newsfirstkannada.com

ದ್ರಾವಿಡ್ ಪುತ್ರ ಅಂಡರ್​​-19 ತಂಡಕ್ಕೆ ಆಯ್ಕೆ; ಆದರೆ ಸಮಿತ್​ಗೆ ವಿಶ್ವಕಪ್ ಆಡಲು ಸಾಧ್ಯವಾಗುವುದಿಲ್ಲ..

Share :

Published September 2, 2024 at 7:51am

    ಸಮಿತ್ ಅತ್ಯುತ್ತಮ ಬಲಗೈ ಬ್ಯಾಟ್ಸ್​ಮನ್, ವೇಗದ ಬೌಲರ್

    ತಂದೆಯ ಹಾದಿಯಲ್ಲೇ ಸಾಗುತ್ತಿದ್ದಾರೆ ದ್ರಾವಿಡ್ ಪುತ್ರ ಸಮಿತ್

    ಆಸ್ಟ್ರೇಲಿಯಾ-19 ವಿರುದ್ಧದ ಸರಣಿಗೆ ಭಾರತ ತಂಡಕ್ಕೆ ಆಯ್ಕೆ

ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಟಿ-20 ವಿಶ್ವಕಪ್ ಗೆದ್ದುಕೊಂಡಿದೆ. ಈ ವಿಶ್ವಕಪ್ ಗೆಲುವಿನೊಂದಿಗೆ ದ್ರಾವಿಡ್ ಅವರ ಮುಖ್ಯ ಕೋಚ್ ಅವಧಿ ಮುಕ್ತಾಯವಾಗಿದೆ. ಇದೀಗ ದ್ರಾವಿಡ್ ಹಾದಿಯಲ್ಲೇ ಅವರ ಮಗ ಸಮಿತ್ ಸಾಗಿದ್ದಾರೆ. 18 ವರ್ಷದ ಸಮಿತ್ ದ್ರಾವಿಡ್, ಆಸ್ಟ್ರೇಲಿಯಾ-19 ವಿರುದ್ಧದ ಸರಣಿಗೆ ಭಾರತ ತಂಡದ ಭಾಗವಾಗಿದ್ದಾರೆ.

ಇದನ್ನೂ ಓದಿ:ಗಗನಚುಂಬಿ ಸಿಕ್ಸರ್ ಬಾರಿಸಿದ ದ್ರಾವಿಡ್ ಪುತ್ರ; ಅದ್ಭುತ ಸಿಕ್ಸರ್​ನ ವಿಡಿಯೋ ಇಲ್ಲಿದೆ..!

ಸಮಿತ್ ಅತ್ಯುತ್ತಮ ಬಲಗೈ ಬ್ಯಾಟ್ಸ್​ಮನ್. ಜೊತೆಗೆ ವೇಗದ ಬೌಲರ್ ಕೂಡ ಹೌದು. ಸಮಿತ್ ದ್ರಾವಿಡ್ 2023-24ರ ಋತುವಿನಲ್ಲಿ ಕೂಚ್ ಬೆಹಾರ್ ಟ್ರೋಫಿ ಗೆದ್ದ ಕರ್ನಾಟಕ ಅಂಡರ್-19 ತಂಡದ ಭಾಗವಾಗಿದ್ದಾರೆ. ಲಂಕಾಶೈರ್ ತಂಡದ ವಿರುದ್ಧದ ಮೂರು ದಿನಗಳ ಪಂದ್ಯದ್ಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಪ್ಲೇಯಿಂಗ್-11ನಲ್ಲಿದ್ದರು. ಸಮಿತ್ ಮಹಾರಾಜ ಟ್ರೋಫಿ KSCA ಟಿ-20 ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್​ ತಂಡದ ಭಾಗವಾಗಿದ್ದಾರೆ.

ಇದನ್ನೂ ಓದಿ:20 ಸಿಕ್ಸರ್ 241 ಜೊತೆಯಾಟ.. ಆರ್​ಸಿಬಿಯ ಅನುಜ್ ರಾವತ್ ವಿಧ್ವಂಸಕಾರಿ ಬ್ಯಾಟಿಂಗ್​​..!

ಅಂಡರ್-19 ವಿಶ್ವಕ್ ಆಡಲು ಸಾಧ್ಯವಿಲ್ಲ
ಸಮಿತ್ ಮೊದಲ ಬಾರಿಗೆ ಅಂಡರ್ -19 ಮಟ್ಟದಲ್ಲಿ ಭಾರತಕ್ಕಾಗಿ ಆಡಲಿದ್ದಾರೆ. ಸಮಿತ್ ಭಾರತ ತಂಡದ ಅಂಡರ್-19 ತಂಡದಲ್ಲಿ ಆಯ್ಕೆ ಆಗಿದ್ದರು. ಆದರೆ 2026ರಕ್ಕು ನಡೆಯಲಿರುವ ಅಂಡರ್-19 ವಿಶ್ವಕಪ್​​ನಲ್ಲಿ ಆಡಲು ಅವರಿಗೆ ಸಾಧ್ಯವಾಗುವುದಿಲ್ಲ. ಯಾಕೆಂದರೆ ಸಮಿತ್​ ನವೆಂಬರ್ 10, 2005ರಲ್ಲಿ ಜನಿಸಿದ್ದಾರೆ. ಅವರ 19ನೇ ಹುಟ್ಟುಹಬ್ಬಕ್ಕೆ ಸುಮಾರು 2 ತಿಂಗಳ ದೂರ ಇದೆ. ಆದ್ದರಿಂದ 2026ರ ಅಂಡರ್-19 ವಿಶ್ವಕಪ್ ನಡೆಯುವಾಗ ಅವರಿಗೆ 20 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುತ್ತದೆ. ಮುಂದಿನ ವಿಶ್ವಕಪ್ ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದ್ರಾವಿಡ್ ಪುತ್ರ ಅಂಡರ್​​-19 ತಂಡಕ್ಕೆ ಆಯ್ಕೆ; ಆದರೆ ಸಮಿತ್​ಗೆ ವಿಶ್ವಕಪ್ ಆಡಲು ಸಾಧ್ಯವಾಗುವುದಿಲ್ಲ..

https://newsfirstlive.com/wp-content/uploads/2024/09/SAMIT-DRAVID-1.jpg

Load More