/newsfirstlive-kannada/media/post_attachments/wp-content/uploads/2024/10/Pawan-Kalyan-Udayanindhi-Stallin.jpg)
ತಿರುಪತಿ ಲಡ್ಡು ಪ್ರಸಾದದ ಅತಿ ದೊಡ್ಡ ವಿವಾದ ದಿನ ಕಳೆದಂತೆ ಮತ್ತೊಂದು ರಾಜಕೀಯ ಯುದ್ಧಕ್ಕೆ ಕಾರಣವಾಗಿದೆ. ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರು ತಿರುಪತಿ ಸನ್ನಿಧಿಯಲ್ಲೇ ಕುಳಿತು ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ವಿರುದ್ಧ ಕಿಡಿಕಾರಿದ್ದಾರೆ.
ಉದಯನಿಧಿ ಸ್ಟಾಲಿನ್‌ಗೆ ಸನಾತನ ಧರ್ಮವನ್ನು ವೈರಸ್, ಸನಾತನ ಧರ್ಮ ನಾಶ ಆಗುತ್ತೆ ಎಂದು ಹೇಳಬೇಡಿ. ಸನಾತನ ಧರ್ಮವನ್ನು ನಾಶ ಮಾಡಲು ಆಗಲ್ಲ ಎಂದು ಪವನ್ ಕಲ್ಯಾಣ್ ಅವರು ಖಡಕ್ ಆಗಿ ಹೇಳಿದ್ದಾರೆ.
ಈ ಮಾತನ್ನು ತಿರುಮಲದ ಬಾಲಾಜಿಯ ಸನ್ನಿಧಿಯಿಂದ ಹೇಳುತ್ತಿದ್ದೇನೆ ಎಂದಿರುವ ಪವನ್ ಕಲ್ಯಾಣ್ ಅವರು ಒಂದು ವೇಳೆ ಯಾರಾದರೂ ಸನಾತನ ಧರ್ಮವನ್ನು ಯಾರಾದರೂ ನಾಶ ಮಾಡಲು ಯತ್ನಿಸಿದರೆ ಅವರೇ ನಾಶವಾಗುತ್ತಾರೆ. ಸನಾತನ ಧರ್ಮ ರಕ್ಷಣೆಗೆ ರಾಷ್ಟ್ರ ಮಟ್ಟದಲ್ಲಿ ಕಾನೂನು ಜಾರಿಗೆ ತರಬೇಕು. ಸನಾತನ ಧರ್ಮ ರಕ್ಷಣೆಯ ಬೋರ್ಡ್‌ಗಳನ್ನು ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಸೂಕ್ತ ನಿಧಿಯೊಂದಿಗೆ ಅಸ್ತಿತ್ವಕ್ಕೆ ತರಬೇಕು. ಜೀವ ಪಣಕ್ಕಿಟ್ಟಿದ್ದರೂ ಸರಿ ಸನಾತನ ಧರ್ಮವನ್ನ ರಕ್ಷಿಸುತ್ತೇನೆ ಎಂದು ಪಣ ತೊಟ್ಟಿದ್ದಾರೆ.
ಇದನ್ನೂ ಓದಿ: ತಿರುಪತಿ ಲಡ್ಡು ಬಗ್ಗೆ ಪ್ರಕಾಶ್ ರಾಜ್ ಏನಂದ್ರು, ಪವನ್ ಕಲ್ಯಾಣ್ ಗರಂ ಆಗಿದ್ದೇಕೆ.. ಪುರಿ ಜಗನ್ನಾಥ ಪ್ರಸಾದದಲ್ಲೂ..?
ಡಿಎಂಕೆ ಪಕ್ಷದಿಂದ ಆಕ್ರೋಶ!
ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಹೇಳಿಕೆಗೆ ಡಿಎಂಕೆ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪವನ್ ಕಲ್ಯಾಣ್ ಅವರು ರಾಜಕೀಯ ಲಾಭಕ್ಕಾಗಿ ಧರ್ಮ ಮತ್ತು ಹಿಂದೂ ದೇವರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಡಿಎಂಕೆ ವಕ್ತಾರ ಸೈಯದ್ ಹಫೀಜುಲ್ಲಾ ಹೇಳಿದ್ದಾರೆ.
ಡಿಎಂಕೆ ಪಕ್ಷ ಧರ್ಮದ ಬಗ್ಗೆ ಮಾತನಾಡಲ್ಲ. ಬಿಜೆಪಿ, ಟಿಡಿಪಿ, ಪವನ್ ಕಲ್ಯಾಣ್, ಧರ್ಮ, ಹಿಂದೂ ದೇವರುಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಾರೆ. ಇವರೇ ನಿಜವಾದ ಶತ್ರುಗಳು. ಆಂಧ್ರ ಸರ್ಕಾರದ ನೀತಿಗಳಿಂದ ಜನ ತೊಂದರೆಗೊಳಗಾಗಿದ್ದಾರೆ. ಇದರಿಂದ ಜನರ ಗಮನ ಬೇರೆಡೆ ಸೆಳೆಯಲು ಈ ತಂತ್ರವನ್ನು ಅನುಸರಿಸಿದ್ದಾರೆ ಎಂದು ಡಿಎಂಕೆ ಪಕ್ಷ ಪವನ್ ಕಲ್ಯಾಣ್‌ಗೆ ತಿರುಗೇಟು ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