ಜಗನ್‌ಗೆ ಸೆಡ್ಡು ಹೊಡೆದ ಚಂದ್ರಬಾಬು ನಾಯ್ಡು ಆಂಧ್ರ ಅಸೆಂಬ್ಲಿಗೆ ಎಂಟ್ರಿ; ಹೇಳಿದ್ದೇನು?

author-image
admin
Updated On
31 ತಿಂಗಳ ಹಿಂದೆ ಶಪಥ.. ಜಗನ್‌ಗೆ ಸೆಡ್ಡು ಹೊಡೆದ ಚಂದ್ರಬಾಬು ನಾಯ್ಡು ಆಂಧ್ರ ಅಸೆಂಬ್ಲಿಗೆ ಎಂಟ್ರಿ; ಹೇಳಿದ್ದೇನು?
Advertisment
  • ನಾಲ್ಕನೇ ಬಾರಿ ಆಂಧ್ರಪ್ರದೇಶ ಸಿಎಂ ಆದ ಚಂದ್ರಬಾಬು ನಾಯ್ಡು
  • ಆಂಧ್ರ ಚುನಾವಣೆಯಲ್ಲಿ 135 ಕ್ಷೇತ್ರಗಳಲ್ಲಿ ಟಿಡಿಪಿ ಅಭ್ಯರ್ಥಿಗಳ ಗೆಲುವು
  • ಅಸೆಂಬ್ಲಿಯಲ್ಲೇ ವೈ.ಎಸ್ ಜಗನ್ ಪಕ್ಷದ ವಿರುದ್ಧ ಸವಾಲು ಹಾಕಿದ್ದ ನಾಯ್ಡು

ಆಂಧ್ರಪ್ರದೇಶ ವಿಧಾನಸಭಾ ಅಧಿವೇಶನದಲ್ಲಿ ಇಂದು ನೂತನ ಶಾಸಕರು, ಸಚಿವರ ಪದಗ್ರಹಣ ಕಾರ್ಯಕ್ರಮ ಸಂಭ್ರಮದಿಂದ ನಡೆದಿದೆ. ಎಲೆಕ್ಷನ್ ಮುಗಿದ ಬಳಿಕ ಸಿಎಂ ಚಂದ್ರಬಾಬು ನಾಯ್ಡು ಅವರು ಮೊದಲ ಅಧಿವೇಶನ ಕರೆದಿದ್ದು, ಮೊದಲ ದಿನವೇ ನೂತನ ಶಾಸಕರು ವಿಧಾನಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.


">June 21, 2024

ಮೊದಲಿಗೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ಶಾಸಕರಾಗಿ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದರು. ಪವನ್ ಕಲ್ಯಾಣ್ ಅವರು ಡಿಸಿಎಂ ಆಗಿ ಪದಗ್ರಹಣ ಮಾಡಿದರು. ಸಿಎಂ, ಡಿಸಿಎಂ ಪ್ರಮಾಣ ವಚನ ಸ್ವೀಕಾರದ ಬಳಿಕ ವಿಧಾನಸಭೆಯಲ್ಲಿ ಟಿಡಿಪಿ, ಜನಸೇನಾ ಶಾಸಕರ ಸಂಭ್ರಮ ಮುಗಿಲು ಮುಟ್ಟಿತ್ತು.

publive-image

ಶಪಥ ಪೂರೈಸಿದ ಚಂದ್ರಬಾಬು ನಾಯ್ಡು!
ಚಂದ್ರಬಾಬು ನಾಯ್ಡು ಅವರು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನೊಂದಿಗೆ ಆಂಧ್ರಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಈ ಹಿಂದೆ ಆಡಳಿತದಲ್ಲಿದ್ದ ವೈಎಸ್‌ಜಗನ್ ಅವರ ವಿರುದ್ಧ ಚಂದ್ರಬಾಬು ನಾಯ್ಡು ಅವರು ಇದೇ ಅಸೆಂಬ್ಲಿಯಲ್ಲಿ ಶಪಥ ಮಾಡಿದ್ದರು. ಇದೀಗ ಅದೇ ಶಪಥ ಪೂರೈಸಿ ಸಿಎಂ ಆಗಿಯೇ ಚಂದ್ರಬಾಬು ನಾಯ್ಡು ಅವರು ವಿಧಾನಸಭೆಗೆ ಎಂಟ್ರಿ ಕೊಟ್ಟಿದ್ದಾರೆ.

