27 ವರ್ಷಕ್ಕೆ ‘ಆ್ಯಂಗ್ರಿ ರಾಂಟ್‌ಮ್ಯಾನ್‌’ ಯೂಟ್ಯೂಬರ್ ಅಭ್ರದೀಪ್ ಸಹಾ ಸಾವು; ಚಿಕ್ಕ ವಯಸ್ಸಿಗೆ ಏನಾಯ್ತು?

author-image
admin
Updated On
27 ವರ್ಷಕ್ಕೆ ‘ಆ್ಯಂಗ್ರಿ ರಾಂಟ್‌ಮ್ಯಾನ್‌’ ಯೂಟ್ಯೂಬರ್ ಅಭ್ರದೀಪ್ ಸಹಾ ಸಾವು; ಚಿಕ್ಕ ವಯಸ್ಸಿಗೆ ಏನಾಯ್ತು?
Advertisment
  • ಅಭ್ರದೀಪ್ ಸಹಾ ಸಾವಿನ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್!
  • ಶಸ್ತ್ರ ಚಿಕಿತ್ಸೆಯ ಬಳಿಕ ವೆಂಟಿಲೇಟರ್‌ನಲ್ಲಿದ್ದ ಆ್ಯಂಗ್ರಿ ರಾಂಟ್ಮನ್ ಅಭ್ರದೀಪ್
  • ಕೆಜಿಎಫ್ ಸಿನಿಮಾ ಬಗ್ಗೆ ಆ್ಯಂಗ್ರಿ ಮ್ಯಾನ್ ನೀಡಿದ್ದ ರಿವ್ಯೂ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು

ಫೇಮಸ್‌ ಯೂಟ್ಯೂಬರ್ ಅಭ್ರದೀಪ್ ಸಹಾ ಚಿಕ್ಕವಯಸ್ಸಿಗೆ ಸಾವನ್ನಪ್ಪಿರೋ ವರದಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಅಭ್ರದೀಪ್ ಸಹಾ ಆ್ಯಂಗ್ರಿ ರಾಂಟ್ಮನ್ ಅಂತಲೇ ಖ್ಯಾತಿ ಪಡೆದಿದ್ದಾರೆ.

ಅಭ್ರದೀಪ್ ಸಹಾ ಅವರಿಗೆ ಇನ್ನೂ ಕೇವಲ 27 ವರ್ಷ ವಯಸ್ಸು. ಇವರು ಸ್ಪೋರ್ಟ್ಸ್‌ ಅದರಲ್ಲೂ ಫುಟ್ಬಾಲ್‌ಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಹೆಚ್ಚು ವಿಡಿಯೋ ಮಾಡುತ್ತಿದ್ದರು. ಅಭ್ರದೀಪ್ ಸಹಾ ಸಾವಿನ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಹಳಷ್ಟು ಜನ ಅವರ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ.

publive-image

ಇದನ್ನೂ ಓದಿ:24 ಗಂಟೆಯಲ್ಲಿ ದಬದಬ ಸುರಿದ 1.5 ವರ್ಷದ ಮಳೆ.. ವರುಣಾಘಾತಕ್ಕೆ ದುಬೈ ತತ್ತರ; ಪರಿಸ್ಥಿತಿ ಹೇಗಿದೆ ನೋಡಿ!

ಇತ್ತೀಚೆಗೆ ಅಂದ್ರೆ ಒಂದು ತಿಂಗಳ ಹಿಂದಷ್ಟೇ ಅಭ್ರದೀಪ್ ಸಹಾ ಅವರು ಮೇಜರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರ ಚಿಕಿತ್ಸೆಯ ಬಳಿಕ ಅಭ್ರದೀಪ್‌ ವೆಂಟಿಲೇಟರ್‌ನಲ್ಲಿದ್ದರು. ಆದರೆ ದಿಢೀರನೇ ಏಪ್ರಿಲ್ 16ರಂದು ಆ್ಯಂಗ್ರಿ ರಾಂಟ್ಮನ್‌ ಅಭ್ರದೀಪ್ ಸಹಾ ಸಾವನ್ನಪ್ಪಿರೋ ವರದಿಯಾಗಿದೆ. ಅಭ್ರದೀಪ್ ಸಹಾ ಸಾವಿಗೆ ಅಸಲಿ ಕಾರಣ ಏನು ಅನ್ನೋದು ಸದ್ಯ ಬಹಿರಂಗವಾಗಿಲ್ಲ.

ಮತ್ತೊಂದು ವರದಿ ಪ್ರಕಾರ ಅಭ್ರದೀಪ್ ಸಹಾ ಅವರಿಗೆ ಶಸ್ತ್ರಚಿಕಿತ್ಸೆಯ ನಂತರದ ಹಲವು ತೊಂದರೆಗಳು ಎದುರಾಗಿತ್ತು. ಬಹುಅಂಗಾಂಗಗಳ ವೈಫಲ್ಯದಿಂದ ಆ್ಯಂಗ್ರಿ ರಾಂಟ್ಮನ್ ಸಾವನ್ನಪ್ಪಿರಬಹುದು ಎನ್ನಲಾಗಿದೆ. ಆ್ಯಂಗ್ರಿ ರಾಂಟ್ಮನ್ ಅವರು ಹಲವು ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. 1996, ಫೆಬ್ರವರಿ 19ಕ್ಕೆ ಕೋಲ್ಕತ್ತಾದಲ್ಲಿ ಜನಸಿದ್ದರು. ಇವರಿಗೆ ಯೂಟ್ಯೂಬ್‌ನಲ್ಲಿ 4 ಲಕ್ಷ 81 ಸಾವಿರ ಸಬ್‌ಸ್ಕ್ರೈಬರ್ಸ್‌ ಮತ್ತು ಇನ್ಸ್‌ಸ್ಟಾಗ್ರಾಂನಲ್ಲಿ 1 ಲಕ್ಷ 19 ಸಾವಿರ ಫಾಲೋವರ್ಸ್ ಇದ್ದಾರೆ.

ಕೆಜಿಎಫ್‌ ಹೊಗಳಿ ಸುದ್ದಿಯಾಗಿದ್ದ ಯಂಗ್ ಮ್ಯಾನ್!
ಅಭ್ರದೀಪ್ ಸಹಾ ಇವರು ಕನ್ನಡದ ಕೆಜಿಎಫ್ ಸಿನಿಮಾ ರಿಲೀಸ್ ಆದಾಗ ದಕ್ಷಿಣ ಭಾರತದಲ್ಲಿ ಪ್ರಸಿದ್ಧರಾಗಿದ್ದರು. ಕೆಜಿಎಫ್ ಸಿನಿಮಾದ ಬಗ್ಗೆ ಇವರ ರಿವ್ಯೂ ಸಾಕಷ್ಟು ವೈರಲ್ ಆಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment