/newsfirstlive-kannada/media/post_attachments/wp-content/uploads/2024/09/ANDRA-RAIN-2.jpg)
ಎರಡು ಶತಮಾನಗಳ ದಾಖಲೆಯ ಮಳೆಗೆ ನೆರೆಯ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳು ಅಕ್ಷರಶಃ ತತ್ತರಿಸಿ ಹೋಗಿವೆ. ಭಾರೀ ಮಳೆಯಿಂದ ನದಿಗಳು ಉಕ್ಕಿ ಹರಿದಿದ್ದು, ಲಕ್ಷಾಂತರ ಜನರ ಬದುಕು ಪ್ರವಾಹದಲ್ಲಿ ಕೊಚ್ಚಿ ಹೋಗಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ.. ಹೈದರಾಬಾದ್, ವಿಜವಾಡದಲ್ಲಿ ಜನರ ಬದುಕು ದುಸ್ತರವಾಗಿಬಿಟ್ಟಿದೆ.
ಶತಮಾನಗಳ ದಾಖಲೆ ಮಳೆಗೆ ಆಂಧ್ರ-ತೆಲಂಗಾಣ ತತ್ತರ
ರೌದ್ರಾವತಾರಕ್ಕೆ ತೆಲುಗು ಸೀಮೆಯಲ್ಲಿ ಸೃಷ್ಟಿಯಾಗಿರುವ ಅವಾಂತರದ ದೃಶ್ಯಗಳು. ಕೃಷ್ಣಾ ನದಿಯ ರೌದ್ರಾವತಾರಕ್ಕೆ ಆಂಧ್ರ, ತೆಲಂಗಾಣ ಅವಳಿ ರಾಜ್ಯಗಳು ಅಕ್ಷರಶಃ ತತ್ತರಿಸಿ ಹೋಗಿವೆ. ಆಂಧ್ರಪ್ರದೇಶದ ಕೃಷ್ಣಾ ನದಿ ತೀರದಲ್ಲಿರುವ ವಿಜಯವಾಡ ಜಿಲ್ಲೆ ಶತಮಾನದ ಮಳೆಗೆ ತತ್ತರಿಸಿದೆ. ಭಾರಿ ಮಳೆಗೆ ರಸ್ತೆಗಳು ಹೊಳೆಯಂತಾಗಿವೆ. ಬಿಟ್ಟು ಬಿಡದೇ ಸುರಿಯುತ್ತಿರೋ ಭಾರೀ ಮಳೆಯಿಂದ ತಗ್ಗುಪ್ರದೇಶದ ಮನೆಗಳು, ಕಟ್ಟಡಗಳು ಮುಳುಗಿವೆ. ಹಲವು ಗ್ರಾಮಗಳ ನಡುವಿನ ರಸ್ತೆ ಸಂಪರ್ಕ ಕಟ್ ಆಗಿದೆ. ವಿಜಯವಾಡ ಸೇರಿದಂತೆ ಕೃಷ್ಣ ನದಿ ತೀರಿದ ಬರೋಬ್ಬರಿ ನೂರಕ್ಕೂ ಹೆಚ್ಚು ಹಳ್ಳಿಗಳು ನೀರಿನಲ್ಲಿ ಮುಳುಗಿ ಹೋಗಿವೆ.
/newsfirstlive-kannada/media/post_attachments/wp-content/uploads/2024/09/ANDRA-RAIN-1.jpg)
ಎದೆಮಟ್ಟದ ನೀರಿನಲ್ಲಿ ಜನರ ಅಗತ್ಯವಸ್ತುಗಳಿಗಾಗಿ ಪರಿದಾಡುತ್ತಿದ್ದ ದೃಶ್ಯಗಳು ನಿಜಕ್ಕೂ ಎದೆ ಝಲ್​ ಎನ್ನಿಸುವಂತಿವೆ. ನೀರಿಲ್ಲಿ ಅರ್ಧ ಮುಳುಗಿರುವ ವಾಹನಗಳ ಮೇಲೆ. ಕಟ್ಟಡಗಳ ಮೇಲೆ ಕುಳಿತು ಜನರು ರಕ್ಷಣೆಗಾಗಿ ಅಂಗಲಾಚುತ್ತಿದ್ದು, ಎನ್​ಡಿಆರ್​ಎಫ್​ ಸಿಬ್ಬಂದಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. 17 ಸಾವಿರಕ್ಕೂ ಹೆಚ್ಚು ಜನರ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಖುದ್ದು ಆಂದ್ರ ಸಿಎಂ ಚಂದ್ರಬಾಬು ನಾಯ್ಡು ವಿಜಯವಾಡದ ಪ್ರವಾಹ ಪೀಡಿತ ಪ್ರದೇಶಕ್ಕೆ ಬೋಟ್​ನಲ್ಲಿ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ಟ್ರ್ಯಾಕ್ಟರ್​ ಸಹಾಯದಿಂದ ಕೆಟ್ಟುನಿಂತಿದ್ದ ಬಸ್​ ತೆರವು
