/newsfirstlive-kannada/media/post_attachments/wp-content/uploads/2024/05/ALLU_ARJUN.jpg)
ಪುಷ್ಪಾ-2 ರಿಲೀಸ್ ಕ್ರೇಜ್ನಲ್ಲಿರೋ ಐಕಾನ್ ಸ್ಟಾರ್ ಅಲ್ಲು ಅರ್ಜುನ್ಗೆ ಆಂಧ್ರ ಪ್ರದೇಶ ಪೊಲೀಸರು ಬಿಗ್ ಶಾಕ್ ನೀಡಿದ್ದು, ಅಲ್ಲು ಅರ್ಜುನ್ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ.
ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿ ಇದ್ದರೂ ಪೊಲೀಸರ ಅನುಮತಿ ಪಡೆಯದೇ ಅಲ್ಲು ಅರ್ಜುನ್ ಅವರು ತಮ್ಮ ಸ್ನೇಹಿತ ಹಾಗೂ ವೈಎಸ್ಆರ್ಸಿಪಿ ಶಾಸಕ ಶಿಲ್ಪಾ ರವಿಯವರ ಮನೆಗೆ ಭೇಟಿ ನೀಡಿದ್ದಾರೆ. ಆಂಧ್ರಪ್ರದೇಶದ ನಂದ್ಯಾಲದಲ್ಲಿರುವ ಶಿಲ್ಪಾ ರವಿಯವರ ಮನೆಗೆ ದಿಢೀರ್ ಭೇಟಿ ನೀಡಿದ್ದಾರೆ. ಈ ವೇಳೆ ಭಾರೀ ಮಟ್ಟದಲ್ಲಿ ಸ್ಟೈಲೀಶ್ ಸ್ಟಾರ್ ಅಭಿಮಾನಿಗಳು ಸೇರಿದ್ದರಿಂದ ಸಾಮಾನ್ಯ ಜನರಿಗೆ ತೀವ್ರ ತೊಂದರೆಯಾಗಿದೆ. ಅಲ್ಲದೇ ಟ್ರಾಫಿಕ್ ಕೂಡ ಉಂಟಾಗಿದ್ದು ಕೆಲಸದ ನಿಮಿತ್ತ ತೆರಳುವ ಚಾಲಕರಿಗೆ, ಸವಾರರಿಗೆ ತೊಂದರೆಯಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಪೆನ್ಡ್ರೈವ್ ಕೇಸ್ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್.. ಜಿಲ್ಲಾ ಕಾರಾಗೃಹಕ್ಕೆ ಬಿಜೆಪಿ ಮುಖಂಡ ಶಿಫ್ಟ್
I never thought Allu Arjun has this kind of Craze in Telugu States 🔥🤯😱
Pure Mass vibes for #AlluArjunAtNandyala#AlluArjun
pic.twitter.com/tnCNZCJRmr— Vɪᴊᴀʏ Sɪᴅᴅᴜツ (@VKSThalapathy) May 11, 2024
ಇದನ್ನೂ ಓದಿ:ಇವಳು ತಾಯಿಯೋ, ರಾಕ್ಷಸಿಯೋ.. ಪುಟ್ಟ ಬಾಲಕಿ ಮೇಲೆ ಯಮನಂತೆ ವರ್ತಿಸಿದ ಅಮ್ಮ
ನಾಳೆ ಅಂದರೆ ಮೇ 13ರಂದು ಆಂಧ್ರಪ್ರದೇಶದ 25 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಹೀಗಾಗಿ ಕೊನೆಯದಾಗಿ ಕಾಂಪೇನ್ ಮಾಡಲೆಂದು ಅಲ್ಲು ಅರ್ಜುನ್ ನಂದ್ಯಾಲದಲ್ಲಿನ ಶಾಸಕ ಶಿಲ್ಪಾ ರವಿ ನಿವಾಸಕ್ಕೆ ತೆರಳಿದ್ದಾರೆ. ಅನುಮತಿ ಪಡೆಯದೇ ತೆರಳಿದ್ದರಿಂದ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಟೂಟೌನ್ ಪೊಲೀಸ್ ಠಾಣೆಯ ಪೊಲೀಸರು ನಟ ಅಲ್ಲು ಅರ್ಜುನ್ ಹಾಗೂ ಶಾಸಕ ಶಿಲ್ಪಾ ರವಿ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