newsfirstkannada.com

×

ಇಂದು ಸಿದ್ದರಾಮಯ್ಯ ವಿರುದ್ಧ FIR ದಾಖಲಾಗುತ್ತಾ.. ಸಿಎಂ ಕೇರಳಕ್ಕೆ ಹೋಗುತ್ತಿರುವುದು ಏಕೆ?

Share :

Published September 25, 2024 at 6:59am

Update September 25, 2024 at 7:00am

    ಜನಪ್ರತಿನಿಧಿಗಳ ಕೋರ್ಟ್​ಗೆ ಖಾಸಗಿ ದೂರು ಸಲ್ಲಿಸಿದ್ದ ಅರ್ಜಿದಾರರು

    ತನಿಖೆಗೆ ಹೈಕೋರ್ಟ್‌ ಸಮ್ಮತಿ.. ಕೆಳ ನ್ಯಾಯಾಲಯದ ಹಾದಿ ಸುಗಮ

    ಇಷ್ಟು ದಿನ ಹೈಕೋರ್ಟ್​ ಕೆಳ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿತ್ತು

ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್​ ಶಾಕ್​ ಏನೋ ಕೊಟ್ಟಿದೆ. ಆದ್ರೆ ಈ ಮುಡಾ ಪ್ರಕರಣ ಹಾಗೂ ಪ್ರಾಸಿಕ್ಯೂಶನ್​ನಲ್ಲಿ ಹಲವು ಗೊಂದಲಗಳಿವೆ. ಈ ಎಲ್ಲಾ ಕನ್​ಪ್ಯೂಷನ್​ಗೇ ಇವತ್ತು ಸ್ಪಷ್ಟ ಉತ್ತರ ಸಿಗಲಿದೆ. ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಇಂದು ಮುಡಾ ಕೇಸ್‌ ಸಂಬಂಧ ಆದೇಶ ಬರುವ ಸಾಧ್ಯತೆ ಇದೆ.

ರಾಜ್ಯಪಾಲರ ವಿರುದ್ಧ ಕಾನೂನು ಸಮರ ಸಾರಿದ್ದ ಮೈಸೂರು ಹಮ್ಮಿರನಿಗೆ ಹೈಕೋರ್ಟ್​ ಬಿಗ್​ ಶಾಕ್​ ನೀಡಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಳಿ ಬಂದಿರುವ ಮುಡಾ ಹಗರಣದಲ್ಲಿ ಸಾಕಷ್ಟು ಪ್ರಶ್ನೆಗಳು ರಾಜ್ಯದ ಜನರನ್ನ ಕಾಡ್ತಿವೆ. ಒಂದೆಡೆ ನಾನು ರಾಜೀನಾಮೆ ಕೊಡೋ ಪ್ರಶ್ನೆಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಡ್ಡಿ ಮುರಿದಂತೆ ಹೇಳಿದ್ದಾರೆ. ಆದ್ರೆ, ಹೈಕೋರ್ಟ್​ ತನಿಖೆಗೆ ಅನುಮತಿ ಕೊಟ್ಟಿದ್ದೇನೋ ನಿಜ. ಆದ್ರೆ ಸಿಎಂ ಮೇಲೆ ಯಾವ ಕೇಸ್​ ಪ್ರಕಾರ ಎಫ್​ಐಆರ್ ಹಾಕುತ್ತಾರೆ ಅನ್ನೋದೇ ಸದ್ಯ ಕುತೂಹಲ ಮೂಡಿಸಿದ್ದು, ಇವತ್ತು ಅದಕ್ಕೆ ಉತ್ತರ ಸಿಗಲಿದೆ.

ಇದನ್ನೂ ಓದಿ: ಮುಡಾ ಕೇಸ್ ಸಂಕಷ್ಟ.. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಾ? ಬಿ.ವೈ ವಿಜಯೇಂದ್ರ ಹೇಳಿದ್ದೇನು?

ಇಂದು 82ನೇ CCH ಕೋರ್ಟ್​ನಲ್ಲಿ ಮುಡಾ ಕೇಸ್ ವಿಚಾರಣ

ಮುಡಾ ಚಕ್ರವ್ಯೂಹದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯಗೆ ಮತ್ತಷ್ಟು ಟೆನ್ಷನ್​ ಹೆಚ್ಚಾಗಿದೆ. ಸಿಎಂ ಸಿದ್ದರಾಮಯ್ಯಗೆ ಪಾಲಿಗೆ ಹೈಕೋರ್ಟ್​ ಅಮಂಗಳಕರ ಸುದ್ದಿ ಮೂಲಕ ಶಾಕ್ ಕೊಟ್ಟಿದೆ. ಇವತ್ತು ಕೂಡ ಸಿದ್ದರಾಮಯ್ಯಗೆ ತುಂಬಾ ಮಹತ್ವದ ದಿನವಾಗಿದೆ. 82ನೇ CCH ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಇಂದು ಮುಡಾ ಕೇಸ್‌ನಲ್ಲಿ ಆದೇಶ ಬರುವ ಸಾಧ್ಯತೆ ಇದೆ.

ಇಂದು ಸಿಎಂ ವಿರುದ್ಧ FIR ಆಗುತ್ತಾ​?

