newsfirstkannada.com

×

SSLC, PUC ಬೋರ್ಡ್ ಎಕ್ಸಾಂ ಯಾವಾಗ.. ಈ ತಿಂಗಳಲ್ಲೇ CBSE ಪರೀಕ್ಷೆ ನಡೆಸುತ್ತಾ?

Share :

Published September 24, 2024 at 8:34am

    ಬೋರ್ಡ್​ ಪರೀಕ್ಷೆ ಯಾವಾಗ ಅಂತ ವಿದ್ಯಾರ್ಥಿಗಳಲ್ಲಿ ಕುತೂಹಲ

    ಸಮಯ, ದಿನಾಂಕ ನಿಗದಿ ಮಾಡಿದೆಯಾ ಸಿಬಿಎಸ್​​ಇ ಇಲಾಖೆ..?

    2025ರ ಈ ತಿಂಗಳಲ್ಲೇ ಸಿಬಿಎಸ್​​ಇ ಪರೀಕ್ಷೆ ನಡೆಸುವುದು ಪಕ್ಕಾ?

ಸೆಂಟ್ರಲ್ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಷನ್ (ಸಿಬಿಎಸ್​​ಇ) 10 ಹಾಗೂ 12ನೇ ತರಗತಿ ಪರೀಕ್ಷೆಗಳನ್ನು ಯಾವಾಗ ನಡೆಸುತ್ತದೆ ಎಂದು ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ ಕುತೂಹಲವಿದೆ. ಪ್ರತಿ ವರ್ಷದಂತೆ ಸಿಬಿಎಸ್​​ಇ ಮುಂದಿನ ವರ್ಷ ಅಂದರೆ 2025ರ ಫೆಬ್ರವರಿ 3ನೇ ವಾರದಿಂದ ಪರೀಕ್ಷೆ ನಡೆಸಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: 10ನೇ ಕ್ಲಾಸ್ ಪಾಸ್ ಆಗಿದ್ರೆ ಸರ್ಕಾರಿ ಕೆಲಸ.. ಆದಾಯ ತೆರಿಗೆ ಇಲಾಖೆ ಹುದ್ದೆಗಳಿಗೆ ಕಾಲ್​ಫಾರ್ಮ್

ಸಿಬಿಎಸ್​​ಇ ಈ ಹಿಂದಿನ ಪರೀಕ್ಷೆಗಳ ದಿನಾಂಕಗಳನ್ನು ಗಮನಿಸಿದರೆ ಫೆಬ್ರವರಿಯಲ್ಲಿ ನಡೆದಿರುವುದು ತಿಳಿದು ಬರುತ್ತದೆ. ಹೀಗಾಗಿ 2025ರಲ್ಲಿ ನಡೆಯುವ 10 ಹಾಗೂ 12ನೇ ತರಗತಿ ಮಕ್ಕಳ ಪರೀಕ್ಷೆಗಳನ್ನು ಫೆಬ್ರವರಿ 15ರಿಂದ ಪ್ರಾರಂಭವಾಗಬಹುದು ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಸಿಬಿಎಸ್​​ಇ ಯಾವುದೇ ಅಧಿಕೃತ ಸಮಯ, ದಿನಾಂಕ ತಿಳಿಸಿಲ್ಲ. ಆದರೆ ಈ ಹಿಂದಿನ ವರ್ಷಗಳಲ್ಲಿ ಪರೀಕ್ಷೆ ನಡೆಸಿದ ದಿನಾಂಕ, ಸಮಯ ಗಮನಿಸಿದರೆ ಫೆಬ್ರವರಿಯಲ್ಲಿ ಪರೀಕ್ಷೆ ನಡೆಸಬಹುದು ಎನ್ನಲಾಗಿದೆ.

ಇದನ್ನೂ ಓದಿ: PUC ಪಾಸ್​ ಆದವರಿಗೆ ಭರ್ಜರಿ ಜಾಬ್​ಗಳು.. ನೂರಲ್ಲ, ಸಾವಿರಲ್ಲ 3 ಸಾವಿರಕ್ಕೂ ಅಧಿಕ ಸರ್ಕಾರಿ ಹುದ್ದೆಗಳು

ಈ ಹಿಂದೆ ಸಿಬಿಎಸ್​​ಇ ಬೋರ್ಡ್​​ ಪರೀಕ್ಷೆ ನಡೆಸಿರುವುದನ್ನು ಗಮನಿಸುವುದಾದರೆ, ಫೆಬ್ರವರಿಯಲ್ಲಿ ಪ್ರಾರಂಭವಾಗಿ ಏಪ್ರಿಲ್​​ನಲ್ಲಿ ಪರೀಕ್ಷೆ ಕೊನೆಯಾಗಿವೆ. 2021ರಲ್ಲಿ ಮೇ 4 ರಂದು ಆರಂಭವಾಗಿ ಜೂನ್ 7ಕ್ಕೆ ಎಕ್ಸಾಂ ಕೊನೆಗೊಂಡಿದ್ದವು. 2022ರಲ್ಲಿ ಏಪ್ರಿಲ್​ 26ರಂದು ಪ್ರಾರಂಭವಾಗಿ ಮೇ 24ಕ್ಕೆ ಕೊನೆಯಾಗಿದ್ದವು. ಇನ್ನು ಕಳೆದ ವರ್ಷ 2023ರಲ್ಲಿ ಫೆಬ್ರವರಿ 15 ರಂದು ಆರಂಭಗೊಂಡಿದ್ದವು. ಅದರಂತೆ 2024ರಲ್ಲಿ ಫೆಬ್ರವರಿ 15ಕ್ಕೆ ಪ್ರಾರಂಭಗೊಂಡು ಏಪ್ರಿಲ್ 2ಕ್ಕೆ ಕೊನೆಯಾಗಿದ್ದವು. ಹೀಗಾಗಿ ಸಿಬಿಎಸ್​​ಇ 2025ರ ಬೋರ್ಡ್​ ಎಕ್ಸಾಂ ಫೆಬ್ರವರಿಯಲ್ಲೇ ಇರಬಹುದು ಎಂದು ಊಹಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

SSLC, PUC ಬೋರ್ಡ್ ಎಕ್ಸಾಂ ಯಾವಾಗ.. ಈ ತಿಂಗಳಲ್ಲೇ CBSE ಪರೀಕ್ಷೆ ನಡೆಸುತ್ತಾ?

https://newsfirstlive.com/wp-content/uploads/2024/09/CBSC_STUDENT.jpg

Load More