Advertisment

‘ಜಯಲಲಿತಾ ಶ್ರೇಷ್ಠ ಹಿಂದುತ್ವವಾದಿ ನಾಯಕಿ’ ಅಣ್ಣಾಮಲೈ ಹೇಳಿಕೆಗೆ ಶುರುವಾಗಿದೆ ದೊಡ್ಡ ಚರ್ಚೆ.. ಏನಂದ್ರು ಶಶಿಕಲಾ?

author-image
AS Harshith
Updated On
ವಿಶ್ವಕಪ್‌ ಪಾಕಿಸ್ತಾನದ ಪಂದ್ಯದಲ್ಲಿ ಭಾರತದ ತ್ರಿವರ್ಣ ಧ್ವಜಕ್ಕೆ ಎಂಟ್ರಿ ಇಲ್ವಾ?; ಚೆನ್ನೈ ಕ್ರೀಡಾಂಗಣದಲ್ಲಿ ಆಗಿದ್ದೇನು?
Advertisment
  • ಅಮ್ಮಾ ಆ ಸಿದ್ಧಾಂತದಲ್ಲಿ ತಮ್ಮ ಜೀವನ ನಡೆಸಿದ್ರು
  • MGR ತೋರಿಸಿದ ಹಾದಿಯಲ್ಲಿ ನಡೆದ ನಿಜವಾದ ದ್ರಾವಿಡ ನಾಯಕಿ
  • ಹಿಂದೂ, ಕ್ರೈಸ್ತ, ಮುಸ್ಲಿಂ, ಎಲ್ಲಾ ಸಮುದಾಯದವರೂ ಒಪ್ಪಿದ ನಾಯಕಿ

ದಿವಂಗತ ಜಯಲಲಿತಾ. ತಮಿಳುನಾಡು ರಾಜಕಾರಣದಲ್ಲಿ ತಮ್ಮದೇ ಆದ ಅಧ್ಯಾಯ ಬರೆದವರು. ಅಮ್ಮಾ ಆಗಿ ಸುಧೀರ್ಘ ಅವಧಿವರೆಗೆ ಆಳಿದ ಸಾಧಕಿ. ತಮಿಳಿಗರ ಮನದಲ್ಲಿ ಅಚ್ಚಾಗಿ ಉಳಿದ ನಾಯಕಿ. ಮತ್ತೆ ಈಗ ಲೋಕಸಭಾ ಚುನಾವಣೆ ಹೊತ್ತಲ್ಲಿ ಜಯಲಲಿತಾ ಹೆಸರು ಮುನ್ನೆಲೆಗೆ ಬಂದಿದೆ. ದೊಡ್ಡ ಚರ್ಚೆಯೂ ಶುರುವಾಗಿದೆ. ಅದಕ್ಕೆ ಕಾರಣ ಅಣ್ಣಾಮಲೈ ಆಡಿರೋ ಮಾತು.

Advertisment

ಜಯಲಲಿತಾ ಬಗ್ಗೆ ಅಣ್ಣಾಮಲೈ ಆಡಿರೋ ಇವೇ ಮಾತುಗಳು, ತಮಿಳುನಾಡಲ್ಲಿ ದೊಡ್ಡ ಚರ್ಚೆಯ ಚಂಡಮಾರುತವನ್ನ ಎಬ್ಬಿಸಿದೆ. ವಿಪಕ್ಷ ನಾಯಕರಿಂದ ಅತಿವೇಗದ ವಿರೋಧದ ಗಾಳಿ ಬೀಸೋದಕ್ಕೆ ಶುರುವಾಗಿದೆ. ರಾಜಕೀಯ ಹವಮಾನ ವೈಪರಿತ್ಯಕ್ಕೆ ದಾರಿ ಮಾಡಿಕೊಟ್ಟಿದೆ.