  • ಇಂದು 82ನೇ CCH ಕೋರ್ಟ್​ನಲ್ಲಿ ಮುಡಾ ಕೇಸ್ ಅರ್ಜಿ ವಿಚಾರಣೆ
  • ಆರಂಭದಲ್ಲೇ ಆದೇಶ ನೀಡಲು ಅರ್ಜಿದಾರರು ಕೋರಲಿದ್ದಾರೆ
  • FIRಗೆ ಆದೇಶಿಸಬಹುದು, ಕೋರ್ಟ್ ಕಾಂಗ್ನೀಸ್ ಪಡೆದು ವಿಚಾರಣೆ
  • ಜನಪ್ರತಿನಿಧಿಗಳ ಕೋರ್ಟ್​ಗೆ ಖಾಸಗಿ ದೂರು ಸಲ್ಲಿಸಿದ್ದ ಅರ್ಜಿದಾರರು
  • ತನಿಖೆಗೆ ಆದೇಶ ಕೋರಿ ರಾಜ್ಯಪಾಲರ ಅನುಮತಿ ಕೇಳಲಾಗಿತ್ತು
  • ಇಷ್ಟು ದಿನ ಹೈಕೋರ್ಟ್​ ಕೆಳ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿತ್ತು
  • ತನಿಖೆಗೆ ಹೈಕೋರ್ಟ್‌ ಸಮ್ಮತಿ.. ಕೆಳ ನ್ಯಾಯಾಲಯದ ಹಾದಿ ಸುಗಮ
  • ಇಂದು ಸಿಎಂ ವಿರುದ್ಧ ಎಫ್‌ಐಆರ್‌ ದಾಖಲಿಸಲು ಸೂಚಿಸುವ ಸಾಧ್ಯತೆ

ಇದನ್ನೂ ಓದಿ: SSLC, PUC ಬೋರ್ಡ್ ಎಕ್ಸಾಂ ಯಾವಾಗ.. ಈ ತಿಂಗಳಲ್ಲೇ CBSE ಪರೀಕ್ಷೆ ನಡೆಸುತ್ತಾ?

ಮುಡಾ ಟೆನ್ಷನ್​ ನಡುವೆ ಇವತ್ತು ಸಿಎಂ ಕೇರಳ ಟ್ರಿಪ್​

ಇನ್ನು ಹೈಕೋರ್ಟ್​ ಆದೇಶದಿಂದ ಸಿದ್ದರಾಮಯ್ಯ ಮುಖದಲ್ಲಿ ವಿಚಲಿತರಾದಂತೆ ಕಾಣಿಸ್ತಿಲ್ಲ. ತಮ್ಮ ಹಳೆ ಡೈಲಾಗ್​ ಅನ್ನೇ ಪುನರುಚ್ಚರಿಸಿರುವ ಸಿದ್ದರಾಮಯ್ಯ, ನಾನ್ಯಾಕೆ ರಾಜೀನಾಮೆ ಕೊಡಲಿ ಎಂದಿದ್ದಾರೆ. ಈ ಮುಡಾ ಸಂಕಷ್ಟದ ನಡುವೆ ಇವತ್ತು ಸಿಎಂ ಪೂರ್ವ ನಿಗದಿಯಂತೆ ಸಿಎಂ ಕೇರಳ ಪ್ರವಾಸ ಕೈಗೊಳ್ತಿದ್ದಾರೆ. ಇವತ್ತು ಕೇರಳದ ಮಳಪುರಂನಲ್ಲಿ ನಡೆಯಲಿರುವ ಆರ್ಯಾಧನ್ ಅವಾರ್ಡ್ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ಇದೇ ವೇಳೆ ಸಿಎಂ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲರನ್ನು ಭೇಟಿಯಾಗಿಲಿದ್ದಾರೆ ಎನ್ನಲಾಗಿದೆ. ಭೇಟಿ ಸಂದರ್ಭದಲ್ಲಿ ತಮ್ಮ ಮುಂದಿನ ನಡೆ, ನಿರ್ಧಾರದ ಬಗ್ಗೆ ವೇಣುಗೋಪಾಲ್​ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಹೈಕೋರ್ಟ್​ ಶಾಕ್​ ಬೆನ್ನಲ್ಲೇ ಇದೀಗ ಕೆಳ ನ್ಯಾಯಾಲಯ ನೀಡುವ ತೀರ್ಪಿನ ಮೇಲೆ ಎಲ್ಲಾ ನಿಂತಿದೆ. ಒಂದ್ವೇಳೆ ಇವತ್ತೇ ತೀರ್ಪನ್ನ ನೀಡಬಹುದು. ಅಥವಾ ಎಫ್​ಐಆರ್ ದಾಖಲಿಸಲು ಸೂಚಿಸಬಹುದು. ಹೀಗಾಗಿ ಮೈಸೂರು ಲೋಕಾಯುಕ್ತ ಪೊಲೀಸರು ಅಲರ್ಟ್​ ಆಗಿದ್ದಾರೆ. ಹೀಗೇನಾದ್ರೂ ಆದ್ರೆ ಸಿಎಂ ಸಿದ್ದರಾಮಯ್ಯಗೆ ಮತ್ತಷ್ಟಯ ಸಂಕಷ್ಟ ತಪ್ಪಿದ್ದಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ಸಿದ್ದರಾಮಯ್ಯ ವಿರುದ್ಧ FIR ದಾಖಲಾಗುತ್ತಾ.. ಸಿಎಂ ಕೇರಳಕ್ಕೆ ಹೋಗುತ್ತಿರುವುದು ಏಕೆ?

https://newsfirstlive.com/wp-content/uploads/2024/09/CM_SIDDARAMAIAH_MUDA.jpg

Load More