ಸೆ.30ರ ನಂತರ ಪವನ್ ಕಲ್ಯಾಣ್ಗೆ ಪ್ರಕಾಶ್ ರಾಜ್ ಹೇಳುವುದೇನು?
ಲಡ್ಡುವನ್ನು ಸೂಕ್ಷ್ಮ ವಿಚಾರ ಎಂದು ಕರೆಯುವುದು ಸರಿಯಲ್ಲ- ಡಿಸಿಎಂ
ತಿರುಮಲ ಲಡ್ಡು ವಿವಾದ- ಪವನ್ ಕಲ್ಯಾಣ್-ಪ್ರಕಾಶ್ ರಾಜ್ ಫೈಟ್
ತಿರುಪತಿ ಲಡ್ಡು ವಿವಾದ ಬೆನ್ನಲ್ಲೇ ಸನಾತನ ಧರ್ಮ ರಕ್ಷಣೆಗೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಕರೆ ಕೊಟ್ಟಿದ್ದಾರೆ. ಈ ಬೆನ್ನಲ್ಲೇ ಪವನ್ ಕಲ್ಯಾಣ್ ವಿರುದ್ಧ ಪ್ರಕಾಶ್ ರಾಜ್ ನಡುವೆ ಟ್ವೀಟಾಸ್ತ್ರ ಬಿಟ್ಟಿದ್ದಾರೆ. ತಮಿಳು ನಟ ಕಾರ್ತಿಗೂ ಕ್ಲಾಸ್ ಪವನ್ ಕಲ್ಯಾಣ್ ತಗೊಂಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ತಿರುಪತಿಯಂತೆ ಪುರಿ ಜಗನ್ನಾಥ ದೇಗುಲದಲ್ಲಿ ಪ್ರಸಾದಕ್ಕೆ ಬಳಸುವ ತುಪ್ಪದ ಪರೀಕ್ಷೆಗೆ ಆಡಳಿತ ಮಂಡಳಿ ಮುಂದಾಗಿದೆ.
ಇದನ್ನೂ ಓದಿ: ಇಂದು ಸಿದ್ದರಾಮಯ್ಯ ವಿರುದ್ಧ FIR ದಾಖಲಾಗುತ್ತಾ.. ಸಿಎಂ ಕೇರಳಕ್ಕೆ ಹೋಗುತ್ತಿರುವುದು ಏಕೆ?
ತಿರುಪತಿ ಲಡ್ಡು ವಿಷಯದಲ್ಲಿ ರಾಜಕೀಯ ಟಾಕ್ ವಾರ್ ಜೋರು
ತಿರುಪತಿ ಲಡ್ಡು ವಿವಾದ ದೇಶಾದ್ಯಂತ ಭಾರೀ ವಿವಾದವನ್ನೇ ಸೃಷ್ಟಿಸಿದೆ. ಇದರ ಜೊತೆಗೆ ಲಡ್ಡು ವಿವಾದ ರಾಜಕೀಯ ಟಾಕ್ ವಾರ್ ತಿರುವು ಪಡೆದಿದೆ. ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ಮತ್ತು ನಟ ಪ್ರಕಾಶ್ ರಾಜ್ ನಡುವೆ ಸಂತಾನ ಸಂಘರ್ಷ ಮತ್ತಷ್ಟು ಜೋರಾಗಿದೆ.
ತಿರುಪತಿ ಲಡ್ಡು ವಿವಾದದ ಬೆನ್ನಲ್ಲೇ ಡಿಸಿಎಂ ಪವನ್ ಕಲ್ಯಾಣ್, ದೇವಾಯಲಗಳ ರಕ್ಷಣೆಗೆ ರಾಷ್ಟ್ರಮಟ್ಟದಲ್ಲಿ ಸನಾತನ ಧರ್ಮ ರಕ್ಷಣಾ ಮಂಡಳಿ ಸ್ಥಾಪನೆ ಅಗತ್ಯ. ಆ ಕಾಲ ಸನ್ನಿಹಿತವಾಗಿದೆ ಎಂದಿದ್ದರು. ಇದಕ್ಕೆ ತಿರುಗೇಟು ನೀಡಿದ ನಟ ಪ್ರಕಾಶ್ ರಾಜ್. ನಿಮ್ಮ ಲೋಕಲ್ ವಿಚಾರವನ್ನು ರಾಷ್ಟ್ರಮಟ್ಟದಲ್ಲಿ ದೊಡ್ಡದ್ಯಾಕೆ ಮಾಡ್ತೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು. ಪ್ರಕಾಶ್ ರಾಜ್ರ ಈ ಟ್ವೀಟ್ಗೆ ಪವನ್ ಕಲ್ಯಾಣ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಪವನ್ ಕಲ್ಯಾಣ್, ಆಂಧ್ರ ಡಿಸಿಎಂ
ನನ್ನನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದರು, ನನ್ನ ವ್ಯಂಗ್ಯವಾಡಿದರೂ, ನನ್ನ ರೋಡಿಗೆಳೆದರು ಮೌನವಾಗಿದ್ದೆ. ಆದ್ರೆ, ವೈಸಿಪಿ ಪರ ನಿಂದಿಸೋ ನಾಯಕರಿಗೆ ಪ್ರತ್ಯೇಕವಾಗಿ ಹೇಳ್ತಿದ್ದೀನಿ. ಸನಾತನ ಧರ್ಮದ ವಿಚಾರಕ್ಕೆ ಬರಬೇಡಿ, ತಪ್ಪಾಗಿದ್ರೆ, ತಪ್ಪಾಗಿದೆ ಅಂತ ಒಪ್ಪಿಕೊಳ್ಳಿ. ಇಲ್ಲ ನಮಗೆ ಸಂಬಂಧ ಇಲ್ಲ ಅಂತಾ ಹೇಳಿ. ಅಷ್ಟೇ ಮಾತ್ರ ಅಡ್ಡಾದಿಡ್ಡಿಯಾಗಿ ಮಾತಾಡಿದ್ರೆ, ಯಾರು ಕ್ಷಮಿಸಲ್ಲ. ನೀವು ಹಿಂದೂಗಳೇ.