ಅಣ್ಣಾಮಲೈ ಆಡಿದ ಮಾತಿಂದ ಹೊತ್ತಿಕೊಳ್ತು ರಾಜಕೀಯ ಕಿಡಿ

ಪ್ರಾಬಲ್ಯವೇ ಇಲ್ಲದ ತಮಿಳರ ನೆಲದಲ್ಲಿ ಬಿಜೆಪಿಗೆ ಬೇಟೆಗಾರನಂತೆ ಕಾಣ್ತಿರೋ ಅಣ್ಣಾಮಲೈ ಜಯಲಲಿತಾ ಬಗ್ಗೆ ಮಾತಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತಾಡಿದ ಅಣ್ಣಾಮಲೈ, ಜಯಲಲಿತಾ ತಮಿಳುನಾಡಿನ ಎಲ್ಲರಿಗಿಂತಲೂ ಶ್ರೇಷ್ಠ ಹಿಂದುತ್ವವಾದಿ ನಾಯಕಿ ಆಗಿದ್ದರು ಎಂದಿದ್ದಾರೆ. ಜಯಲಲಿತಾ ನಿಧನರಾದ ನಂತರ ತಮಿಳುನಾಡಿನಲ್ಲಿ ಸೃಷ್ಟಿಯಾಗಿರುವ ಖಾಲಿ ಸ್ಥಳವನ್ನು ತುಂಬಲು ಬಿಜೆಪಿಗೆ ಹೆಚ್ಚಿನ ಅವಕಾಶವಿದೆ ಅನ್ನೋ ಮೂಲಕ ನೇರವಾಗಿ ಅಮ್ಮಾ ಅಭಿಮಾನದ ಮತಬುಟ್ಟಿಗೆ ಕೈ ಹಾಕಿದ್ರು.

Advertisment

ಜಯಲಲಿತಾ ಅವರು ಬದುಕಿದ್ದವರೆಗೂ, ತಮಿಳುನಾಡಿನ ಎಲ್ಲರಿಗಿಂತಲೂ ಶ್ರೇಷ್ಠ ಹಿಂದುತ್ವದ ಅಥವಾ ಹಿಂದೂ ನಾಯಕಿಯಾಗಿದ್ದರು. ಬಿಜೆಪಿ ಒಂದು ಪಕ್ಷದಂತೆ ನೋಡಿದಾಗ ಹಾಗೂ ಜಯಲಲಿತಾರನ್ನ ಓರ್ವ ನಾಯಕಿಯಾಗಿ ನೋಡಿದಾಗ ಒಂದಥರನಾಗಿತ್ತು. 2014ರ ಮೊದಲು ಹಿಂದೂ ಮತದಾರನ ಆಯ್ಕೆ ಜಯಲಲಿತಾ ಆಗಿತ್ತು. ಆಮೇಲೆ ಬಿಜೆಪಿಯಾಗಿತ್ತು. ಯಾಕಂದ್ರೆ ಜಯಲಲಿತಾ ಅವರು ತಮ್ಮ ಹಿಂದೂ ಗುರುತನ್ನು ಬಹಿರಂಗವಾಗಿ ತೋರಿಸಿಕೊಂಡಿದ್ದರು. ಬಿಜೆಪಿ ನಾಯಕರನ್ನು ಹೊರತುಪಡಿಸಿ ರಾಮಮಂದಿರ ಬಗ್ಗೆ ಮಾತಾಡಿದ ದೇಶದ ಮೊದಲ ರಾಜಕಾರಣಿ. ನೀವು ಅಯೋಧ್ಯೆಯಲ್ಲಿ ರಾಮಮಂದಿರ ಮಾಡದಿದ್ರೆ ನಾವು ಮಾಡ್ತೀವಿ ಎಂದಿದ್ರು. 2002-03ರಲ್ಲಿ ಜಯಲಲಿತಾ ತಮಿಳುನಾಡಿನಲ್ಲಿ ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತಂದಿದ್ರು.

ಯಾವಾಗ ಅಣ್ಣಾಮಲ್ಲೈ ಇಂಥದ್ದೊಂದು ಹೇಳಿಕೆ ನೀಡಿದ್ರೋ, ರಾಜಕೀಯ ಚಟಪಟ ಶುರುವಾಗಿತ್ತು. ಒನ್ಸ್​ಮೋರ್ ಒನ್ಸ್​ ಮೋರ್ ಎಂಬಂತೆ ಕೌಂಟರ್ ಮಾತುಗಳು ಕೇಸರಿ ಕಲಿ ವಿರುದ್ಧ ತಿರುಗಿಬಿದ್ದಿತ್ತು. ಅದರಲ್ಲಿ ಮುಂಚೂಣಿಯಲ್ಲಿದಿದ್ದು, ಜಯಲಲಿತಾ ಆಪ್ತೆ ವಿಕೆ ಶಶಿಕಲಾ. ಇದೆಲ್ಲಾ ಅಣ್ಣಾಮಲ್ಲೈ ಅಜ್ಞಾನ ಅಂತಾ ಕೋಪದ ಒಗ್ಗರಣೆ ಹಾಕಿದ್ರು.