ಪಲ್ನಾಡು ಜಿಲ್ಲೆಯ ಅಚ್ಚಂಪೇಟೆಯಲ್ಲಿನ ಪ್ರವಾಹ ನೀರಿನಲ್ಲಿ ಎರಡು ಆರ್‌ಟಿ ಬಸ್‌ಗಳ ಕೆಟ್ಟು ನಿಂತಿದ್ವು. ಇವುಗಳನ್ನು ಟ್ರ್ಯಾಕ್ಟರ್ ಮೂಲಕ ಸುರಕ್ಷಿತವಾಗಿ ಹೊರಕ್ಕೆ ತರಲಾಯ್ತು. ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು, ಸಂತ್ರಸ್ತರ ಸಹಾಯಕ್ಕಾಗಿ ಟೊಂಕಕಟ್ಟಿ ನಿಂತಿದ್ದಾರೆ. ಮಧ್ಯರಾತ್ರಿಯಾದ್ರೂ ಚಂದ್ರಬಾಬು ನಾಯ್ಡು, ಪ್ರವಾಹ ಪೀಡಿತ ವಿಜಯ್​ ಸಿಂಗ್​ ನಗರದಲ್ಲಿ ಸಂಚಾರ ಮಾಡಿ, ಸಂತ್ರಸ್ತರ ಧೈರ್ಯ ತುಂಬಿದ್ದಾರೆ. ಇದಷ್ಟೇ ಅಲ್ಲ ಸಂತ್ರಸ್ತರಿಗೆ ಅಗತ್ಯವಸ್ತುಗಳ ಪೂರೈಕೆಯನ್ನು ಖುದ್ದು ಪರಿಶೀಲನೆ ನಡೆಸಿದ್ರು. ನನಗೆ ಪ್ರಜೆಗಳ ಕ್ಷೇಮಕ್ಕಿಂತ ವಿಶ್ರಾಂತಿ ಮುಖ್ಯವಲ್ಲ ಎನ್ನುತ್ತ ರಾತ್ರಿಯಿಡೀ ನೆರೆ ಸಂತ್ರಸ್ತರಿಗೆ ಬೆಂಬಲವಾಗಿ ನಿಂದ್ರು.
ಹೈದ್ರಾಬಾದ್​ನಲ್ಲಿ ಇಂದು ಶಾಲೆಗಳಿಗೆ ರಜೆ ಘೋಷಣೆ
ಭಾರೀ ಮಳೆ ಮತ್ತು ನೀರಿನ ಭಾರೀ ಒಳಹರಿವಿನಿಂದಾಗಿ ಹೈದರಾಬಾದ್ ನ ಹೃದಯಭಾಗದಲ್ಲಿರುವ ಹುಸೇನ್ ಸಾಗರ್ ಸರೋವರ ಸಂಪೂರ್ಣ ಭರ್ತಿಯಾಗಿದ್ದು, ನೀರನ್ನು ಹೊರಬಿಡಲಾಗಿದೆ. ಇವತ್ತು ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ಮುಂಜಾಗ್ರತ ಕ್ರಮವಾಗಿ ಹೈದರಾಬಾದ್ ಜಿಲ್ಲಾಧಿಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ.
ಆಂಧ್ರ, ತೆಲಂಗಾಣಕ್ಕೆ ಸಹಾಯ ಹಸ್ತ ಚಾಚಿದ ಕೇಂದ್ರ ಸರ್ಕಾರ
ಕೃಷ್ಣನದಿಯ ಆರ್ಭಟದಿಂದ ಆಂಧ್ರ ಮತ್ತು ತೆಲಂಗಾಣದ ನೂರಾರು ಹಳ್ಳಿಗಳು ಪ್ರವಾಹಕ್ಕೆ ಸಿಲುಕಿ ತತ್ತರಿವೆ. ನೀರಿನ ರಭಸಕ್ಕೆ ರೈಲು ಹಳ್ಳಿಗಳು ಕೊಚ್ಚಿ ಹೋಗಿದ್ದು, 99 ರೈಲುಗಳ ಸಂಚಾರದಲ್ಲಿ ವ್ಯತ್ಯವಾಗಿದೆ.. ಕೇಂದ್ರ ಗೃಹಸಚಿವ ಅಮಿತ್​ ಶಾ, ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತನಾಡಿ, ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಹಾಗೂ ಕೇಂದ್ರ ಸರ್ಕಾರದಿಂದ ಅಗತ್ಯ ನೆರವು ನೀಡುವುದಾಗಿ ಭರಸವೆ ನೀಡಿದ್ದಾರೆ.
ಇದನ್ನೂ ಓದಿ:ನಾನು DG ಅಲ್ಲ, ಆದರೆ.. ದರ್ಶನ್ ಬಗ್ಗೆ ಮತ್ತೆ ಮಾತನಾಡಿದ ಸಚಿವ ಜಮೀರ್ ಅಹ್ಮದ್..!
/newsfirstlive-kannada/media/post_attachments/wp-content/uploads/2024/09/ANDRA-RAIN-3.jpg)
ಒಟ್ಟಾರೆ 200 ವರ್ಷಗಳ ದಾಖಲೆಯ ಮಳೆಗೆ.. ಕೃಷ್ಣ ನದಿ ಉಕ್ಕಿ ಹರಿದಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಅವಳಿ ರಾಜ್ಯಗಳು ತತ್ತರಿಸಿ ಹೋಗಿವೆ. ರಾತ್ರಿಯಿಡೀ ಪ್ರವಾಹದ ನೀರಿನಲ್ಲೇ ಜನರು ಜಾಗರಣೆ ಮಾಡಿದ್ದಾರೆ. ಇನ್ನು ಮಳೆ ಅನಾಹುತದಿಂದ ಇಲ್ಲಿಯವರೆಗೆ 19 ಮಂದಿ ಸಾವನ್ನಪ್ಪಿದ್ದಾರೆ. 140 ಟ್ರೈನ್​ಗಳ ಓಡಾಟ ಕ್ಯಾನ್ಸಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us