ತಿರುಪತಿ ಲಡ್ಡು ವಿವಾದ ಈಗ ಪವನ್ ಕಲ್ಯಾಣ್ ಹಾಗೂ ಪ್ರಕಾಶ್ ರಾಜ್ ನಡುವಿನ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ. ಸದ್ಯ ಇಬ್ಬರ ನಡುವೆ ಮಾತಿನ ಚಕಮಕಿ ಅಂತೂ ಆರಂಭ ಆಗಿದೆ. ಪವನ್ ಕಲ್ಯಾಣ್ ಏಟಿಗೆ ಪ್ರಕಾಶ್ ರಾಜ್ ತಿರುಗೇಟು ಕೊಟ್ಟಿದ್ದು, ಸೆ.30ರ ನಂತರ ನಿಮ್ಮ ಪ್ರತಿ ಮಾತಿಗೂ ಉತ್ತರಿಸುತ್ತೇನೆ ಎಂದಿದ್ದಾರೆ.
ಪವನ್ ಪವನ್ ಕಲ್ಯಾಣ್ ಬಳಿ ಕ್ಷಮೆಯಾಚಿಸಿದ ತಮಿಳು ನಟ ಕಾರ್ತಿ
ಇನ್ನು ಲಡ್ಡು ವಿವಾದದ ಬಿಸಿ ತಮಿಳು ನಟ ಕಾರ್ತಿಗೂ ತಟ್ಟಿದೆ. ತಮ್ಮ ಚಿತ್ರದ ಪ್ರಚಾರದ ವೇಳೆ ನಿರೂಪಕಿ ಕೇಳಿದ ಪ್ರಶ್ನೆಗೆ ಕಾರ್ತಿ, ಇದೊಂದು ಸೂಕ್ಷ್ಮ ವಿಷಯ. ಈಗ ಮಾತು ಬೇಡ ಎಂದಿದ್ದರು. ಇದಕ್ಕೆ ಗರಂ ಆದ ಪವನ್ ಕಲ್ಯಾಣ್, ಲಡ್ಡುವನ್ನು ಸೂಕ್ಷ್ಮ ವಿಚಾರ ಎಂದು ಕರೆಯುವುದು ಸರಿಯಲ್ಲ ಎಂದು ಎಚ್ಚರಿಕೆ ಕೊಟ್ಟಿದ್ರು. ಇದರ ಬೆನ್ನಲ್ಲೇ ನಟ ಕಾರ್ತಿ ನನ್ನ ಕಾಮೆಂಟ್ಗಳಿಂದ ಉಂಟಾದ ಉದ್ದೇಶಪೂರ್ವಕ ತಪ್ಪು ತಿಳುವಳಿಕೆಗಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಪದವೀಧರರಿಗೆ ಸರ್ಕಾರಿ ಕೆಲಸ.. ಸ್ಯಾಲರಿ ₹95,000; ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಯಾವುದು?
ತಿರುಪತಿ ಬೆನ್ನಲ್ಲೇ ಜಗನ್ನಾಥ ದೇಗುಲದಲ್ಲೂ ತುಪ್ಪದ ಪರೀಕ್ಷೆ
ತಿರುಪತಿಯ ಲಡ್ಡು ಲಡಾಯಿ ಬೆನ್ನಲ್ಲೇ ಇತರೆ ರಾಜ್ಯಗಳು ಎಚ್ಚೆತ್ತುಕೊಂಡಿವೆ. ಒಡಿಶಾದ ಪುರಿಯ ಜಗನ್ನಾಥ ದೇವಸ್ಥಾನದಲ್ಲಿ ನೈವೇದ್ಯ ತಯಾರಿಸಲು ಬಳಸುವ ತುಪ್ಪದ ಗುಣಮಟ್ಟವನ್ನ ಪರೀಕ್ಷಿಸಲು ಒಡಿಶಾ ಸರ್ಕಾರ ನಿರ್ಧರಿಸಿದೆ. ತಿರುಪತಿ ಲಡ್ಡು ವಿವಾದದಿಂದ ಆರಂಭದಲ್ಲಿ ಗೊಂದಲದಲ್ಲಿದ್ದ ಭಕ್ತರು, ತಿಮ್ಮಪ್ಪನ ದರ್ಶನಕ್ಕೆ ಮುಂದಾಗ್ತಿದ್ದಾರೆ. ಕಳೆದ 4 ದಿನಗಳಲ್ಲಿ 14 ಲಕ್ಷ ಲಡ್ಡುಗಳನ್ನು ಭಕ್ತರು ಸ್ವೀಕರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