Advertisment

ಮಳೆ ಆರ್ಭಟಕ್ಕೆ 30ಕ್ಕೂ ಹೆಚ್ಚು ಜನ ಸಾವು, ಮುಂದಿನ 3 ದಿನ ವರುಣಾರ್ಭಟ ಫಿಕ್ಸ್; ಡ್ರೋನ್​​ನಿಂದ ಆಹಾರ ವಿತರಣೆ

author-image
Bheemappa
Updated On
ಮಳೆ ಆರ್ಭಟಕ್ಕೆ 30ಕ್ಕೂ ಹೆಚ್ಚು ಜನ ಸಾವು, ಮುಂದಿನ 3 ದಿನ ವರುಣಾರ್ಭಟ ಫಿಕ್ಸ್; ಡ್ರೋನ್​​ನಿಂದ ಆಹಾರ ವಿತರಣೆ
Advertisment
  • 3 ದಿನ ಭಾರೀ ಮಳೆ ಆಗುತ್ತೆಂದು ಹವಾಮಾನ ಇಲಾಖೆ ಎಚ್ಚರಿಕೆ
  • ನಿರಾಶ್ರಿತರ ಬಳಿ ಹಣ ವಸೂಲಿ ಮಾಡುತ್ತಿರುವ ಬೋಟ್ ಓನರ್ಸ್
  • ಗೃಹ ಸಚಿವೆಯ ನಿವಾಸಕ್ಕೂ ನುಗ್ಗಿದ ಮಳೆನೀರು, ಕಾರ್ಯಾರಣೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಆಂಧ್ರಪ್ರದೇಶ, ತೆಲಂಗಾಣದ ಹಲವು ಭಾಗಗಳಲ್ಲಿ ರಣಭೀಕರ ಮಳೆ ಮುಂದುವರಿದಿದೆ. ಸತತ 2 ದಿನದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳಗೆ ಜನರು ಹೈರಾಣಾಗಿದ್ದಾರೆ. ಇದರ ಮಧ್ಯೆ ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆ ತೆಲುಗು ಜನರ ನಿದ್ದೆಗೆಡಿಸಿದೆ.

Advertisment

ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ ಅದೆಷ್ಟೋ ಜನ ಮನೆಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಹಲವಾರು ಪ್ರದೇಶಗಳು ಜಲಾವೃತವಾಗಿ ರಸ್ತೆಯಲ್ಲಿ ನಿಲ್ಲಿಸಿದ ವಾಹನಗಳು ಮುಳುಗಿ ಹೋಗಿವೆ. ಆಂಧ್ರಪ್ರದೇಶ, ತೆಲಂಗಾಣದ 30ಕ್ಕೂ ಹೆಚ್ಚ ಮಂದಿಯ ಪ್ರಾಣ ರಣಭೀಕರ ಮಳೆಗೆ ಆಹುತಿಯಾಗಿದೆ. ಇಂಚಿಂಚು ಜಾಗವನ್ನು ಬಿಡದೇ ಮಳೆನೀರು ನುಗ್ಗಿದೆ. ಇದರ ನಡುವೆ ಇನ್ನೂ 3 ದಿನ ಭಾರೀ ಮಳೆಯಾಗುತ್ತೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದ್ದು, ಜನರು ಮತ್ತಷ್ಟು ಆತಂಕಗೊಂಡಿದ್ದಾರೆ.

ಇದನ್ನೂ ಓದಿ: ಭೀಕರ ಮಳೆಯಿಂದ 26 ಸಾವು.. ಮುಂದುವರೆದ ವರುಣಾರ್ಭಟ, 11 ಜಿಲ್ಲೆಗಳಿಗೆ ರೆಡ್​ ಅಲರ್ಟ್!

publive-image

ನಿರಾಶ್ರಿತರಿಗೆ ಡ್ರೋನ್‌ಗಳ ಮೂಲಕ ಅಗತ್ಯ ವಸ್ತುಗಳ ವಿತರಣೆ

ವಿಜಯವಾಡದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಜನರಿಗೆ ಆಂಧ್ರದ ಸರ್ಕಾರ ಆಹಾರ ಪ್ಯಾಕೆಟ್ಸ್​ ಮತ್ತು ಮೂಲಭೂತ ಅಗತ್ಯ ವಸ್ತುಗಳ ಡ್ರೋನ್‌ಗಳ ಮೂಲಕ ವಿತರಣೆ ಮಾಡುತ್ತಿದೆ.

Advertisment

ಜನರ ಸ್ಥಳಾಂತರ.. ಹಣ ವಸೂಲಿಗೆ ಇಳಿದ ಬೋಟ್​ ಮಾಲೀಕರು

ವಿಜಯವಾಡ ಪ್ರವಾಹದಲ್ಲಿ ಸಿಲುಕಿರುವ ಜನರ ಬಳಿ ಬೋಟ್ ಮಾಲೀಕರು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿಯೇ ನಮ್ಮನ್ನು ಕಾಪಾಡಿ ನಿಮಗೆ 3 ಸಾವಿರ, ನಿಮಗೆ 4 ಸಾವಿರ ಎಂದು ಸಂತ್ರಸ್ತರು ಮಾಲೀಕರಿಗೆ ದುಡ್ಡು ಕೊಡುತ್ತಿದ್ದಾರೆ ಎನ್ನಲಾಗುತ್ತಿದೆ.

