newsfirstkannada.com

ಕ್ರಿಕೆಟಿಗನಾಗದಿದ್ದರೂ ಏನಂತೆ… ತಂದೆಯ ಹಾದಿಯಲ್ಲೇ ನಡೆಯುತ್ತಿದ್ದಾನೆ ಅನಿಲ್​ ಕುಂಬ್ಳೆ ಮಗ!

Share :

Published September 3, 2024 at 7:37am

    ಅನಿಲ್​ ಕುಂಬ್ಳೆ ಮಗ ಯಾರು ಗೊತ್ತಾ? ಏನು ಮಾಡ್ತಿದ್ದಾನೆ ಈತ?

    ಮಯಾಸ್​​​ ಕುಂಬ್ಳೆ ಮಾಡಿರುವ ಸಾಧನೆ ಏನು ಗೊತ್ತಾ?

    ಮಗನ ಕನಸಿಗೆ ಪ್ರೋತ್ಸಾಹ ನೀಡುತ್ತಿರೋ ಅನಿಲ್​ ಕುಂಬ್ಳೆ

ತಂದೆಯ ಕ್ರಿಕೆಟ್​​ ಸಾಧನೆಯನ್ನು ನೋಡಿ ಮಕ್ಕಳು ಅದೇ ದಾರಿ ಹಿಡಿದ ಅನೇಕ ಉದಾಹರಣೆಗಳು ಭಾರತದಲ್ಲಿವೆ. ಸಚಿನ್​ ತೆಂಡೂಲ್ಕರ್​ ಮಗ ಅರ್ಜುನ್​ ತೆಂಡೂಲ್ಕರ್​, ರಾಹುಲ್​ ದ್ರಾವಿಡ್​ ಮಗ ಸಮಿತ್​ ದ್ರಾವಿಡ್​​, ಅತ್ತ ವಿರೇಂದ್ರ ಸೆಹ್ವಾಗ್​ ಮಗ ಕೂಡ ಕ್ರಿಕೆಟ್​​ ಆಡುತ್ತಿದ್ದು, ಇವರೆಲ್ಲರು ಉದಾಹರಣೆಯಾಗಿ ಕಾಣುತ್ತಿದ್ದಾರೆ. ಆದರೆ ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಅನುಭವಿ ಸ್ಪಿನ್ನರ್​ ಅನಿಲ್​ ಕುಂಬ್ಳೆ ವಿಚಾರದಲ್ಲಿ ಮಾತ್ರ ಹಾಗಲ್ಲ. ಕುಂಬ್ಳೆ ಪುತ್ರ ಕ್ರಿಕೆಟಿಗನಾಗದಿದ್ದರೂ ತಂದೆಯ ಹಾದಿಯಲ್ಲೇ ನಡೆಯುತ್ತಿದ್ದಾನೆ. ಈ ಕುರಿತಾಗಿ ಕುತೂಹಲದ ಮಾಹಿತಿ ಇಲ್ಲಿದೆ.

ಅನಿಲ್​ ಕುಂಬ್ಳೆ ಮಗ ಮಯಾಸ್​​​ ಕುಂಬ್ಳೆ ವನ್ಯಜೀವಿ ಛಾಯಾಗ್ರಾಹಕ. ತಂದೆಯಂತೆಯೇ ಆತನಿಗೂ ಫೋಟೋಗ್ರಫಿ ಎಂದರೆ ಬಲು ಇಷ್ಟ. ಅನಿಲ್​ ಕುಂಬ್ಳೆ ಪಂದ್ಯದ ಸಮಯದಲ್ಲಿ ಕ್ಯಾಮೆರಾ ಕೊಂಡೊಯ್ಯುತ್ತಿದ್ದರು. ಬಿಡುಬಿದ್ದಾಗ ಫೋಟೋ ಕ್ಲಿಕ್ಕಿಸುತ್ತಿದ್ದರು. ಇದೀಗ ಮಗ ಕೂಡ ಅದೇ ದಾರಿಯಲ್ಲಿದ್ದಾನೆ.

ಇದನ್ನೂ ಓದಿ: KL ರಾಹುಲ್​​, ಕರುಣ್​​ ನಾಯರ್​ ಅಲ್ಲ; ಆರ್​​​ಸಿಬಿಗೆ ಮತ್ತೋರ್ವ ಸ್ಟಾರ್ ಕನ್ನಡಿಗ ಎಂಟ್ರಿ!

ಅನಿಲ್​ ಕುಂಬ್ಳೆ ಕ್ರಿಕೆಟ್​ ಪಂದ್ಯದ ಸಮಯದಲ್ಲಿ ತಮ್ಮ ಮಗನನ್ನು ಕೊಂಡೊಯ್ಯುತ್ತಿದ್ದರು. ಆದರೆ ತಂದೆ ಕ್ರಿಕೆಟಗನಾದರು ಮಗನ ಒಲವು ಮಾತ್ರ ಬೇರೆಡೆ ಸೆಳೆಯಿತು. ಸದ್ಯ ಆತನ ಕನಸಿಗೆ ಕುಂಬ್ಳೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಇದನ್ನೂ ಓದಿ: ರೋಹಿತ್​ ಬೆನ್ನಲ್ಲೇ ಸ್ಟಾರ್​ ಆಟಗಾರನಿಗೆ ಬಿಗ್​ ಶಾಕ್​ ಕೊಟ್ಟ ಗಂಭೀರ್​​; ಅಂಥದ್ದೇನಾಯ್ತು?

ಅಂದಹಾಗೆಯೇ ಕುಂಬ್ಳೆಗೆ ಬಾಲ್ಯದಿಂದಲೂ ಛಾಯಾಗ್ರಹಣದ ಮೇಲೆ ಒಲವು ಇದ್ದಂತೆ. ಕೊನೆಗೂ ಮಗನಿಗೂ ಆ ಕಲೆ ಇಷ್ಟವಾಯಿತು. ಸದ್ಯ ಮಯಾಸ್​​ ಪೂರ್ಣ ಸಮಯದ ಫೋಟೋಗ್ರಾಫರ್​ ಆಗಿದ್ದಾರೆ. ಜೊತೆಗೆ ಲೇಖನಗಳನ್ನು ಬರೆಯುತ್ತಿದ್ದಾರಂತೆ. ‘ಸಫಾರಿ ಸಾಗಾ; ವೈಲ್ಡ್​​ ಎನ್ಕೌಂಟರ್ಸ್​​ ಆಫ್​ ಎ ಯಂಗ್​​ ಫೋಟೋಗ್ರಾಫರ್​’ ಎಂಬ ಪುಸ್ತಕವನ್ನು ಅವರು ಬರೆದಿದ್ದಾರೆ. 2022ರಲ್ಲಿ ಪುಸ್ತಕವನ್ನು ರಿಲೀಸ್​ ಮಾಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕ್ರಿಕೆಟಿಗನಾಗದಿದ್ದರೂ ಏನಂತೆ… ತಂದೆಯ ಹಾದಿಯಲ್ಲೇ ನಡೆಯುತ್ತಿದ್ದಾನೆ ಅನಿಲ್​ ಕುಂಬ್ಳೆ ಮಗ!

https://newsfirstlive.com/wp-content/uploads/2024/09/Anil-Kumble.jpg

Load More