publive-image

31 ತಿಂಗಳ ಹಿಂದೆ ನಡೆದಿದ್ದೇನು?
2021ರ ನವೆಂಬರ್‌ನಲ್ಲಿ ಆಂಧ್ರ ವಿಧಾನಸಭೆಯಲ್ಲಿ ಸಿಎಂ ಚಂದ್ರಬಾಬು ನಾಯ್ಡು ಅವರು ಅಕ್ಷರಶಃ ಗುಡುಗಿದ್ದರು. ನನ್ನ ಪತ್ನಿಗೆ ಅಪಮಾನವಾಗುವಂತೆ ವೈಎಸ್‌ಆರ್ ಕಾಂಗ್ರೆಸ್ ನಾಯಕರ ಮಾತನಾಡಿದ್ದಾರೆ. ಇದರಿಂದ ನೊಂದು, ಭಾವುಕರಾಗಿ ಮಾತನಾಡಿದ್ದ ಚಂದ್ರಬಾಬು ನಾಯ್ಡು ಅವರು ಸಿಎಂ ಹುದ್ದೆಗೇರಿದ ಬಳಿಕವಷ್ಟೇ ಮತ್ತೆ ಈ ಅಸೆಂಬ್ಲಿ ಪ್ರವೇಶಿಸುತ್ತೇನೆ ಎಂದು ಶಪಥಗೈದಿದ್ದರು.


">June 21, 2024

ಸರಿಯಾಗಿ 31 ತಿಂಗಳ ಬಳಿಕ ಚಂದ್ರಬಾಬು ನಾಯ್ಡು ಅವರು ಮತ್ತೆ ಸಿಎಂ ಆಗಿ ಇಂದು ಆಂಧ್ರಪ್ರದೇಶದ ಅಸೆಂಬ್ಲಿ ಪ್ರವೇಶಿಸಿದ್ದಾರೆ. ನಾಲ್ಕನೇ ಬಾರಿಗೆ ಆಂಧ್ರಪ್ರದೇಶದ ಸಿಎಂ ಆಗಿ ಚಂದ್ರಬಾಬು ನಾಯ್ಡು ಅವರು ಇಂದು ವಿಧಾನಸಭೆಯನ್ನು ಪ್ರವೇಶಿಸಿದ್ದು, ಎಲ್ಲಾ ಶಾಸಕರು ಎದ್ದು ನಿಂತು ಚಪ್ಪಾಳೆ ತಟ್ಟಿ ಸ್ವಾಗತ ಕೋರಿದ್ದಾರೆ.

ಇದನ್ನೂ ಓದಿ: YSJagan: ಆಂಧ್ರಪ್ರದೇಶ ಅಸೆಂಬ್ಲಿಯಲ್ಲಿ ವೈಎಸ್ ಜಗನ್ ಪ್ರಮಾಣ ವಚನ ಸ್ವೀಕಾರ; ವಿಡಿಯೋ ವೈರಲ್‌! 

ವೈಎಸ್ ಜಗನ್‌ಗೆ ಹೀನಾಯ ಸೋಲು!
ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ 135 ಕ್ಷೇತ್ರಗಳಲ್ಲಿ ಟಿಡಿಪಿ, ಜನಸೇನಾ ಪಕ್ಷ 21, ಬಿಜೆಪಿ 8 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ. 175 ಸದಸ್ಯ ಬಲದ ಅಸೆಂಬ್ಲಿಯಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಕೇವಲ 8 ಸ್ಥಾನಗಳಿಗೆ ಕುಸಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment