newsfirstkannada.com

ಆಂಧ್ರದಲ್ಲಿ ಅಧಿಕಾರಿಗಳ ಬಿಗ್ ಮಿಸ್ಟೇಕ್ಸ್; CM ಚಂದ್ರಬಾಬು ನಾಯ್ಡು ಪ್ರಾಣಾಪಾಯದಿಂದ ಪಾರು

Share :

Published September 6, 2024 at 12:14pm

    ಮಧುರನಗರ ಬಳಿ ಬುಡಮೇರೂ ನದಿ ವೀಕ್ಷಣೆಗೆ ತೆರಳಿದ್ದ ಸಿಎಂ

    ನದಿ ನೀರಿನ ಪ್ರವಾಹ ವೀಕ್ಷಣೆ ವೇಳೆ ತಪ್ಪಿದ ಭಾರೀ ಅನಾಹುತ

    ತಕ್ಷಣವೇ ಆಲರ್ಟ್ ಆದ ಸಿಎಂ ಭದ್ರತಾ ಸಿಬ್ಬಂದಿ ಮಾಡಿದ್ದೇನು?

ಹೈದರಾಬಾದ್: ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಮಧುರನಗರ ಬಳಿ ಬುಡಮೇರೂ ನದಿ ಬಳಿ ನಡೆದಿದೆ.

ಇದನ್ನೂ ಓದಿ: ಡಾ.ಬ್ರೋ ಕಂಪನಿಯಲ್ಲಿ ಉದ್ಯೋಗ ಅವಕಾಶ.. ಗೋಪ್ರವಾಸದಲ್ಲಿ ಗಗನ್ ಜೊತೆ ನೀವೂ ಸೇರಿಕೊಳ್ಳಿ!

ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಮತ್ತು ಅವರ ತಂಡವು ರೈಲ್ವೇ ಹಳಿಯೊಂದರ ಕೆಳಗೆ ಜಲಾವೃತಗೊಂಡಿರುವ ನದಿ ನೀರಿನ್ನು ವೀಕ್ಷಿಸಲು ಹೋಗುತ್ತಿತ್ತು. ಈ ವೇಳೆ ಚಂದ್ರಬಾಬು ನಾಯ್ಡು ಅವರು ರೈಲ್ವೇ ಹಳಿ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವಿರುದ್ಧ ದಿಕ್ಕಿನಿಂದ ಟ್ರೈನ್ ಬಂದಿದೆ.

ತಕ್ಷಣವೇ ಆಲರ್ಟ್ ಆದ ಸಿಎಂ ಭದ್ರತಾ ಸಿಬ್ಬಂದಿ ಅವರನ್ನು ಹಳಿಯ ಪಕ್ಕಕ್ಕೆ ನಿಲ್ಲಿಸಿದ್ದಾರೆ. ಸಿಎಂ ಅವರನ್ನು ಕಿರಿದಾದ ಜಾಗದಲ್ಲಿ ನಿಲ್ಲಿಸಿ ರಕ್ಷಣೆ ಮಾಡಿದ್ದಾರೆ. ಆ ಮೂಲಕ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಅವರ ತಂಡವು ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಬಳಿಕ ರೈಲು ಹಾದುಹೋದ ನಂತರ ತಂಡವು ಸಿಎಂ ಅವರನ್ನು ಕರೆದುಕೊಂಡು ಮುಂದೆ ಹೋಗಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಭದ್ರತೆಯಲ್ಲಿ ಲೋಪ ಕಂಡು ಬಂದ ಬೆನ್ನಲ್ಲೇ  ಅಧಿಕಾರಿಗಳ ವಿರುದ್ಧ ನಾಯ್ಡು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಂಧ್ರದಲ್ಲಿ ಅಧಿಕಾರಿಗಳ ಬಿಗ್ ಮಿಸ್ಟೇಕ್ಸ್; CM ಚಂದ್ರಬಾಬು ನಾಯ್ಡು ಪ್ರಾಣಾಪಾಯದಿಂದ ಪಾರು

https://newsfirstlive.com/wp-content/uploads/2024/09/chandrababu.jpg

Load More