ಭವಿಷ್ಯ ನುಡಿಯೋ ಜ್ಯೋತಿಷ್ಯರನ್ನೂ ಬಿಡದ ಮಳೆರಾಯ

ಊರಿಗೆಲ್ಲಾ ಜ್ಯೋತಿಷ್ಯ ಹೇಳೋ ಖ್ಯಾತ ತೆಲುಗು ಜ್ಯೋತಿಷ್ಯ ಮಂಟೆನ ಸತ್ಯನಾರಾಯಣ ಆಶ್ರಮವು ಮುಳುಗಿಯೋಗಿದೆ. ವಿಜಯವಾಡದ ದಂಡೆಯ ಮೇಲೆರೋ ಆಶ್ರಮ ಕೆರೆ ಮಧ್ಯೆ ಇದ್ದಂತೆ ಕಾಣ್ತಿದೆ.

ಕೃಷ್ಣಾ ನದಿಗೆ ಹರಿದುಬರ್ತಿದೆ 5.70 ಲಕ್ಷ ಕ್ಯೂಸೆಕ್‌ನಷ್ಟು ನೀರು

ನಾಗಾರ್ಜುನಸಾಗರ ಅಣೆಕಟ್ಟೆಯಿಂದ ಕೃಷ್ಣಾ ನದಿಗೆ 5.70 ಲಕ್ಷ ಕ್ಯೂಸೆಕ್‌ನಷ್ಟು ನೀರು ಹರಿದುಬರ್ತಿದೆ. ಕೃಷ್ಣಾ ನದಿಯ ನೀರಿನ ಮಟ್ಟ ಎಷ್ಟಿದೆ ಅಂದ್ರೆ, ನದಿ ಮೇಲಿರೋ ರೈಲ್ವೆ ಸೇತುವೆಗೆ ನೀರು ಸ್ಪರ್ಶಿಸುತ್ತಿದೆ.

Advertisment

ಆಂಧ್ರ ಗೃಹ ಸಚಿವೆ ಅನಿತಾ ಮನೆಗೂ ಎದುರಾಯ್ತು ಜಲಕಂಟಕ

ಸದ್ಯ ಪ್ರವಾಹ ಸಾಮಾನ್ಯರನ್ನ ಮಾತ್ರವಲ್ಲ ರಾಜಕಾರಣಿಗಳನ್ನೂ ಟಚ್​ ಮಾಡಿದೆ. ಆಂಧ್ರದ ಗೃಹ ಸಚಿಚರನ್ನೂ ಬಿಡದ ವರುಣ, ಜಲಧಿಗ್ಬಂಧನ ವಿಧಿಸಿದ್ದಾನೆ. ಪ್ರವಾಹದಲ್ಲಿ ಸಿಲುಕಿದ್ದ ಸಚಿವೆ ಅನಿತಾ ಮತ್ತ ತಮ್ಮ ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಟ್ರ್ಯಾಕ್ಟರ್ ಮೂಲಕ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ:ಜೈಲಲ್ಲಿ ದರ್ಶನ್ ಭೇಟಿ ಮಾಡಿದ್ದೇಕೆ? ಪೊಲೀಸರಿಗೆ ಸಿನಿಮಾ ಡೈಲಾಗ್ ಹೊಡೆದ ಚಿಕ್ಕಣ್ಣ; ಆಮೇಲೇನಾಯ್ತು?

publive-image

ಜಲಾವೃತ ಪ್ರದೇಶಗಳಲ್ಲಿ ಸಚಿವ ಭೇಟಿ, ಕೆಳಗೆ ಬಿದ್ದು ಗಾಯ

ಮಳೆ ಪ್ರದೇಶಗಳಲ್ಲಿ ಬೈಕ್ ಚಲಾಯಿಸುತ್ತಿದ್ದ ವೇಳೆ ಸಚಿವ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಕೆಳಗೆ ಬಿದ್ದಿದ್ದಾರೆ. ಪರಿಣಾಮ ಕಾಲಿಗೆ ಪೆಟ್ಟಾಗಿ ಚಿಕಿತ್ಸೆ ಪಡೆದಿದ್ದಾರೆ.

Advertisment

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಎಂ, ಮಾಜಿ ಪರಿಶೀಲನೆ

ಪ್ರವಾಹ ಪೀಡಿತ ಪ್ರದೇಶಗಳಿಗೆ ಆಂಧ್ರ ಸಿಎಂ ಚಂದ್ರಬಾಬು ನಾಯ್ದು ಜೆಸಿಬಿ ಏರಿ ಪರಿಶೀಲನೆ ನಡೆಸಿದ್ರೆ.. ಮಾಜಿ ಸಿಎಂ ಜಗನ್ ಮೋಹನ್​ ರೆಡ್ಡಿ ಬೈ ವಾಕ್​ ಬಂದಿದ್ರು. ಜನರಿಗೆ ತೋಚಿದ ನಾಯಕ ಬಳಿ ಅವರವರ ಅಳಲನ್ನ ತೋಡ್ಕೊಂಡ್ರು. ರಾಜಕಾರಣಿಗಳು ರಾಜಕೀಯವಾಗಿ ಬಳಸಿಕೊಳ್ಳಲು ಪ್ರವಾಹ ಪರಿಸ್ಥಿತಿ ವೇದಿಕೆಯಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment