newsfirstkannada.com

ಭೀಕರ ಮಳೆಯಿಂದ 26 ಸಾವು.. ಮುಂದುವರೆದ ವರುಣಾರ್ಭಟ, 11 ಜಿಲ್ಲೆಗಳಿಗೆ ರೆಡ್​ ಅಲರ್ಟ್!

Share :

Published August 29, 2024 at 8:58am

Update August 29, 2024 at 8:59am

    ಕಾಲುವೆ ನೀರಿನಲ್ಲಿ ಟ್ರ್ಯಾಕ್ಟರ್ ಬಿದ್ದು ಸ್ಥಳದಲ್ಲೇ 7 ಜನರು ಸಾವು

    ಮನೆಯಿಂದ ಹೊರ ಹೋಗದಂತೆ ಸುರಿಯುತ್ತಿದೆ ಭಾರೀ ಮಳೆ

    ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವರುಣಾರ್ಭಟದಿಂದ ಜನ ತತ್ತರ

ಗಾಂಧಿನಗರ: ಗುಜರಾತ್​ನ ವಿವಿಧ ಪ್ರದೇಶಗಳಲ್ಲಿ ವರುಣಾರ್ಭಟಕ್ಕೆ 26 ಜನರು ಸಾವನ್ನಪ್ಪಿದ್ದು 18 ಸಾವಿರಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಗುಜರಾತ್​ನ 11 ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದು 22 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಅನೌನ್ಸ್ ಮಾಡಿದೆ.

ಇದನ್ನೂ ಓದಿ: ಯೂಟ್ಯೂಬ್ ಇತಿಹಾಸದಲ್ಲೇ ಸ್ಟಾರ್ ಫುಟ್ಬಾಲ್ ಪ್ಲೇಯರ್ ನ್ಯೂ ರೆಕಾರ್ಡ್.. ರೊನಾಲ್ಡೊ ಮತ್ತೊಂದು ಸಾಧನೆ ಏನು?

ಮೊರ್ಬಿ ಜಿಲ್ಲೆಯ ಧಾವನ ಗ್ರಾಮದ ಬಳಿ ತುಂಬಿ ಹರಿಯುತ್ತಿದ್ದ ಕಾಲುವೆಯಲ್ಲಿ ಟ್ರ್ಯಾಕ್ಟರ್​​ ಮುಗುಚಿ ಬಿದ್ದ ಪರಿಣಾಮ ಸ್ಥಳದಲ್ಲೇ 7 ಜನರು ಮೃತಪಟ್ಟಿದ್ದಾರೆ. ಇಷ್ಟೇ ಅಲ್ಲದೇ ಗುಜರಾತ್​ನ ಜಿಲ್ಲೆಗಳಾದ ರಾಜ್​ಕೋಟ್, ಆನಂದ್, ಮಹಿಸಾಗರ್, ಖೇಡಾ, ಅಹಮದಾಬಾದ್, ಮೊರ್ಬಿ, ಜುನಗಡ್ ಮತ್ತು ಬೆರುಚಿನಲ್ಲಿ ಮಳೆಯಿಂದಾಗಿ ಜನ ಸಾವನ್ನಪ್ಪಿದ್ದಾರೆ. ಒಟ್ಟು 26 ಜನರು ಕಳೆದ ಮೂರು ದಿನಗಳಲ್ಲಿ ಭಾರೀ ಮಳೆಯಿಂದ ಮೃತಪಟ್ಟಿದ್ದಾರೆ.

ಪ್ರಧಾನಿ ಮೋದಿಯವರು ಗುಜರಾತ್ ಸಿಎಂ ಭೂಪೇಂದ್ರ ಪಟೇಲ್​ರನ್ನು ಸಂಪರ್ಕಿಸಿ ಪರಿಸ್ಥಿತಿ ಅವಲೋಕಿಸಿದ್ದಾರೆ. ವರುಣಾರ್ಭದಿಂದ ಸಮಸ್ಯೆಯಾಗಿರುವ ರಾಜ್ಯಕ್ಕೆ ಬೇಕಾದ ಸೌಕರ್ಯಗಳನ್ನು ಕೇಂದ್ರ ಸರ್ಕಾರ ನೀಡುತ್ತದೆ ಎಂದು ಭರವಸೆ ನೀಡಿದ್ದಾರೆ. ನದಿಗಳು ತುಂಬಿ ಹರಿಯುತ್ತಿರುವ ಕಾರಣ ನದಿ ಪಾತ್ರದ ಗ್ರಾಮಗಳಲ್ಲಿನ ಸುಮಾರು 6 ಸಾವಿರಕ್ಕೂ ಅಧಿಕ ಜನರನ್ನು ಬೇರೆ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಬಳ್ಳಾರಿಯಲ್ಲಿ ದರ್ಶನ್ ಇರಲಿರುವ ಹೈ ಸೆಕ್ಯೂರಿಟಿ ಸೆಲ್‌ ಹೇಗಿದೆ.. 3 ದಶಕಗಳ ಹಿಂದೆ ನಿರ್ಮಿಸಿದ ಇದರ ಇತಿಹಾಸ ಗೊತ್ತಾ? 

ದ್ವಾರಕದ ಬಳಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಸುಮಾರು 95 ಜನರನ್ನು ಎನ್​ಡಿಆರ್​ಎಫ್​ ಟೀಮ್ ರಕ್ಷಣೆ ಮಾಡಿದೆ. ಬಳಿಕ ಅವರನ್ನು ಬೇರೆ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಗುಜರಾತ್​ನಲ್ಲಿ ಒಟ್ಟು 6 ಭಾರತೀಯ ಸೇನೆಯ ತಂಡಗಳು, 14 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣೆ ಫೋರ್ಸ್ (SDRF) ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿವೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೀಕರ ಮಳೆಯಿಂದ 26 ಸಾವು.. ಮುಂದುವರೆದ ವರುಣಾರ್ಭಟ, 11 ಜಿಲ್ಲೆಗಳಿಗೆ ರೆಡ್​ ಅಲರ್ಟ್!

https://newsfirstlive.com/wp-content/uploads/2024/08/GT_RAIN_NEW.jpg

Load More