ಅಮ್ಮಾ, ಜಾತಿ, ಧರ್ಮದ ಅಡೆತಡೆ ಮೆಟ್ಟಿ ನಿಂತ ಮಹಾನ್ ನಾಯಕಿ

ಅಮ್ಮಾ ಹಿಂದುತ್ವವಾದಿ ಅನ್ನೋ ಅಣ್ಣಾಮಲೈ ಹೇಳಿಕೆಯನ್ನು ಜಯಲಲಿತಾ ಆಪ್ತೆ ಶಶಿಕಲಾ ತಳ್ಳಿಹಾಕಿದ್ದಾರೆ. ಅಣ್ಣಾಮಲೈ ಹೇಳಿಕೆಗಳು ಜಯಲಲಿತಾ ಬಗ್ಗೆ ಇರೋ ಅಜ್ಞಾನ, ತಪ್ಪು ತಿಳುವಳಿಕೆಯನ್ನ ತೋರಿಸುತ್ತೆ ಅಂತಾ ಕಿಡಿಕಾರಿದ್ದಾರೆ. ಜಯಲಲಿತಾ ತಮ್ಮ ಕೊನೆಯ ಉಸಿರು ಇರೋವರೆಗೂ ಎಂಜಿಆರ್ ತೋರಿಸಿದ ಹಾದಿಯಲ್ಲಿ ನಡೆದ ನಿಜವಾದ ದ್ರಾವಿಡ ನಾಯಕಿಯಾಗಿದ್ರು. ಹಿಂದೂ, ಕ್ರೈಸ್ತ, ಮುಸ್ಲಿಂ ಹೀಗೆ ಎಲ್ಲ ಸಮುದಾಯದವರೂ ಒಪ್ಪಿದ ನಾಯಕಿಯಾಗಿದ್ದರು ಅಂತಾ ಶಶಿಕಲಾ ಹೇಳಿದ್ದಾರೆ. ಅಮ್ಮಾ, ಜಾತಿ, ಧರ್ಮದ ಅಡೆತಡೆಗಳನ್ನು ಮೆಟ್ಟಿ ನಿಂತ ಮಹಾನ್ ನಾಯಕಿ, ಒಂದು ಧರ್ಮಕ್ಕೆ ಸೀಮಿತರಾದವರಲ್ಲ ಅಂತಾ ಶಶಿಕಲಾ ತಿರುಗೇಟು ನೀಡಿದ್ದಾರೆ. ಅಣ್ಣಾಮಲೈ ಹೇಳಿಕೆಗೆ ಎಐಎಡಿಎಂಕೆ ಕೂಡ ಆಕ್ಷೇಪ ವ್ಯಕ್ತಪಡಿಸಿದೆ. ದೇವರು ಒಬ್ಬನೇ ಅನ್ನೋದು ಎಐಎಡಿಎಂಕೆಯ ಸಿದ್ಧಾಂತಗಳಲ್ಲಿ ಒಂದು. ನಮ್ಮ ನಾಯಕಿ ಅಮ್ಮಾ ಆ ಸಿದ್ಧಾಂತದ ಆಧಾರದ ಮೇಲೆ ತಮ್ಮ ಜೀವನ ನಡೆಸಿದ್ರು ಅಂತಾ ಎಐಎಡಿಎಂಕೆ ಹೇಳಿದೆ. ಈ ಮೂಲಕ ಅಣ್ಣಾಮಲೈ ಮಾತಿಗೆ ವಿರೋಧದ ಬಾವುಟ ಹಾರಿಸಿದೆ.

Advertisment

ಇದನ್ನೂ ಓದಿ: ಭಾರೀ ಆತಂಕ ಸೃಷ್ಟಿಸಿದ ‘ರೆಮಲ್’ ಸೈಕ್ಲೋನ್.. ರಾಜ್ಯಕ್ಕೂ ತಟ್ಟಲಿದೆಯಾ ರಣ‘ಚಂಡಿ’ ಎಫೆಕ್ಟ್​?

ತಮಿಳುನಾಡಲ್ಲಿ ಜಯಲಲಿತಾ ವಿಚಾರವಾಗಿ ಗುಡುಗು-ಸಿಡಿಲು ಕಂಡು ಬರ್ತಿದೆ. ಅಣ್ಣಾಮಲೈ ಹಿಂದೂ ಜಪಕ್ಕೆ, ಅಮ್ಮಾ ಬಳಗ ಹಿಂದೆ ಮುಂದೆ ನೋಡದೇ ಕೌಂಟರ್ ಕೊಡ್ತಿದೆ. ರಣರಣ ರಾಜಕೀಯವೂ ಶುರುವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment