ಬಿಸಿಸಿಐ ಬಾಸ್ಗಳ ವಿರುದ್ಧ ಫ್ಯಾನ್ಸ್ ಗರಂ
T-20 ವಿಶ್ವಕಪ್ನಿಂದ ಕೊಹ್ಲಿಗೆ ಕೊಕ್ ಪಕ್ಕಾನಾ.?
ಕೊಹ್ಲಿ ಬೆಂಬಲಕ್ಕೆ ನಿಂತ ಅಭಿಮಾನಿ ಬಳಗ..!
T20 ವಿಶ್ವಕಪ್ ತಂಡದಿಂದ ವಿರಾಟ್ ಕೊಹ್ಲಿಯನ್ನ ಕೈ ಬಿಡಲು ಬಿಸಿಸಿಐ ಚಿಂತಿಸಿದೆ. ಈ ಸುದ್ದಿ ಸದ್ಯ ಕ್ರಿಕೆಟ್ ಲೋಕದಲ್ಲಿ ಬಿರುಗಾಳಿಯನ್ನ ಎಬ್ಬಿಸಿದೆ. ವಿಶ್ವ ಶ್ರೇಷ್ಟ ಆಟಗಾರನಿಗೆ ಕೊಕ್ ಕೊಡಲು ಮುಂದಾಗಿರೋ ಬಿಗ್ಬಾಸ್ಗಳನ್ನ ನಡೆಯನ್ನ ಮಾಜಿ ಕ್ರಿಕೆಟರ್ಸ್ ಟೀಕಿಸ್ತಿದ್ದಾರೆ. ಕಿಂಗ್ ಕೊಹ್ಲಿ ಫ್ಯಾನ್ಸ್ ಅಂತೂ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನ ಕಾವು ಭಾರತೀಯ ಕ್ರಿಕೆಟ್ ವಲಯದಲ್ಲಿ ಜೋರಾಗಿದೆ. ಕ್ರಿಕೆಟ್ ಹಬ್ಬದೂಟ ಸವಿಯಲು ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಇನ್ನೊಂದೆಡೆ ಬಿಸಿಸಿಐ ಬಿಗ್ಬಾಸ್ಗಳು ಐಪಿಎಲ್ನಲ್ಲೇ ವಿಶ್ವಕಪ್ ತಂಡವನ್ನ ಫೈನಲ್ ಮಾಡೋ ಲೆಕ್ಕಾಚಾರದಲ್ಲಿದ್ದಾರೆ. ಈ ಪ್ರಕ್ರಿಯೆ ಆರಂಭವಾಗಿಲ್ಲ.. ಅದಾಗಲೇ ವಿವಾದದ ಕಿಡಿ ಹತ್ತಿಕೊಂಡಿದೆ.
ವಿಶ್ವಕಪ್ನಿಂದ ಕೊಹ್ಲಿಗೆ ಕೊಕ್ ಕೊಡಲು BCCI ಚಿಂತನೆ
ವೆಸ್ಟ್ ಇಂಡೀಸ್ ಹಾಗೂ ಅಮೆರಿಕಾದ ಪಿಚ್ಗಳು ಸ್ಲೋ.. ಇಲ್ಲಿ ಬ್ಯಾಟಿಂಗ್ ನಡೆಸೋದು ಕೊಹ್ಲಿಗೆ ಕಷ್ಟ ಅನ್ನೋ ಕಾರಣಕ್ಕೆ ವಿರಾಟ್ರನ್ನ ವಿಶ್ವಕಪ್ ತಂಡದಿಂದ ಡ್ರಾಪ್ ಮಾಡಲು ಬಿಸಿಸಿಐ ವಲಯದಲ್ಲಿ ಚಿಂತನೆ ನಡೆದಿದೆ. ಈ ಸುದ್ದಿ ಕ್ರಿಕೆಟ್ ವಲಯದಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದ್ದು, ಕೊಹ್ಲಿ ಫ್ಯಾನ್ಸ್ ರೊಚ್ಚಿಗೆದ್ದಿದ್ದಾರೆ. ಬಿಸಿಸಿಐ ಬಾಸ್ಗಳು, ಸೆಲೆಕ್ಟರ್ಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.
2 ವಿಡಿಯೋ ಪೋಸ್ಟ್ ಮಾಡಿ ಬಾಸ್ಗಳನ್ನ ಜಾಡಿಸಿದ ಫ್ಯಾನ್ಸ್
ಕಳೆದ ಟಿ20 ವಿಶ್ವಕಪ್ ಪಂದ್ಯದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕೆಚ್ಚೆದೆಯ ಹೋರಾಟ ನಡೆಸಿ ಅಮೋಘ ಇನ್ನಿಂಗ್ಸ್ ಕಟ್ಟಿದ್ದ ವಿರಾಟ್ ಕೊಹ್ಲಿ ತಂಡವನ್ನ ಗೆಲ್ಲಿಸಿದ್ರು. ಈ ಇನ್ನಿಂಗ್ಸ್ನಲ್ಲಿ ಒತ್ತಡದ ನಡುವೆ ಹ್ಯಾರೀಸ್ ರೌಫ್ ಬೌಲಿಂಗ್ನಲ್ಲಿ ಸಖತ್ ಸ್ಟ್ರೇಟ್ ಸಿಕ್ಸರ್ ಬಾರಿಸಿದ್ರು. ಐಸಿಸಿ ಕೂಡ ಇದನ್ನ ಶಾಟ್ ಆಫ್ ದ ಸೆಂಚುರಿ ಎಂದು ಕರೆದಿತ್ತು. ಆ ವಿಡಿಯೋವನ್ನ ಪೋಸ್ಟ್ ಮಾಡ್ತಿರೋ ಫ್ಯಾನ್ಸ್ ಇದು ಕೊಹ್ಲಿಯ ತಾಕತ್ತು ಎಂದು ಹೇಳ್ತಿದ್ದಾರೆ.
ಹಲ್ಚಲ್ ಎಬ್ಬಿಸಿದ ಅಫ್ಘನ್ ವಿರುದ್ಧದ ಸ್ಟ್ರೇಟ್ ಹಿಟ್.!
ಟಿ20 ವಿಶ್ವಕಪ್ ಬಳಿಕ ಚುಟುಕು ಫಾರ್ಮೆಟ್ನಿಂದ ಕೊಹ್ಲಿಯನ್ನ ದೂರ ಇಡಲಾಗಿತ್ತು. ಈ ವರ್ಷದ ಆರಂಭದಲ್ಲಿ ನಡೆದ ಅಫ್ಘಾನಿಸ್ತಾನ ಎದುರಿನ ಟಿ20 ಸರಣಿಗೆ ಕಮ್ಬ್ಯಾಕ್ ಮಾಡಿದ್ರು. ಕಮ್ಬ್ಯಾಕ್ ಸರಣಿಯಲ್ಲಿ ನವಿನ್ ಉಲ್ ಹಕ್ ಬೌಲಿಂಗ್ನಲ್ಲಿ ಅದ್ಧೂರಿಯಾದ ಸ್ಟ್ರೇಟ್ ಹಿಟ್ ಬಾರಿಸಿ ಸಿಕ್ಸರ್ ಸಿಡಿಸಿದ್ರು. ಆ ವಿಡಿಯೋ ಕೂಡ ಟ್ರೆಂಡಿಂಗ್ನಲ್ಲಿದೆ.
ವಿರಾಟ್ ಕೊಹ್ಲಿ ಬೆಂಬಲಕ್ಕೆ ನಿಂತ ಕನ್ನಡಿಗ ಕುಂಬ್ಳೆ
ಅಭಿಮಾನಿಗಳು ಮಾತ್ರವಲ್ಲ.. ಮಾಜಿ ಕ್ರಿಕೆಟಿಗ, ಟೀಮ್ ಇಂಡಿಯಾ ಮಾಜಿ ಕೋಚ್, ದಿಗ್ಗಜ ಅನಿಲ್ ಕುಂಬ್ಳೆ ಕೂಡ ಕೊಹ್ಲಿಯನ್ನ ಬ್ಯಾಕ್ ಮಾಡಿದ್ದಾರೆ. ಕೊಹ್ಲಿ ತಂಡದ ಎನರ್ಜಿಯನ್ನ ಹೆಚ್ಚಿಸ್ತಾರೆ. ಹೀಗಾಗಿ ಡ್ರಾಪ್ ಮಾಡೋದು ತಪ್ಪು ಎಂಬರ್ಥದ ಹೇಳಿಕೆ ನೀಡಿದ್ದಾರೆ.
ಅತ್ಯುತ್ತಮ ಪರ್ಫಾಮೆನ್ಸ್’
ನಾನು ಕೊಹ್ಲಿಯನ್ನ ಆರ್ಸಿಬಿಯಲ್ಲಿದ್ದಾಗಿನಿಂದ ನೋಡಿದ್ದೇನೆ. ಅಲ್ಲಿಂದಲೇ ಕೊಹ್ಲಿಯ T20 ಜರ್ನಿ ಆರಂಭವಾಗಿದ್ದು. T20ಯಲ್ಲಿ ಭಾರತದ ಪರ ಸ್ಥಿರವಾಗಿ ಕೆಲ ವರ್ಷಗಳಿಂದ ಅತ್ಯುತ್ತಮ ಪರ್ಫಾಮೆನ್ಸ್ ನೀಡಿದ್ದಾರೆ. ಅವರಿಂದಾಗಿ ಅನ್ಫೀಲ್ಡ್ನಲ್ಲಿ ತಂಡಕ್ಕೆ ಬರುವ ಅಗ್ರೆಶನ್ ಹಾಗೂ ಆ್ಯಟಿಟ್ಯೂಡ್ ಗೆಲುವಿಗೆ ಸಹಾಯ ಮಾಡುತ್ತದೆ -ಅನಿಲ್ ಕುಂಬ್ಳೆ, ಮಾಜಿ ಕ್ರಿಕೆಟಿಗ
ಒಟ್ಟಿನಲ್ಲಿ, ಐಪಿಎಲ್ಗೂ ಮುನ್ನ ಕೊಹ್ಲಿಯನ್ನ ಟಿ20 ವಿಶ್ವಕಪ್ ತಂಡದಿಂದ ಹೊರಗಿಡಲು ಬಿಸಿಸಿಐ ನಿರ್ಧರಿಸಿರೋದು ವಿರಾಟ್ ಸಾಮರ್ಥ್ಯಕ್ಕೆ ಸವಾಲ್ ಎಸೆದಂತಿದೆ. ಈ ಸವಾಲ್ಗೆ ಐಪಿಎಲ್ನಲ್ಲಿ ಕೊಹ್ಲಿ ಬ್ಯಾಟ್ನಿಂದ ಉತ್ತರಿಸ್ತಾರಾ.? ಕಾದು ನೋಡೋಣ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್